ಮೆಣಸಿನಕಾಯಿ ತಾಕುಗಳಿಗೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಅಧಿಕಾರಿಗಳ ಜಂಟಿ ಪರೀಶೀಲನೆ

Joint Inspection of Agricultural Science Center and Horticulture Officers for chillies


ಮೆಣಸಿನಕಾಯಿ ತಾಕುಗಳಿಗೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಅಧಿಕಾರಿಗಳ ಜಂಟಿ ಪರೀಶೀಲನೆ 
ಬಳ್ಳಾರಿ 30:ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕುಗಳಲ್ಲಿ ಮೆಣಸಿನಕಾಯಿ ಬೆಳೆಗೆ ಥ್ರಿಪ್ಸ್‌ ನುಸಿ (ಥ್ರಿಪ್ಸ್‌ ಪಾರ್ವಿಸ್ಪಿನಸ್) ಕೀಟ, ಬೂದಿ ರೋಗ, ಹಣ್ಣು ಕೋಳೆ ರೋಗ, ಮತ್ತು ಎಲೆ ಮುಟುರು ರೋಗ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ಶಾಸ್ತ್ರದ ಹಿರಿಯ ವಿಜ್ಞಾನಿ ಡಾ.ಪಾಲಯ್ಯ, ಕೀಟ ಶಾಸ್ತ್ರಜ್ಞರಾದ ಡಾ.ಆನಂದ ಕುಮಾರ್ ಹಾಗೂ ತೋಟಗಾರಿಕೆ ಇಲಾಖೆಯಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರತ್ನಪ್ರಿಯಾ ಯರಗಲ್ ಮತ್ತು ರೂಪನಗುಡಿ ರೈತ ಸಂಪರ್ಕ ಕೇಂದ್ರ ಪ್ರವೀಣ್ ಕುಮಾರ್ ನಾಯ್ಕ ಒಳಗೊಂಡ ತಂಡವು ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯ ಕಕ್ಕಬೇವಿನಹಳ್ಳಿ, ಶಂಕರಬಂಡೆ, ಇಬ್ರಾಹಿಂಪುರ ಮತ್ತು ರೂಪನಗುಡಿ ಜೊತೆಗೆ ಇತರೆ ಸುತ್ತ ಮುತ್ತ ಹಳ್ಳಿಗಳಿಗೆ ಭೇಟಿ ಕೊಟ್ಟು ಮೆಣಸಿನಕಾಯಿ ಬೆಳೆಯ ರೋಗ ಮತ್ತು ಕೀಟ ಅತೋಟಿಗಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಸಲಹೆ ನೀಡಿದರು.