ಸಮಾಜ ಮುಖಿ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ಸಂಗತಿ : ಕಲ್ಲೋಳಿಕರ
ಧಾರವಾಡ 30: ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ 2024-25 ನೇ ಸಾಲಿನ ಜ್ಞಾನ ಸಿರಿ 08 ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಶಂಕರ ಕೆ ಕಲ್ಲೋಳಿಕರ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕರ್ನಾಟಕ ಅರಣ್ಯ ಇಲಾಖೆ ರವರು ಈ ಸಂಸ್ಥೆಯು ಸತತ 8 ವರ್ಷಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ವಿಷಯ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಮಕ್ಕಳ ವೈಯಕ್ತಿಕ ಕಾಳಜಿ ಈ ಸಂಸ್ಥೆಯ ಕನಸು ಅದರಂತೆ ಈಗಿನ ಕಾಲದಲ್ಲಿ ಶಿಕ್ಷಣವು ವ್ಯವಹಾರ ಆಗಿರುವುದು ದೂರಾದೃಷ್ಟಕರ ವಿಷಯ ಅದರಲ್ಲಿ ಈ ಸಂಸ್ಥೆಯು ಮಕ್ಕಳಿಗಾಗಿ ಇಂತಹ ಅಚ್ಚುಮೆಚ್ಚಿನ ಕಾರ್ಯಗಳನ್ನು ಮಾಡುತ್ತಿರುವುದು ನಮ್ಮ ಹೆಮ್ಮೆಯ ಸಂಗತಿ. ಈಗಿನ ಕಾಲದ ಮಕ್ಕಳು ಮೊಬೈಲ್ ಮೊರೆ ಹೋಗಿದ್ದು ದೂರಾದೃಷ್ಟಕರ ವಿಷಯ ವಿದ್ಯಾರ್ಥಿಗಳ ಜೀವನ ಶೈಲಿ, ಆಹಾರ ಪದ್ಧತಿ ಇವೆಲ್ಲವೂ ನಮ್ಮ ಜೀವನ ಶೈಲಿಯನ್ನು ಹಾಳುಮಾಡುತ್ತದೆ.
ಈ ಸಂಸ್ಥೆಯು ಇನ್ನು ಹತ್ತು ಹಲವಾರು ಕಾರ್ಯಕ್ರಮ ರೂಪಿಸಲಿ ಎಂದು ಶುಭ ಹಾರೈಸುತ್ತೇನೆ ಇಂತಹ ಕಾರ್ಯಕ್ರಮ ಭಾಗವಹಿಸುವುದು ನನ್ನ ಸೌಭಾಗ್ಯ ಎಂದು ನುಡಿದರು. ಮುಖ್ಯಅತಿಥಿಗಳ ನುಡಿಗಳನ್ನಾಡಿದ ಕಾರ್ಯದರ್ಶಿಗಳು ಶ್ರೀ ಬನಶಂಕರಿ ಎಜ್ಯುಕೇಶನ್ ಸೊಸೈಟಿ ಕುಮಾರಿ ಸುಜಾತ ಎಸ್ ಶೇಗುಣಸಿ ರವರು ನಾನು ಗ್ರಾಮೀಣ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆದು ಈಗ ವಿದ್ಯಾ ಸಂಸ್ಥೆ ಹೆಮ್ಮರವಾಗಿ ಬೆಳೆದಿರುವುದು ಅದು ನನ್ನ ಹೆಮ್ಮೆಯ ವಿಷಯ ನನ್ನ ಒಂದು ಆಶಯ ಗ್ರಾಮೀಣ ವಿದ್ಯಾರ್ಥಿಗಳ ಮುಂದೆ ಬಂದು ನಮ್ಮ ತರಹ ತಾವುಗಳು ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಗಲಿ ಎಂದು ಶುಭ ಹಾರೈಸುತ್ತೇನೆ, “ಕಲಿಸುವ ಪಾಠ ಕಲಿತ ವಿದ್ಯೆ ಯಾವತ್ತೂ ಕೈ ಬಿಡಲ್ಲ” ಅದೇ ರೀತಿ ವಿದ್ಯಾರ್ಥಿಗಳ “ಎಂದಿಗೂ ಸೋಲಬೇಡಿ ಎಂದಿಗೂ ಮರೆಯಬೇಡಿ” ಎಂದು ಈ ಕಿವಿ ಮಾತು ಹೇಳಿದರು.
