ಈಶ್ವರಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಗುಳಗುಳಿ ಒತ್ತಾಯ

ಲೋಕದರ್ಶನ ವರದಿ

ಗದಗ 26: ಕುರುಬ ಸಮುದಾಯದ ಕೆ. ಎಸ್. ಈಶ್ವರಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಸರಕಾರಕ್ಕೆ  ಒತ್ತಾಯ ಮಾಡಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಅವರು  ರಾಜ್ಯದಲ್ಲಿ  ಅತೀ ದೊಡ್ಡ  ಸಮುದಾಯ  ಹೊಂದಿರುವ  ಕುರುಬ ಸಮಾಜವು ರಾಷ್ಟ್ರೀಯ ಪಕ್ಷವಾದ ಭಾರತೀಯ  ಜನತಾ  ಪಕ್ಷಕ್ಕೆ  ವಿಧಾನಸಭೆ  ಚುನಾವಣೆ,  ಲೋಕಸಭೆ  ಚುನಾವಣೆಯಲ್ಲಿ  ಸ್ಪಧರ್ಿಸಲು   ಟಿಕೇಟ್ಗಳನ್ನು ನೀಡುವಂತೆ  ರಾಷ್ಟ್ರೀಯ ಅಧ್ಯಕ್ಷರು,  ರಾಜ್ಯಾಧ್ಯಕ್ಷರುಗಳಿಗೆ  ಮನವಿ ಮಾಡಲಾಗಿತ್ತು  ಆದರೆ,   ಕನರ್ಾಟಕ ರಾಜ್ಯದಲ್ಲಿರುವ ದೊಡ್ಡ ಸಮುದಾಯವನ್ನು  ನಿರ್ಲಕ್ಷ್ಯ ಮಾಡುತ್ತಿರುವುದು ಕುರುಬ ಸಮಾಜಕ್ಕೆ  ನೋವನ್ನುಂಟು ಮಾಡುತ್ತಿದೆ.  ಲೋಕಸಭೆ ಚುನಾವಣೆಯಲ್ಲೂ ಸಹ ಒಂದೇ ಒಂದು ಸ್ಥಾನವನ್ನು ನೀಡಲಾಗಲಿಲ್ಲ. ಕೆ. ಎಸ್. ಈಶ್ವರಪ್ಪನವರು, ಭಾರತೀಯ ಜನತಾ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು,  ಎಂತಹ  ಸ್ಥಿತಿಯಲ್ಲೂ ಸಹ ತನ್ನ ಬಿಜೆಪಿ ಪಕ್ಷವನ್ನು ತೊರೆಯಲಿಲ್ಲ. ಪಕ್ಷಕ್ಕೆ ದ್ರೋಹ ಮಾಡಲಿಲ್ಲ. ಹಿಂದಿನ ಸಕರ್ಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿತ್ತು. ರಾಜ್ಯದ ಮುಖ್ಯಮಂತ್ರಿಯಾಗುವ  ಅರ್ಹತೆ  ಮತ್ತು  ಅನುಭವವನ್ನು  ಹೊಂದಿರುವ  ಕೆ. ಎಸ್. ಈಶ್ವರಪ್ಪನವರಿಗೆ ಈ ಬಾರಿ  ಸಚಿವ ಸಂಪುಟದಲ್ಲಿ  ಉಪ ಮುಖ್ಯಮಂತ್ರಿ ಸ್ಥಾನ ನೀಡದೇ  ಅನ್ಯಾಯ ಮತ್ತು ಅವಮಾನ ಮಾಡಲಾಗುತ್ತಿದೆ. ಪಕ್ಷದಲ್ಲಿ ಜೇಷ್ಠತೆಗೆ ಗೌರವ ನೀಡಿ, ಗ್ರಾಮೀಣಾಭಿವೃದ್ಧಿ ಖಾತೆಯ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ ಸಮುದಾಯಕ್ಕೆ ಗೌರವ ನೀಡಬೇಕೆಂದು  ಅವರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ನಾಗರಾಜ ಮೆಣಸಗಿ, ಕಾರ್ಯದಶರ್ಿ ಸೋಮನಗೌಡ್ರ ಪಾಟೀಲ, ಸಂಘಟನಾ ಕಾರ್ಯದಶರ್ಿ ಪ್ರಲ್ಹಾದ ಹೊಸಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.