ಮೃತ್ಯುಂಜಯ ಮಠದಲ್ಲಿ ಜಾತ್ರಾ ಮಹೋತ್ಸವ: ಶಿವಾನುಭವ ಕಾರ್ಯಕ್ರಮ
ರಾಣೇಬೆನ್ನೂರು 17: ದೇಶ ಮತ್ತು ನಾಡಿನ ಅಭಿಮಾನ ಪ್ರತಿಯೊಬ್ಬರಲ್ಲಿ ವಡ ಮೋಡಬೇಕು ಅಂದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿ ಮತ್ತು ಪ್ರೀತಿ ವಿಶ್ವಾಸ ಭಾವೈಕ್ಯತೆ ಮೂಡಲು ಸಾಧ್ಯವಾಗುವುದು ಎಂದು ಗುಡ್ಡದ ಆನ್ವೇರಿ ವಿರಕ್ತಮಠದ ಶ್ರೀ ಶಿವಯೋಗಿ ಶಿವಾಚಾರ್ಯರು ನುಡಿದರು. ಅವರು, ಇಲ್ಲಿನ ಮೃತ್ಯುಂಜಯ ನಗರದ ಮಠದಲ್ಲಿ, ಧಾರವಾಡ ಮುರುಘಾಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿಗಳ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಶಿವಾನುಭವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ನಮ್ಮ ಇತಿಹಾಸದ ಸಾಧು ಸಂತರು, ಶರಣರು ,ಮಹಾನ್ ಪುರುಷರು, ಮಾನವ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅವರು ಭೌತಿಕವಾಗಿ ನಮ್ಮ ಮಧ್ಯೆ ಇಂದು ಇಲ್ಲದೆ ಇದ್ದರೂ ಸಹ, ಅಂದು ಮಾಡಿದ ತ್ಯಾಗದ ಮನೋಭೂಮಿಕೆಯಲ್ಲಿ ಇಂದಿಗೋ ಶರಣರು ಧರ್ಮಾಚರಣೆಯ ಮೂಲಕ ನಮ್ಮ ಮಧ್ಯೆ ಜೀವಂತವಾಗಿದ್ದಾರೆ ಎಂದರು. ಆಧುನಿಕ ಜೀವನ ಬದುಕಿನಲ್ಲಿ ಸದಾ ಕಾಲ ಮಾನಸಿಕ ಶಾಂತಿ ಮತ್ತು ನೆಮ್ಮದಿಯ ಜೀವನ ಬದುಕು ನಮ್ಮದಾಗ ಬೇಕಾಗಿದೆ. ಧರ್ಮದ ಆಚರಣೆಯ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕಾದ ಇಂದಿನ ಬಹು ಅಗತ್ಯವಿದೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು. ಇಂದಿನ ಸಂಕ್ರಮಣ ಕಾಲದಲ್ಲಿ ಸಮಾಜದಲ್ಲಿ ಸಮಾನತೆಗಾಗಿ ಪ್ರತಿಯೊಬ್ಬರು ಧಾರ್ಮಿಕ ಆಚರಣೆಯ ಮೂಲಕ ಒಂದಾಗಿ, ಒಗ್ಗಟ್ಟಾಗಿ ನಾಡು ಮತ್ತು ದೇಶದ ಧಾರ್ಮಿಕ ಪರಂಪರೆ ಮತ್ತಷ್ಟು ಮುಂದುವರಿಸಬೇಕಾಗಿದೆ ಎಂದರು. ದಿವ್ಯ ನೇತ್ರತ್ವ ವಹಿಸಿದ್ದ ಗುತ್ತಲ ಕಲ್ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳವರು, ರಾಜಕೀಯ ಯುವನಾಯಕ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಎಸ್.ಗೌಡಶಿವಣ್ಣನವರ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿ ಗೌರವಿಸಿದರು. ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ ಅವರು ಸಮಾಜಮುಖಿ ಕಾರ್ಯದಲ್ಲಿ ತಮ್ಮ ಮನೆತನದ ಪರಂಪರೆಯಲ್ಲಿ ಸಾಗಿ ಬಂದಿದ್ದೇನೆ. ರಾಜಕೀಯಕ್ಕಿಂತಲೂ ಸಮಾಜಮುಖಿ ಸೇವೆಯಲ್ಲಿ ತಾವು ಅತಿಯಾದ ಆನಂದವನ್ನು ಅನುಭವಿಸುತ್ತಿದ್ದೇನೆ. ಎಂದ ಅವರು, ಪ್ರಸ್ತುತ ರಾಜಕೀಯ ಕ್ಷೇತ್ರವು ಕಲುಷಿತವಾಗುತ್ತಲ್ಲಿದೆ, ಶುದ್ದ ಹಸ್ತ, ಪರಿಶುದ್ಧ ರಾಜಕಾರಣಿಗಳ ಅಗತ್ಯತೆ ಇಂದಿನ ಬಹು ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಗಣ್ಯರಾದ ರಾಜಣ್ಣ ತಿಳುವಳ್ಳಿ, ನಂಜಪ್ಪ ಚೆನ್ನ ಗೌಡರ, ಬಸಣ್ಣ ಕುರುವತ್ತಿ, ಶಿವಯೋಗೀ ಸ್ವಾಮಿ ಹಿರೇಮಠ, ರಾಜು ಗಡ್ಡದಗೋಳಿ, ಕೊಟ್ರೇಶ್ವರ ಸ್ವಾಮಿ, ಸೇರಿದಂತೆ ಮತ್ತಿತರ ಗಣ್ಯರು, ಸಮಿತಿಯ ಸದಸ್ಯರು, ವರ್ತಕರು ಉಪಸ್ಥಿತರಿದ್ದರು.