ಜಿಲ್ಲಾಮಟ್ಟದ ಅನುಷ್ಠಾನದ ಸದಸ್ಯರಾಗಿ ಕೆ .ಸಿ ಪರುಶುರಾಮ್ ಅಂಗೂರ್ ಆಯ್ಕೆ
ಹೂವಿನಹಡಗಲಿ .26- ವಿಜಯನಗರ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿಯ ಸದಸ್ಯನನ್ನಾಗಿ ಕೆ ಸಿ ಪರುಶುರಾಮ್ ಅಂಗೂರ್ ಆಯ್ಕೆ ಮಾಡಲಾಗಿದೆ. 2024-2025 ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅರೇ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯನನ್ನಾಗಿ ಅಂಗೂರು ಗ್ರಾಮದ ಸಮಾಜ ಸೇವಕ ಹಾಗೂ ಜಾನಪದ ಕಲಾವಿದ ಕೆಸಿ ಪರಶುರಾಮ್ ಇವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.