ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ರಾಜೇಶ, ಉಪಾಧ್ಯಕ್ಷರಾಗಿ ಗುರುರಾಜ ಆಯ್ಕೆ
ಕಂಪ್ಲಿ 03 : ತಾಲೂಕು ಸಮೀಪದ ಬುಕ್ಕಸಾಗರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ ಹರಿಜನ ಗುರುರಾಜ ಆಯ್ಕೆಗೊಂಡಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಅನ್ವರ್ ಅಲಿ ಘೋಷಿಸಿದರು. ಇಲ್ಲಿನ ಸಂಘದ ಆವರಣದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ನಿರ್ದೇಶಕರು ಕೈ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿದರು. ಕೆ.ರಾಜೇಶ್ ಅವರು 10 ಮತಗಳೊಂದಿಗೆ ಪ್ರತಿಸ್ಪರ್ಧಿ ಖಾಜಾಸಾಬ್(2) ವಿರುದ್ಧ ಗೆಲುವು ಸಾಧಿಸಿ, ಅಧ್ಯಕ್ಷರಾಗಿ ಆಯ್ಕೆಗೊಂಡರು. ಹಾಗೂ ಉಪಾಧ್ಯಕ್ಷ ಗುರುರಾಜ ಅವರ 10 ಮತದೊಂದಿಗೆ ಪದ್ಮಾವತಿ(2) ವಿರುದ್ಧ ಜಯಶಾಲಿಯಾಗಿ ಹೊರ ಹೊಮ್ಮಿದರು. ಒಟ್ಟಾರೆಯಾಗಿ ಅಧ್ಯಕ್ಷ ಸ್ಥಾನಕ್ಕೆ ಕೆ.ರಾಜೇಶ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುರಾಜ ಅವರು ಆಯ್ಕೆಗೊಂಡರು. ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಲಾರೆ್ಣ ಮಾಡಿ ಗೌರವಿಸಿದರು. ನಂತರ ಎಲ್ಲಾ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ವೇಳೆ ಹೊಸಪೇಟೆ ನಗರದ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಅಮಾಜಿ ಹೇಮಣ್ಣ, ಗ್ರಾಪಂ ಅಧ್ಯಕ್ಷ ಕೆ.ಹನುಮಂತಪ್ಪ, ನಿರ್ದೇಶಕರಾದ ಎಂ.ಸಿದ್ಧಲಿಂಗೇಶ್ವರ, ನಾಯಕರ ವಿರೇಶ, ಖಾಜಾಸಾಬ್, ಎಲ್.ಎಸ್.ರುದ್ರ್ಪ, ಜಿ.ಪದ್ಮಾವತಿ, ಅನ್ನಪೂರ್ಣ, ಕಟ್ಟೆ ಎರ್ರಿಸ್ವಾಮಿ, ಕೆ.ಮಹಮ್ಮದ್ ರಫಿಕ್, ಎ.ಚಂದ್ರಶೇಖರ, ಬಿ.ಸೋಮಶೇಖರ, ಮುಖ್ಯಕಾರ್ಯನಿರ್ವಾಹಕ ಎರಿ್ರಸ್ವಾಮಿ ಕಟ್ಟೆ ಸೇರಿದಂತೆ ಮುಖಂಡರು ಹಾಗೂ ಸಿಬ್ಬಂದಿ ಇದ್ದರು.