ಮನುಷ್ಯರಿಂದ ಮುನ್ನಡೆಯುತ್ತಾ ಬಂದಿರುವುದೇ ಹೋಮಕ್ಕಿರುವ ಮಹಿಮೆಗೆ ಇದು ಜ್ವಲಂತ ಸಾಕ್ಷಿಯಾಗಿದೆ: ಶಿವಾಚಾರ್ಯ ಮಹಾಸ್ವಾಮಿ

It is a vivid testimony to the glory of home that it has been advanced by men: Shivacharya Mahaswam

ಮನುಷ್ಯರಿಂದ ಮುನ್ನಡೆಯುತ್ತಾ ಬಂದಿರುವುದೇ ಹೋಮಕ್ಕಿರುವ ಮಹಿಮೆಗೆ ಇದು ಜ್ವಲಂತ ಸಾಕ್ಷಿಯಾಗಿದೆ: ಶಿವಾಚಾರ್ಯ ಮಹಾಸ್ವಾಮಿ

ರಾಣೆಬೆನ್ನೂರ 28: ಡಿ 28ಹೋಮ ಹವನಾದಿ, ಪೂರ್ಣಾಹುತಿಗಳಿಗೆ ಹಿಂದೂ ಧರ್ಮದಲ್ಲಿ  ಹೆಚ್ಚಿನ ಹಾಗೂ ವಿಶೇಷ ಪ್ರಾಮುಖ್ಯತೆ ಮೊದಲಿನಿಂದಲೂ ಇದೆ. ಪ್ರತಿ ಶುಭ ಕಾರ್ಯಕ್ರಮಗಳಲ್ಲೂ ಹೋಮ ಮಾಡುವುದರಿಂದ  ಮನೆಯಲ್ಲಿನ ಹಾಗೂ ಪರಿಸರದಲ್ಲಿನ  ನಕಾರಾತ್ಮಕ ಶಕ್ತಿಯು ದೂರವಾಗಿ ಗುಣಾತ್ಮಕ ಶಕ್ತಿಯು ನೆಲೆಸುತ್ತದೆ ಎಂದು ಪ್ರಾಚೀನ ಯುಗದಿಂದಲೂ ಈ ಪರಂಪರೆ ಈಗಲೂ  ಮನುಷ್ಯರಿಂದ ಮುನ್ನಡೆಯುತ್ತಾ ಬಂದಿರುವುದೇ ಹೋಮಕ್ಕಿರುವ ಮಹಿಮೆಗೆ ಇದು ಜ್ವಲಂತ ಸಾಕ್ಷಿಯಾಗಿದೆ ಎಂದು ಸುಕ್ಷೇತ್ರ ಲಿಂಗದಹಳ್ಳಿಯ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.   ಶನಿವಾರದಂದು ತಾಲೂಕಿನ ಮುಷ್ಟೂರ ಗ್ರಾಮದ ಶ್ರೀ ಆಂಜನೇಯಸ್ವಾಮಿಯ ಕಾರ್ತಿಕೋತ್ಸವದ ನಿಮಿತ್ಯ  ಏರಿ​‍್ಡಸಿಲಾಗಿದ್ದ ಅಭಿಷೇಕ, ಹೋಮ, ಹವನ, ಪೂರ್ಣಾಹುತಿ ಮತ್ತಿತರ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನೇತ್ರತ್ವ ವಹಿಸಿ ಮಾತನಾಡಿದರು.  ಧರ್ಮಗ್ರಂಥಗಳ ಪ್ರಕಾರ ಹೋಮವನ್ನು ಮಾಡುವುದರಿಂದ  ವೈಜ್ಞಾನಿಕವಾಗಿ ಪರಿಸರವು ಕೂಡ ಶುದ್ಧಿಯಾಗುತ್ತದೆಯಂತೆ. ಹೋಮ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯು ಸಾಕಷ್ಟು ಪ್ರಯೋಜನಗಳನ್ನು ಪಡೆದಿದೆ ಎಂದು ಇತಿಹಾಸಗಳಿಂದ ತಿಳಿದು ಬಂದಿದೆ ಎಂದರು.  ಸಂಸ್ಕೃತ ಶಬ್ದವಾದ ಹೋಮ-ಹವನವನ್ನು ಶುದ್ಧಿಗೊಳಿಸಲಾದ ಅಗ್ನಿಯಲ್ಲಿ ಅರೆ​‍್ಣಗಳನ್ನು ಮಾಡುವುದು ಪ್ರಮುಖ ಕ್ರಿಯೆಯಾಗಿದೆ.  ಹೋಮರೋಗದಿಂದ ಮುಕ್ತಗೊಳಿಸುತ್ತದೆ,ಹೋಮ ಮಾಡುವುದರಿಂದ  ಮಾರಕ ಮತ್ತು ಅಪಾಯಕಾರಿ ರೋಗಗಳನ್ನು ತೊಡೆದು ಹಾಕಬಹುದಾಗಿದೆ.   