ಜಿದ್ದಾಜಿದ್ದಿನ ದೇವಲಾಪುರ ಸೊಸೈಟಿ ಚುನಾವಣೆ : 12 ಸ್ಥಾನಗಳಿಗೆ ನಿರ್ದೇಶಕರ ಆಯ್ಕೆ
ಕಂಪ್ಲಿ 30: ತಾಲೂಕಿನ ದೇವಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಜಿದ್ದಾಜಿದ್ದಿನ ಚುನಾವಣೆಗೆ ಸಾಕ್ಷಿಯಾಯಿತು. ಇಲ್ಲಿನ ಸಂಘದ 12 ಸ್ಥಾನಗಳಿಗೆ 25 ಜನ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಚಲಾಯಿಸಿದರು. ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿದರೆ, ಶಾಂತಿಯುತವಾಗಿ ಚುನಾವಣೆ ನಡೆಯಿತು. ಸಂಜೆ 4ರ ನಂತರ ಮತ ಎಣಿಕೆ ಕಾರ್ಯ ನಡೆಯಿತು. ರಾತ್ರಿ 10 ಗಂಟೆಗೆ ಮತ ಎಣಿಕೆ ಮುಕ್ತವಾದ ಹಿನ್ನಲೆ ನಂತರದ ಫಲಿತಾಂಶದಲ್ಲಿ ಗೌಡ್ರು ಸಿದ್ದಪ್ಪ, ಗೊರವರ ಹನುಮಂತಪ್ಪ, ಸಂಗಟಿ ಹನುಮಂತಪ್ಪ, ಗೌಡ್ರು ಷಣ್ಮುಕಪ್ಪ, ರಮೇಶ ಪೂಜಾರಿ, ವಡ್ರು ಮುಕ್ಕಣ್ಣ, ಕೆ.ಮಹಾದೇವಪ್ಪ, ಗೌಡ್ರು ಮಲ್ಲಿಕಾರ್ಜುನ, ಕಾರಿಗನೂರು ಹನುಮಂತಪ್ಪ, ಕುರಿ ವಿಶ್ವನಾಥ, ಗೌಡ್ರು ಮಲ್ಲಮ್ಮ, ಗುಬಾಜಿ ಶಿಲ್ಪಮ್ಮ ಇವರು ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಒಟ್ನಲ್ಲಿ ರಿರ್ಟನಿಂಗ್ ಅಧಿಕಾರಿ ರೇವಣ್ಣ, ಪಿಆರ್‌ಒಗಳಾದ ಹೆಚ್.ಪಿ.ಸೋಮಶೇಖರ, ಬ್ರಹ್ಮಾನಂದ, ಸಿಬ್ಬಂದಿಗಳಾದ ನಾಗರಾಜ, ಬಸವರಾಜ, ಇಮಾಮ್ ಸಾಬ್, ಮಲ್ಲಿಕಾರ್ಜುನ, ವಿರೂಪಾಕ್ಷಿ, ನೇತೃತ್ವದಲ್ಲಿ ಚುನಾವಣೆ ಶಾಂತಿಯುತವಾಗಿ ಜರುಗಿತು. ನಂತರ ನಿರ್ದೇಶಕರ ಗೆಲುವಿನ ಹಿನ್ನಲೆ ಗ್ರಾಮದಲ್ಲಿ ಪಟಾಕಿಗಳ ಹೂಮಳೆಗರೆಯಲಾಯಿತು. ಮತ್ತು ನೂತನ ನಿರ್ದೇಶಕರನ್ನು ಜನರು ತಮಟೆಯೊಂದಿಗೆ ಹೂವಿನ ಮಾಲೆ ಹಾಕಿ, ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಸೊಸೈಟಿ ಮುಖ್ಯಕಾರ್ಯನಿರ್ವಾಹಕ ಕುಮಾರ ಸೇರಿದಂತೆ ಸಿಬ್ಬಂದಿಗಳು ಹಾಗೂ ಕುಡತಿನಿ ಪೊಲೀಸರು ಇದ್ದರು.