ಶ್ರೀ ಶಂಕರ ಭಗವತ್ಪಾದರ ಜಯಂತೋತ್ಸವ

ಲೋಕದರ್ಶನ ವರದಿ 

ಮುಧೋಳ 11: ತಾಲೂಕ ಆಡಳಿತ ಹಾಗೂ ಶ್ರೀ ಶಂಕರ ಸೇವಾ ಸಮೀತಿ ಆಶ್ರಯದಲ್ಲಿ ತಹಶೀಲದಾರ ಕಾಯರ್ಾಲಯದಲ್ಲಿ  ಶ್ರೀ ಶಂಕರಾಚಾರ್ಯರರ  ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  

   ಪ್ರಭಾರಿ ತಹಶೀಲದಾರ ಎಂ.ವ್ಹಿ.ಮಠದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ,ಬಳಿಕ ವಲ್ಲಭ ಕವಠೇಕರ ಹಾಗೂ ಮಹಿಳೆಯರಿಂದ ಶ್ರೀ ಶಂಕರರ ಅಷ್ಟೋತ್ತರ ಪಠಣ ಮಾಡಲಾಯಿತು. 

      ನಂತರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಗುರುರಾಜ ಕಟ್ಟಿ , ತಾಲೂಕ ಅಧ್ಯಕ್ಷ ಸೋನಾಪ್ಪಿಕುಲಕರ್ಣಿ ಶಂಕರ ಸಮಿತಿ ಅಧ್ಯಕ್ಷ ಡಾ.ಆನಂದ ಕುಲಕರ್ಣಿಪ್ರಮುಖರಾದ ಉದಯ ಕುಲಕರ್ಣಿ,ಉದಯ ವಾಳ್ವೇಕರ ಸುಬಾಸ ಮನಗೂಳಿ, ಜಿ.ಆರ್.ಜೋಶಿ, ಎಚ್.ಎಂ. ಜೇರೆ, ಆನಂದ ಜೇರೆ, ಆನಂದ ಕುಲಕರ್ಣಿ,ಸುನೀಲ ನಾಯಿಕ, ಗೀರಿಶ ಆನಿಖಿಂಡಿ, ರವಿ ಕುಲಕರ್ಣಿ ,ಪ್ರಮೋದ ಬಾಜಿ, ಜಿ.ಜಿ.ಅಣ್ಣಿಗೇರಿ,ರಮೇಶ ನಿಡೋಣಿ, ವ್ಹಿ.ಕೆ.ದೇಶಪಾಂಡೆ ಮುಂತಾದವರು ಮಾತನಾಡಿ, ಶ್ರೀ ಶಂಕರರ ಜೀವನ ಚರಿತ್ರೆ ಹಾಗೂ ಅಲ್ಪಾವಧಿಯಲ್ಲಿ ಅವರು ತಮ್ಮ ಜ್ಞಾನದ ಬಲದಿಂದ ಮಾಡಿರುವ ಗಣನೀಯ ಸೇವೆಯನ್ನು ಸ್ಮರಿಸಲಾಯಿತು. ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ ನಿರೂಪಿಸಿದರು. ಬಳವಂತರಾವ ಕುಲಕರ್ಣಿ ವಂದಿಸಿದರು.

************