ಹೋಮದ ಸಮಯದಲ್ಲಿ ಆ ಹೊಗೆಯನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದೆ. ಹೋಮದ ಸಮಯದಲ್ಲಿ ಹೊಗೆ ದೇಹದೊಳಗೆ ಹೋಗಿ  ತೀವ್ರ ಮತ್ತು ಮಾರಣಾಂತಿಕ ಕಾಯಿಲೆಯನ್ನು ತರುವ ಬ್ಯಾಕ್ಟೇರಿಯಾಗಳನ್ನು ತೆಗೆದು ಹಾಕುತ್ತದೆ ಎಂಬ ನಂಬಿಕೆಯೂ ಇದೆ. ಇದಲ್ಲದೇ ಸಂಪೂರ್ಣ ದೇಹವು ಶುದ್ಧವಾಗುತ್ತದೆ. ಆದರೆ ಮೆದುಳು, ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಯಿರುವವರು ಹೋಮದಿಂದ ದೂರವಿರಬೇಕು ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ ಎಂದರು.ಹೋಮವು ಮನಸ್ಸಿನ ಗೊಂದಲವನ್ನು ನಿವಾರಿಸುತ್ತದೆ. ವ್ಯಕ್ತಿಯು ಹೋಮ-ಹವನಾದಿಗಳ ಮೂಲಕ ಮಾನಸಿಕ ಶಾಂತಿಯನ್ನು ಪಡೆಯುತ್ತಾನೆ. ಹೋಮವು ಮನಸ್ಸಿನಲ್ಲಿ ಧಾರ್ಮಿಕ ನಂಬಿಕೆಯನ್ನು ಬಲಪಡಿಸುತ್ತದೆ. ಸಂತೋಷಕರ ಜೀವನವನ್ನು ತಮ್ಮದಾಗಿಸಿಕೊಳ್ಳಲು ಹೋಮವನ್ನು ಎಲ್ಲರೂ ಮಾಡಬೇಕು. ಹೋಮ ಮಾಡುವುದರಿಂದ ಮನೆಯಲ್ಲಿರುವ ಕುಟುಂಬದ ಸದಸ್ಯರಲ್ಲಿ ಮಾನಸಿಕ ಶಾಂತಿಯು ನೆಲೆಯಾಗಲು ಸಹಕಾರಿಯಾಗುತ್ತದೆ ಎಂದರು. ದೇವಸ್ಥಾನ ಸೇವಾ  ಸಮಿತಿಯ ಅಧ್ಯಕ್ಷ ಚಂದ್ರಗೌಡ ಸಿ ಪಾಟೀಲ,  ಪ್ರಭು ತಳವಾರ,  ಎಂ. ಚಿರಂಜೀವಿ, ರಾಜುಗೌಡ ಪಾಟೀಲ,  ಮಂಜಣ್ಣ ಹಲ್ಡಲ್ಡರ್, ಆನಂದರೆಡ್ಡಿ ಎರೇಕುಪ್ಪಿ,  ಮಾಲತೇಶ ಅಜರೆಡ್ಡಿ, ಪ್ರಕಾಶ ಎರೇಶಿಮಿ, ಜಯಣ್ಣ ಮಡಿವಾಳರ, ನಿಂಗನಗೌಡ ಪಾಟೀಲ,  ಅಶೋಕ ಮಡಿವಾಳರ, ಗುರನಗೌಡ ಪಾಟೀಲ, ಕಾಂತೇಶ್ ತಳವಾರ, ಹನುಮಂತಪ್ಪ ಬೆಳಕೇರಿ, ತಿರಕಪ್ಪ ಹೊನ್ನತ್ತಿ, ಬಸವಣ್ಣೆಪ್ಪ ದೇವರಮನಿ, ಡಿಳ್ಳೆಪ್ಪ, ಗಂಗಣ್ಣನವರ, ಅಣ್ಣಪ್ಪ ತಳವಾರ, ಷಣ್ಮುಖ ಮಡಿವಾಳರ, ಗಂಗಾಧರ ಕಮ್ಮಾರ, ರುದ್ರೇಶ ಹೊನ್ನತ್ತಿ ಸೇರಿದಂತೆ ಅರ್ಚಕರಾದ ಗಣೇಶ, ಪ್ರಕಾಶ, ಶಿವಪ್ಪ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮಹಿಳೆಯರು ಮತ್ತಿತರರು ಇದ್ದರು. ಆನಂತರ ಮಹಾ ಪ್ರಸಾದ ಜರುಗಿತು. ರಾತ್ರಿ ಕಾರ್ತಿಕೋತ್ಸವವು ಬಹು ವಿಜ್ರಂಭಣೆಯಿಂದ ನೆರವೇರಿತು.ಊ28-ಖಓಖ05-ಓಇಘಖ. ಂಓಆ. ಕಊಓಖಿಓ.