ಕೆ.ಎಫ್.ಪಾಟೀಲ್ ರವರ 120ನೇ ಜನ್ಮದಿನೋತ್ಸವ
ರಾಣೇಬೆನ್ನೂರು 4 : ಹೆಣ್ಣೊಂದು ಶಿಕ್ಷಣ ಕಲಿತರೇ, ಕುಟುಂಬದಲ್ಲಿಮತ್ತು ಸಮಾಜದಲ್ಲಿ ಶಾಲೆಯೊಂದು ತೆರೆದಂತೆ ಎನ್ನುವ ಗಾದೆ ಮಾತಿನಂತೆ ಅಂದಿನ ಪೂರ್ಣಪ್ರಜ್ಞರಾದ ಲಿಂ, ಕೆ. ಎಫ್ ಪಾಟೀಲ್ ರವರು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಮಹಾನತ್ಯಾಗಿ ಅವರಾಗಿದ್ದರು ಎಂದು ಕೆ. ಎಲ್. ಈ ಶಿಕ್ಷಣ ಸಂಸ್ಥೆಯ, ಸ್ತಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿ.ಪಿ.ಲಿಂಗನಗೌಡ್ರ ಹೇಳಿದರು. ಅವರು, ರಾಜರಾಜೇಶ್ವರಿ ಕಾಲೇಜು ಭವನದಲ್ಲಿ ಆಯೋಜಿಸಲಾಗಿದ್ದ, ಶಿಕ್ಷಣ ಸಂತ ಲಿಂ,ಕೆ.ಎಫ್.ಪಾಟಿಲ್ ಜೀ ಅವರ 120ನೇ ಜಯಂತೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿ ಅಂದು ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸುವುದೇ ಒಂದು ದೊಡ್ಡ ಸವಾಲಾಗಿತ್ತು ಅಂತಹ ಮಡಿವಂತಿಕೆ ಸಂದರ್ಭದಲ್ಲಿ ಕೆ.ಎಫ್. ಪಾಟೀಲ್ ಅವರು ತಮ್ಮ ಬಹು ದೂರ ದೃಷ್ಟಿಯಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ ಮಹಾನ್ ತ್ಯಾಗಿ ಮತ್ತು ಯೋಗಿ.
ಪಾಟೀಲರು ಇಂದು ನಮ್ಮ ಮಧ್ಯೆ ಭೌತಿಕವಾಗಿ ಇಲ್ಲದೆ ಇದ್ದರೂ ಸಹ ಅವರು ಅಂದು ನೆಟ್ಟ ಈ ಬೃಹತ್ ಶಿಕ್ಷಣ ಸಂಸ್ಥೆಯ ಆಲದ ಮರದ ಮೂಲಕ, ಸದಾಕಾಲವೂ ಇಲ್ಲಿನ ಶಿಕ್ಷಣ ಪರಿಸರದಲ್ಲಿ ಇದ್ದಾರೆ. ಎಂದರು. ಕಾರ್ಯಕ್ರಮದಲ್ಲಿ ಸ್ಥಳೀಯ ಸದಸ್ಯರಾದ ವೀರಣ್ಣ ಅಂಗಡಿ, ಬಸವರಾಜ ಪಟ್ಟಣಶೆಟ್ಟಿ, ಜಂಟಿ ಕಾರ್ಯದರ್ಶಿ ಆರಿ್ಜ.ಹುಲ್ಮನಿ, ಜಯಣ್ಣ ಜಂಬಗಿ, ಕಾಲೇಜು ಪ್ರಾಚಾರ್ಯ ನಾರಾಯಣ ನಾಯಕ್ ಎ,ಸಂಯೋಜಕಿ ಶೈಲಾ ಎನ್. ಹಿರೇ ನಿಂಗಪ್ಪನವರ, ಪ.ಪೋ. ಕಾಲೇಜು ಪ್ರಾಚಾರ್ಯ ಸುರೇಖಾ ಕಟ್ಟಿ, ಉಪ ಪ್ರಾಚಾರ್ಯ ಪ್ರಹ್ಲಾದ ಪಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಸುಧಾ ಕೋಟಿಹಾಳ, ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು, ಪ್ರಾಧ್ಯಾಪಕರು ಶಿಕ್ಷಕರು ಉಪಸ್ಥಿತರಿದ್ದರು. ಆದರ್ಶ ಹುಲ್ಲತಿ ಪ್ರಾರ್ಥಿಸಿದರು. ಬಿಬಿಎ ಪ್ರಾಚಾರ್ಯ ಐಶ್ವರ್ಯ ಶೆಟ್ಟರ ಸ್ವಾಗತಿಸಿದರು. ಪ್ರೊ,ಅಶ್ವಿನಿ ಕುಮಾರ ನಿರೂಪಿಸಿ, ಪ್ರೊ, ಪೂಜಾ ನೆಲೂಗಲ್ಲ ವಂದಿಸಿದರು.