ಜಾತೆ:್ರ ಅದ್ದೂರಿಯಾಗಿ ಆಚರಿಸಲು ನಿರ್ಧಾರ
ಗದಗ 18: ತಾಲ್ಲೂಕಿನ ಸುಕ್ಷೇತ್ರ ಬಳಗಾನೂರಿನ ಘನಮೌನಿ, ತ್ರಿಕಾಲ ಜ್ಞಾನಿ, ಮೌನ ತಪಸ್ವಿ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ 30 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಇದೇ ಡಿ. 15 ರಂದು ಪೂರ್ವಬಾವಿ ಸಭೆ ಜರುಗಿತು.
ಈ ಸಭೆಯಲ್ಲಿ ಸುಕ್ಷೇತ್ರ ಬಳಗಾನೂರ ಶ್ರೀಮಠದ ಶಿವಶಾಂತವೀರ ಶರಣರು ಸಾನಿಧ್ಯವಹಿಸಿದ್ದರು. ಸಭೆಯಲ್ಲಿ ಶ್ರೀಮಠದ ಭಕ್ತರು, ಶರಣರ ಬಳಗದ ಹಿರಿಯರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಫೆ. 4 ರಂದು ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಸಾಮೂಹಿಕ ವಿವಾಹದಲ್ಲಿ ಅಸಕ್ತ ವಧು-ವರರ ಹೆಸರುಗಳನ್ನು ಜನವರಿ 28 ರಂದು 2025 ರ ಒಳಗಾಗಿ ನೋಂದಾಯಿಸಲು ಮೋ.ಸಂ. 8880808822, 9483661263 ಅವರನ್ನು ಸಂಪರ್ಕಿಸಬಹುದು. ವಿವಾಹಗಳ ದಾಖಲಾತಿಗಾಗಿ ಶ್ರೀಮಠದಲ್ಲಿ ಮಾತ್ರ ವಿವರವಾದ ಮಾಹಿತಿ ಪಡೆಯಬೇಕು ಎಂದು ಸುಕ್ಷೇತ್ರ ಬಳಗಾನೂರ ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.