ದ್ಯಾಮನಗೌಡರ ಜುವೆಲರ್ಸ, ಗೌತಮ ಗೋಲ್ಡನ ಫೈನಾನ್ಸ ಉದ್ಘಾಟನೆ

ಮುನವಳ್ಳಿ 15: ವ್ಯವಹಾರದಲ್ಲಿ ಗುಣಮಟ್ಟ ಹಾಗೂ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡರೆ ವ್ಯಾಪಾರದಲ್ಲಿ ಯಶಸ್ವಿಯಾಗಬಹುದು. ಬೆಂಬಳಗಿ ಹಾಗೂ ಪೋತದಾರ ಅವರನ್ನು ಬಿಟ್ಟರೆ ಲಿಂಗಾಯತರು ಬಂಗಾರದ ವ್ಯಾಪಾರದಲ್ಲಿ ತೊಡಗಿಸಿಕೊಂಡಿರಲಿಲ್ಲ. ಈಗ ದ್ಯಾಮನಗೌಡರ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಬೆಂಬಳಗಿ ಹಾಗೂ ಪೋತದಾರ ಅವರಂತೆ ದ್ಯಾಮನಗೌಡರು ಬಂಗಾರದ ವ್ಯಾಪಾರದಲ್ಲಿ ಹೆಸರು ಗಳಿಸಲಿ ಎಂದು ಬೆಳಗಾವಿ ಡಿ.ಸಿ.ಸಿ.ಬ್ಯಾಂಕ ಅಧ್ಯಕ್ಷ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

    ಅವರು ಡಿ. 14 ರಂದು ಬಿ.ಡಿ.ಸಿ.ಸಿ. ಬ್ಯಾಂಕ ನಿದರ್ೇಶಕ ಪಂಚನಗೌಡ ದ್ಯಾಮನಗೌಡರ ಇವರ ನೂತನ ದ್ಯಾಮನಗೌಡರ ಜುವೆಲರ್ಸ ಹಾಗೂ ಗೌತಮ ಗೋಲ್ಡನ ಫೈನಾನ್ಸ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. 

ದಿವ್ಯ ಸಾನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ವಹಿಸಿ ಮಾತನಾಡುತ್ತ ಬಂಗಾರ ಎಲ್ಲರನ್ನೂ ಮೋಹಕಗೊಳಿಸುವ ಲೋಹವಾಗಿದ್ದು, ಬಂಗಾರವನ್ನು ಆಪದ್ಧನವನ್ನಾಗಿಯೂ ಇಡಬಹುದಾಗಿದೆ ಎಂದರು.

    ಬಿ.ಡಿ.ಸಿ.ಸಿ.ಬ್ಯಾಂಕ ನಿದರ್ೇಶಕ ಪಂಚನಗೌಡ ದ್ಯಾಮನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ ಡಿ.ಸಿ.ಸಿ.ಬ್ಯಾಂಕ ರೈತರಿಗೆ, ವ್ಯಾಪಾರಸ್ಥರಿಗೆ ಸಹಾಯ ಕಲ್ಪಿಸಿದೆ ಅದರಲ್ಲೂ ರಮೇಶ ಕತ್ತಿ ಅವರ ಅಧ್ಯಕ್ಷರಾದ ನಂತರ ಬ್ಯಾಂಕ ಉತ್ತರೋತ್ತರ ಅಭಿವೃದ್ಧಿ ಹೊಂದುತ್ತಿದೆ. ನಾವು ಮಾಡುವ ಎಲ್ಲ ಕೆಲಸ ಕಾರ್ಯಗಳಿಗೆ ಜನತೆಯ, ಶ್ರೀಗಳ ಹಾಗೂ ಹಿರಿಯರ ಆಶೀವರ್ಾದ ಇದ್ದು, ಇನ್ನು ಮುಂದೆಯೂ ಹೀಗೆಯೇ ಮುಂದುವರಿಯಲಿ, ಜನರ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಡುವುದಾಗಿ ಹೇಳಿದರು.

    ಮುರಗೋಡದ ನೀಲಕಂಠ ಸ್ವಾಮೀಜಿ, ಮುನವಳ್ಳಿಯ ಮುರುಘೆಂದ್ರ ಸ್ವಾಮೀಜಿ, ಕಟಕೋಳದ ಸಚ್ಚಿದಾನಂದ ಸ್ವಾಮೀಜಿ, ಬಸಿಡೋಣಿಯ ಗಂಗಾಧರ ಸ್ವಾಮೀಜಿ, ಹೂಲಿಯ ಉಮೇಶ್ವರ ಸ್ವಾಮೀಜಿ, ಗಣಪತಿ ಮಹಾರಾಜರು, ಮಡಿವಾಳಯ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

    ಅಧ್ಯಕ್ಷತೆಯನ್ನು ಶಾಸಕ ಆನಂದ ಮಾಮನಿ ವಹಿಸಿ ಮಾತನಾಡುತ್ತ ಶಿಕ್ಷಣ, ಧಾಮರ್ಿಕ, ಸಹಕಾರ, ರಾಜಕೀಯ ರಂಗಗಳಲ್ಲಿ ದ್ಯಾಮನಗೌಡರ ಕುಟುಂಬ ಮುಂಚೂಣಿಯಲ್ಲಿದ್ದು ಈಗ ಬಂಗಾರದ ವ್ಯಾಪಾರದಿಂದ ಇನ್ನೂ ಹೆಚ್ಚಿನ ಖ್ಯಾತಿ ಗಳಿಸಲಿ ಎಂದರು. 

ಅತಿಥಿಗಳಾಗಿ ರಾಮನಗೌಡ ತಿಪರಾಶಿ, ಮಹಾನಂದ ಮನಗಾಂವಿ, ಶಿವಪ್ಪ ಬೆಳಕೂಡ, ಮಹಾಬಳೇಶ್ವರ ಪುರದಗುಡಿ, ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಉಮೇಶ ಬಾಳಿ, ಗುರು ಮೆಟಗುಡ್ಡ, ವಿಜಯ ಅಮಠೆ, ಸಿ.ಆರ್.ಪಾಟೀಲ, ಚಂದ್ರು ಶ್ಯಾಮರಾಯನವರ, ನಿಂಗನಗೌಡ ಮಲಗೌಡ್ರ, ಎಸ್.ಎಸ್.ಮುಗಳಿ, ಬಸವರಾಜ ಪಾಟೀಲ, ಪಂಚಪ್ಪ ಹನಸಿ, ಬಾಳಪ್ಪ ಹೂಲಿ, ಶಿವಾನಂದ ಹಾಲಬಾಂವಿ, ಸೇರಿದಂತೆ ಇತರರು ಇದ್ದರು. ಬಿ.ಡಿ.ಸಿ.ಸಿ.ಬ್ಯಾಂಕ ನಿದರ್ೇಶಕ ಪಂಚನಗೌಡ ದ್ಯಾಮನಗೌಡರ ಅವರನ್ನು ಶ್ರೀಗಳು ಸನ್ಮಾನಿಸಿದರು. ಅಭಿಮಾನಿ ಬಳಗದ ವತಿಯಿಂದ ಬಸನಗೌಡ ದ್ಯಾಮನಗೌಡರ ದಂಪತಿಗಳನ್ನು ಸನ್ಮಾನಿಸಲಾಯಿತು. ಬಾಳು ಹೊಸಮನಿ, ಭವಾನಿ ಖೊಂದುನಾಯ್ಕ ನಿರೂಪಿಸಿದರು.