ವಾಣಿಜ್ಯ ನಗರದಲ್ಲಿ ಮಹಾಯೋಗಿ ವೇಮನರ ಜಯಂತೋತ್ಸವ

Jayantotsava of Mahayogi Vemana in commercial city

ವಾಣಿಜ್ಯ  ನಗರದಲ್ಲಿ  ಮಹಾಯೋಗಿ ವೇಮನರ ಜಯಂತೋತ್ಸವ

ರಾಣೇಬೆನ್ನೂರು 17 : ಇಲ್ಲಿನ ಪಿ. ಬಿ.ರಸ್ತೆಯ  ವೇಮನ ವಿದ್ಯಾ ವರ್ಧಕ  ಸಂಘದ ಆವರಣದಲ್ಲಿ ಜನವರಿ 19ರಂದು ರವಿವಾರ ಮುಂಜಾನೆ ಹನ್ನೊಂದು ಗಂಟೆಗೆ,  ಮಹಾಯೋಗಿ ವೇಮನ ವಿದ್ಯಾರ್ಥಿಗಳ ಸಂಘ ಹುಬ್ಬಳ್ಳಿ ಧಾರವಾಡ ಮತ್ತು ರಾಣಿಬೆನ್ನೂರು ಹಾವೇರಿ ಜಿಲ್ಲಾ ರೆಡ್ಡಿ ಜನ ಸಂಘ ಆಯೋಗದಲ್ಲಿ ವೇಮನರ 613ನೇ ವಾರ್ಷಿಕ ಜಯಂತೋತ್ಸವ ಧಾರ್ಮಿಕ ಸಮಾರಂಭವು ನಡೆಯಲಿದೆ ಎಂದು ಡಾ. ಮನೋಜ್ ಸಾಹುಕಾರ ಹೇಳಿದರು. ಶುಕ್ರವಾರ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ರಾಣೇಬೆನ್ನೂರಿನ ನಮ್ಮ ವೇಮನರ ಸಂಘಕ್ಕೆ 50 ವರ್ಷಗಳ ಇತಿಹಾಸ ಪರಂಪರೆ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಕೆಯಾಗಿರುವ ಈ ಸಂಘದ  ಅಡಿಯಲ್ಲಿ ಕೆಲವೇ ದಿವಸಗಳ ಅವಧಿಯಲ್ಲಿ ಅತ್ಯಾಧುನಿಕ ಹವಾನಿಯಂತ್ರಿತ ಕಲ್ಯಾಣ ಮಂಟಪವನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು. ಎರೇಹೊಸಳ್ಳಿ ರಡ್ಡಿ ಗುರುಪೀಠದ ಯೋಗಿ ಸಂಸ್ಥಾನ ಮಠದ ವೇಮನಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಮಾಜಿ ಸಚಿವ ಕೆ. ಬಿ. ಕೋಳಿವಾಡ ಅಧ್ಯಕ್ಷತೆ ವಹಿಸುವರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌. ಕೆ. ಪಾಟೀಲ್ ಸಮಾರಂಭ ಉದ್ಘಾಟಿಸುವರು. ರಾಜಕೀಯ ಗಣ್ಯರಾದ ಡಾ. ರಾಮಲಿಂಗಾರಡ್ಡಿ ರುದ್ರ​‍್ಪ ಲಮಾಣಿ, ಪ್ರಕಾಶ್ ಕೋಳಿವಾಡ, ಜಿ. ಟಿ. ಪಾಟೀಲ್, ಬಸವರಾಜ ಶಿವಣ್ಣನವರ, ಯು. ಬಿ. ಬಣಕಾರ, ಎನ್ ಹೆಚ್ ಕೋನರಡ್ಡಿ, ಬಿ. ಆರ್‌.ಯಾವಗಲ್ಲ, ಜಿ.ಎಸ್‌. ಪಾಟೀಲ, ಶ್ರೀನಿವಾಸ್ ಮಾನೆ, ಯಾಸಿರ ಆಹಮ್ಮದ್  ಖಾನ್ ಪಠಾಣ ಮೊದಲಾದವರು ಪಾಲ್ಗೊಳ್ಳುವರು. ಮಾಜಿ ಶಾಸಕ ಡಿ.ಆರ್‌. ಪಾಟೀಲ್ ಅವರು, ಮಹಾಯೋಗಿ ವೇಮನ ಮತ್ತು ಸಂತ ಕನಕದಾಸರು. ಉಪಕುಲಪತಿ ಪ್ರೊಫೆಸರ್ ಡಾ. ತೇಜಸ್ವಿನಿ ಕಟ್ಟಿಮನಿ ವೇಮನ ಗೀತೆ - ಭಾಗ-1 ಶಿಗ್ಗಾವಿ  ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿ ಡಾ, ಟಿ. ಎಂ.ಭಾಸ್ಕರ್  ವೇಮನ ಗೀತೆ - ಭಾಗ-2 ಪುಸ್ತಕ ಬಿಡುಗಡೆಗೊಳಿಸುವರು. ಹಾವೇರಿ ಜಿಲ್ಲಾ ಜನ ಸಂಘದ ಅಧ್ಯಕ್ಷ ಎಂ.ಎಂ. ಮೈದೊರು ಮಹಾಯೋಗಿ ವೇಮನರ ತತ್ವ ಪ್ರಚಾರದಲ್ಲಿ ಕೆ.ಎಚ್‌. ಪಾಟೀಲರ ಪಾತ್ರ ವಿಷಯ ಕುರಿತು ಮಾತನಾಡುವರು. ವಿಶೇಷ ಉಪನ್ಯಾಸಕರಾಗಿ ಹಿರೇಕೆರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ. ಕಾಂತೇಶರಡ್ಡಿ ಗೋಡಿಹಾಳ ಮಾತನಾಡುವರು. ಸಮಾರಂಭದಲ್ಲಿ ನಾಡಿನ ಸಮುದಾಯದ ಅನೇಕ ಗಣ್ಯರು, ವರ್ತಕರು ಕೃಷಿಕರು ಅತಿಥಿಗಳಾಗಿ ಪಾಲ್ಗೊಳ್ಳುವರು.