ಜೆಎಸ್‌ಎಸ್‌ನ ಶಿವಲೀಲಾ ಉತ್ತಮ ಸಾಧನೆ

ಜೆಎಸ್‌ಎಸ್‌ನ ಶಿವಲೀಲಾ ಉತ್ತಮ ಸಾಧನೆ JSS's Shivaleela a great achievement


ತಾಳಿಕೋಟಿ 06 : ತಾಲೂಕಿನ ಬ್ಯಾಲಾಳ ಕ್ರಾಸ್ ನಲ್ಲಿರುವ ಜೆಎಸ್‌ಎಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕೊಡಗಾನೂರ ಈ ಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಈ ವರ್ಷ ಸೈನಿಕ ಪ್ರವೇಶ ಪರೀಕ್ಷೆಯಲ್ಲಿ ಉತ್ತಮವಾಗಿ ಸಾಧನೆ ಮಾಡುವುದರ ಮೂಲಕ ತಮ್ಮ ಶಾಲೆಯ ಪ್ರಖ್ಯಾತಿಯನ್ನು ಹೆಚ್ಚಿಸಿದ್ದಾರೆ. ದಿನಾಂಕ18/01/2026 ರಂದು ನಡೆದ ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಪರೀಕ್ಷೆ ಬರೆದ 39 ವಿದ್ಯಾರ್ಥಿಗಳು ಉತ್ತೀರ್ಣರಾಗುದರ ಮೂಲಕ ಉತ್ತಮ ಸಾಧನೆ ಮಾಡಿರುತ್ತಾರೆ. ಅವರಲ್ಲಿ ಅಭಿಷೇಕ್ ಮಂಗಳೂರು 270/300. ಸಿದ್ದಾರ್ಥ್‌ ಕೋಳೂರು 259/300. ಶಿವಲೀಲಾ ಬ್ಯಾಕೋಡ 259/300. ಅಂಕವನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.    

ಸತತ 13 ವರ್ಷಗಳಿಂದ ಜೆಎಸ್‌ಎಸ್ ಶಾಲೆಯು ನವೋದಯ ಸೈನಿಕ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಶಾಲೆಗಳಿಗೆ ಆಯ್ಕೆ ಮಾಡುವುದರ ಮೂಲಕ ತಾಲೂಕಿನಲ್ಲಿಯೇ ಪ್ರಖ್ಯಾತಿ ಪಡೆದಿದೆ .13 ವರ್ಷಗಳಿಂದ ಸುಮಾರು 344 ವಿದ್ಯಾರ್ಥಿಗಳು ವಿವಿಧ ಸೈನಿಕ ಶಾಲೆಗಳಿಗೆ ಆಯ್ಕೆಯಾಗಿರುತ್ತಾರೆ. ಈ ವರ್ಷ ಪರೀಕ್ಷೆ ಬರೆದು ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ಜೆ ಎಸ್ ಎಸ್ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಸಾಹೇಬಗೌಡ ಗಬಸಾವಳಗಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.