ಲೋಕದರ್ಶನ ವರದಿ
ಬೆಳಗಾವಿ 04: ವಿಶ್ವಕ್ಯಾನ್ಸರ ದಿನಾಚರಣೆಯ ಅಂಗವಾಗಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಎನ್.ಸಿ.ಡಿ ಘಟಕ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಹಿರೇಬಾಗೇವಾಡಿ ಗ್ರಾಮದ ಗಾಂಧಿ ನಗರದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಂದ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಗಾವಿ ಜಿಲ್ಲಾ ಸವರ್ೇಕ್ಷಣಾಧಿಕಾರಿ ಡಾ. ಬಿ.ಎನ್ ತುಕ್ಕಾರ ಡ್ರಂ ಬಾರಿಸುವುದರೊಂದಿಗೆ ಜಾಥಾಗೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕ್ಯಾನ್ಸರ ತಡೆಗಟ್ಟುವ ಘೋಷ ವಾಕ್ಯಗಳೊಂದಿಗೆ ಶಾಲಾ ವಿದ್ಯಾಥರ್ಿಗಳು, ಆಶಾ ಕಾರ್ಯಕತರ್ೆಯರು, ಆರೋಗ್ಯಇಲಾಖೆಯ ಸಿಬ್ಬಂದಿಗಳ ಜಾಥಾ ಸಂಚರಿಸಿತು.
ಜಾಥಾದಲ್ಲಿ ಜಿಲ್ಲಾ ಎನ್ಸಿಡಿ ಕಾರ್ಯಕ್ರಮದ ಸಂಯೋಜಕ ಡಾ. ನೀತಿನ್ ಹೆಚ್, ಹಿರಿಯ ಪುರುಷ ಆರೋಗ್ಯ ಸಹಾಯಕ ಎಸ್.ಬಿ.ಮೇಳೇದ, ಮುಖ್ಯೋಪಾಧ್ಯಯ ಸುಭಾಸ ಸಿದ್ದನಗೌಡ ಪಾಟೀಲ, ಬಿ.ಬಿ. ಮಾಳಾಯಿ, ಜಿ.ಎಂ.ತುಕ್ಕನ್ನವರ, ಜಿ.ಎಂ.ಈಳಿಗೇರ, ಪಿ.ಕೆ ಅತ್ತುಗೋಳ, ಎಸ್.ಬಿ.ಬಂದಕ್ಕನವರ, ಪಿ.ಎಫ್. ಕಲ್ಲೂರ ಒಳಗೊಂಡಂತೆ ಶಿಕ್ಷಕರು, ವಿದ್ಯಾಥರ್ಿಗಳು ಭಾಗವಹಿಸಿದ್ದರು.