ರಾಂಚಿ, ನವೆಂಬರ್ 30 -ಜಾರ್ಖಂಡ್ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ಬಹುತೇಕ ಶಾಂತಿಯುತವಾಗಿ ಮುಗಿದಿದ್ದು, ಶೇ 64 ರಷ್ಟು ಮತದಾನವಾಗಿದೆ.
ಇಂದಿನ ಚುನಾವಣೆಯಲ್ಲಿ ಅರ್ಹ 37.78 ಲಕ್ಷ ಮತದಾರರು ಮತಚಲಾಯಿಸಿದ್ದಾರೆ. ಈ ಹಂತದಲ್ಲಿ 13 ಸ್ಥಾನಗಳಲ್ಲಿ ಮತದಾನ ಮುಕ್ತಾಯಗೊಂಡಿದೆ. 2014 ಚುನಾವಣೆಗೆ ಹೋಲಿಕೆ ಮಾಡಿದರೆ ಈ ಭಾರಿ ತುಸು ಹೆಚ್ಚು ಎಂದರೆ ಶೇ 1.15 ರಷ್ಟುಮತಪ್ರಮಾಣ ಏರಿಕೆಯಾಗಿದೆ.
ಲೋಹಾರ್ಡಾಗಾದಲ್ಲಿ ಶೇಕಡಾ 71.47 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ56.59, ಗುಮ್ಲಾ 67.3, ಬಿಶುನ್‌ಪುರ 69.8, ಲೋಹರ್‌ದಾಗ 71.47,ಮಾನಿಕಾ 62.66, ಲತೇಹರ್ 67.2, ಪಂಕಿ 64.1, ಡಾಲ್ಟೋಂಗಂಜ್ 63.9, ಬಿಶ್ರಾಂಪುರ್ 61.6, ಚಟ್ಟರ್‌ಪುರ 62.3, ಹುಸೇನಾಬಾದ್ 60.9, ಗರ್ಹ್ವಾ 66.04 ಮತ್ತು ಭವನಾಥಪುರ ಶೇ 67.34.ಮತ ಚಲಾವಣೆಯಾಗಿದೆ.
ಚುನಾವಣೆಯ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿನಯ್ ಕುಮಾರ್ ಚೌಬೆ ಕೆಲವು ಸಣ್ಣ ಪುಟ್ಟ ಘಟನೆ ಹೊರತು ಪಡಿಸಿದರೆ ಬಹುತೇಕ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದೆ ಎಂದು ಹೇಳಿದರು.