ಜ. 24ರಂದು ಬನಶಂಕರಿದೇವಿಯ ಜಾತ್ರಾ ಮಹೋತ್ಸವ
ಹಾವೇರಿ 22: ಶಿವಲಿಂಗ ನಗರದಲ್ಲಿರುವ ಬನಶಂಕರಿದೇವಿಯ 21ನೇ ವರ್ಷದ ಜಾತ್ರಾ ಮಹೋತ್ಸವ ಜ.24ರಂದು ಜರುಗಲಿದೆ. ಬೆಳಗ್ಗೆ ಬ್ರಾಹ್ಮ ಮುಹೂರ್ತದಲ್ಲಿ ದೇವಿಗೆ ಪಂಚಾವೃತ ಅಭಿಷೇಕ, ನಂದಿ ಧ್ವಜಾರೋಹಣ, ಕಂಕಣಧಾರಣೆ ಹೋಮ ಹಾಗೂ ಪೂರ್ಣಾವುತಿ ಜರುಗಲಿದೆ.
ಮಧ್ಯಾಹ್ನ 1ರಿಂದ ಅನ್ನ ಪ್ರಸಾದ ವಿತರಣೆ ನಡೆಯಲಿದ್ದು, ಸಂಜೆ ದೇವಿಯ ಪಾಲಕೆ ಸೇವೆ ದೇವಸ್ಥಾನದ ಆವರಣದಲ್ಲಿ ಜರುಗಲಿದೆ. ಜ.23ರ ಗುರುವಾರ ಬನಶಂಕರಿದೇವಿಗೆ ತರಕಾರಿಗಳಿಂದ ವಿಶೇಷ ಅಲಂಕಾರ ಮಾಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸೋಮನಾಥ ಕುದರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.