ಮುಖ್ಯೋಪಾಧ್ಯಾಯರು ಶಾರದಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ವೀರೇಶ್ ಆರ್ ಶಿರುಂದಮಠ ಮಾಡಿ ಮಾತನಾಡಿದ ಈ ಸಂಸ್ಥೆಯು ಹಲವಾರು ವರ್ಷಗಳಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳ ಹಾಗೂ ಇನ್ನೂ ಅನೇಕ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಅನುಕೂಲವಾಗುವ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸುವುದು ಹೆಮ್ಮೆ ಸಂಗತಿ, ಈ ಸಂಸ್ಥೆಯಲ್ಲಿ ನನಗೆ ಕಂಡು ಬಂದ ಹೆಮ್ಮೆಯ ಸಂಗತಿ ಎಂದರೆ ವಿದ್ಯಾರ್ಥಿಗಳ “ಒಳ್ಳೆಯ ಸಂಸ್ಕೃತಿ ಒಳ್ಳೆಯ ನಡತೆ ಕಂಡು ಬಂದಿದ್ದು ಸಂತೋಷದ ಸಂಗತಿ” ಈ ಸಂಸ್ಥೆಯು ಇದೇ ತರಹ ವಿದ್ಯಾರ್ಥಿಗಳಿಗೋಸ್ಕರ ಇನ್ನು ಹೆಚ್ಚು ಹೆಚ್ಚು ಒಳ್ಳೆಯ ಕಾರ್ಯಕ್ರಮ ಆಯೋಜಿಸಿ ಎಂದು ಶುಭ ಹಾರೈಸುತ್ತೇನೆ, ಸಂಸ್ಥೆಯ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ, ಕಾರ್ಯಕ್ರಮ ಉದ್ದೇಶಿಸಿ ವಿದ್ಯಾರ್ಥಿಗಳಿಗೆ ನಾನು ಕಾಲೇಜ ಪ್ರಾರಂಭಿಸುವ ಉದ್ದೇಶ ಮತ್ತು ಕನಸು ವಿದ್ಯಾರ್ಥಿಗಳ ಜೀವನ ರೂಪಿಸುವುದು, ವಿದ್ಯಾರ್ಥಿಗಳ ಸಮೃದ್ದಿಗಾಗಿ ಶ್ರಮಿಸುವುದು ಹಾಗೂ ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿಸುವ ನಿಟ್ಟಿನಲ್ಲಿ, ಮಹಾವಿದ್ಯಾಲಯವು ಹಗಲಿರುಳು ಶ್ರಮಿಸುತ್ತಿದೆ. ಮಹಾವಿದ್ಯಾಲಯದ ಉತ್ತಮ ಗುಣಮಟ್ಟದ ಹಾಗೂ ಸಂಸ್ಕಾರಯುತವಾದ ಶಿಕ್ಷಣವನ್ನು ಕೊಡುವುದಾಗಿದೆ ಎಂದು ನುಡಿದರು.
ಅದರಂತೆ ದೇಶವನ್ನು ಮುನ್ನಡೆಸಲು ಉತ್ತಮ ಪ್ರಜೆಗಳು ಅಗತ್ಯ, ಉತ್ತಮ ಪ್ರಜೆಗಳು ದೊರಯ ಬೇಕಿದ್ದರೆ ಅವರಿಗೆ ಉತ್ತಮ ಶಿಕ್ಷಣ ಅಗತ್ಯ, ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಣ ಕ್ಷೇತ್ರದಲಿ ಗಣನಿಯ ಸೇವೆ ಸಲ್ಲಿಸಿದಕ್ಕಾಗಿ ಕುಮಾರಿ ಸುಜಾತಾ ಎಸ್ ಶೇಗುಣಸಿ ಹಾಗೂ ವೀರೇಶ ಆರ್ ಶಿರುಂದಮಠ ಅವರಿಗೆ ನಮ್ಮ ಸಂಸ್ಥೆಯ ವತಿಯಿಂದ ಶ್ರೀ ಸಾಯಿ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಮ್ಮ ಮಹಾವಿದ್ಯಾಲಯದ ವಿದ್ಯಾಥಿಗಳಿಗೆ ವಾರ್ಷಿಕ ಕ್ರೀಡಾಕೋಟದಲ್ಲಿ ಹಾಗೂ ವಿವಿದ ಸಾಂಸ್ಕೊತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪ್ರ್ರಾಸ್ತಾವಿಕ ನುಡಿಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ನಾಗರಾಜ ಶಿರೂರ ರವರು ಮಹಾವಿದ್ಯಾಲಯ ಬೆಳೆದು ಬಂದ ದಾರಿ ಬಗ್ಗೆ ವಿವರಿಸಿದರು. ಬಾಪು ಮೊರಂಕರ ರವರು, ಸ್ವಾಗತ ಮಾಡಿದರು.
ಮೌನೇಶ ಬಡಿಗೇರ ಅತಿಥಿ ಪರಿಚಯವನ್ನು ನೆರವೆರಿಸಿದರು, ವರದಿ ವಾಚನವನ್ನು ಮಂಜುನಾಥ ಮಾಡಿದರು. ವಂದನಾರೆ್ಣಯನ್ನು ಸಾವಕ್ಕಾ ಅವರು ನೆರವೆರಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್.ಬಿ. ಗಾಡಿ, ಪ್ರೋ ಎಸ್ ವ್ಹಿ ಗುರುಮಠ, , ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ, ಮತ್ತು ಪಾಲಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.