ಇರುಮುಡಿ ಒತ್ತ ಶಿವನ ಮಾಲಾಧಾರಿಗಳು ಶ್ರೀಶೈಲಕ್ಕೆ ಪಾದಯಾತ್ರೆ
ಕಂಪ್ಲಿ, ಫೆ.22.; ಮಹಾ ಶಿವರಾತ್ರಿ ಅಂಗವಾಗಿ ಶಿವ ಮಾಲಾಧಾರಿಗಳು ತಾಲೂಕಿನ ಸಣಾಪುರ ಗ್ರಾಮದಿಂದ ಶ್ರೀ ಶೈಲ ಮಲ್ಲಿಕಾರ್ಜುನ ಸನ್ನಿಧಿಗೆ ಶನಿವಾರ ಪಾದಯಾತ್ರೆ ಪ್ರಯಾಣ ಬೆಳೆಸಿದರು. ಇಲ್ಲಿನ ಉದ್ಭವ ವೀರಭದ್ರೇಶ್ವರ ದೇವಸ್ಥಾನದ ಸನ್ನಿಧಾನದಲ್ಲಿ ಬೆಳಿಗ್ಗೆ ಅಭಿಷೇಕ, ವಿಶೇಷ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳನ್ನು ನೆರವೇರಿಸಿ, ನಂತರ ಎಲ್ಲಾ ಮಾಲಾಧಾರಿಗಳಿಗೆ ಇರುಮುಡಿ ಕಟ್ಟಲಾಯಿತು. ತದನಂತರ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿಯ ಸ್ಮರಣೆ ಹಾಗೂ ಘೋಷಾ ವಾಕ್ಯಗಳೊಂದಿಗೆ ಸ್ವಾಮಿಯ ಇರುಮುಡಿ ಒತ್ತು, ಶ್ರೀಶೈಲ ಕಡೆಗೆ ಹೊರಟರು. ಇಲ್ಲಿನ ಸಾಕಷ್ಟು ಭಕ್ತರು ಹಾಗೂ ಜನರು ಶಿವನ ಮಾಲಾಧಾರಿಗಳಿಗೆ ಹೂಮಾಲೆ ಹಾಕಿ, ಭಕ್ತಿ ಮೆರೆದರು. ಇಲ್ಲಿನ ಸಣಾಪುರದಿಂದ 60 ಜನ ಮಾಲಾಧಾರಿಗಳು ತೆರಳಿದರು. ಶ್ರೀ ಶೈಲಕ್ಕೆ ತೆರಳಿ, ನಂತರ ಶಿವಸ್ವಾಮಿಗಳಿಂದ ಭಕ್ತಿಯಿಂದ ಇರುಮುಡಿ ತೆಗೆದು, ವಿಸರ್ಜಿಸಲಿದ್ದಾರೆ. ನಂತರ ಉದ್ಭವ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಮಾತನಾಡಿ, ಶ್ರೀಶೈಲ ಮಲ್ಲಿಕಾರ್ಜುನ ಶಕ್ತಿ ಅತ್ಯದ್ಭುತವಾಗಿದೆ. ಸ್ವಾಮಿಯ ಆರಾಧನೆ ಮಾಡಿದರೆ, ಕಷ್ಟ ಕಾರ್ುಣ್ಯಗಳು ದೂರವಾಗಲಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ಸಾಕಷ್ಟು ಶಿವನ ಮಾಲಾಧಾರಿಗಳು ಶ್ರೀಶೈಲಕ್ಕೆ ತೆರಳುತ್ತಿದ್ದಾರೆ. ಶಿವನ ಸ್ಮರಣೆ, ಧ್ಯಾನ ಮಾಡಿದ ಪ್ರತಿಯೊಬ್ಬರ ಬದುಕಿನಲ್ಲಿ ಸು:ಖ, ಶಾಂತಿ, ನೆಮ್ಮದಿ ದೊರಕಲಿದೆ ಎಂದರು. ಈ ಸಂದರ್ಭದಲ್ಲಿ ಶಿವನ ಮಾಲಾಧಾರಿಗಳಾದ ಟಿ.ಶರಣಪ್ಪ, ಜಿ.ಈಶಣ್ಣ, ಕನಕಗಿರಿ ರೇಣುಕಾಗೌಡ, ಎಂ.ಮಲ್ಲಿಕಾರ್ಜುನ, ಜಿ.ರಾಘವೇಂದ್ರ, ವೀರಭದ್ರಯ್ಯಸ್ವಾಮಿ, ಕೆ.ರಾಘವೇಂದ್ರ, ಮಲ್ಲಿಕಾರ್ಜುನ, ಮಲ್ಲಿ, ಶಿವಪ್ಪ, ಪರಮೇಶಿ, ಕೆ.ಬಸವರಾಜ, ಜಿ.ಕುಮಾರಸ್ವಾಮಿ ಸೇರಿದಂತೆ ಮಾಲಾಧಾರಿಗಳು ಹಾಗೂ ಮುಖಂಡರು, ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು. ಫೆ002ಮಹಾ ಶಿವರಾತ್ರಿ ಅಂಗವಾಗಿ ಶಿವ ಮಾಲಾಧಾರಿಗಳು ತಾಲೂಕಿನ ಸಣಾಪುರ ಗ್ರಾಮದಿಂದ ಶ್ರೀ ಶೈಲ ಮಲ್ಲಿಕಾರ್ಜುನ ಸನ್ನಿಧಿಗೆ ಶನಿವಾರ ಪ್ರಯಾಣ ಬೆಳೆಸಿದರು.