ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಬದಲು ಪುಸ್ತಕ ಕೊಟ್ಟಾಗ ಮಾತ್ರ ಜ್ಙಾನ ಸಂಪಾದನೆಯಾಗುತ್ತದೆ : ಚನ್ನಬಸವರಾಜ
ಕಂಪ್ಲಿ 14: ತಾಯಿಂದರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಬದಲು ಪುಸ್ತಕ ಕೊಟ್ಟಾಗ ಮಾತ್ರ ಜ್ಙಾನ ಸಂಪಾದನೆಯಾಗುತ್ತದೆ ಮಕ್ಕಳು ಶಿಕ್ಷಣವಂತರಾದರೆ, ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹೊಸಪೇಟೆ ಗಣಿ ಮಾಲೀಕ ಗೊಗ್ಗ ಚನ್ನಬಸವರಾಜ ಹೇಳಿದರು. ಪಟ್ಟಣದ ವೀರಶೈವ ಸಂಘದ ಶಾರದಾ ಹಿ.ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ಶುಕ್ರವಾರ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗಳನ್ನು ಹೊರತರುವಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ. ಮಕ್ಕಳು ಜ್ಞಾನಾರ್ಜನೆ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಎಂದರು ಎಲ್ಲಾ ರಂಗಗಲ್ಲಿ ಸಾಧನೆಗೈಯಬೇಕು ಎಂದರು.ವೀರಶೈವ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಪಿ.ಮೂಕಯ್ಯ ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವೀರಶೈವ ಸಂಘವು ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕೆಂಬ ನಿಟ್ಟಿನಲ್ಲಿ ಸುಸಜ್ಜಿತ ಶಾಲೆ ನಿರ್ಮಿಸಿ, ಶಿಕ್ಷಣ ನೀಡಲಾಗುತ್ತಿದೆ. ಬಡ ಮಕ್ಕಳು ಜೊತೆಗೆ ಎಲ್ಲಾ ಜನಾಂಗದ ಮಕ್ಕಳು ಕಲಿಯುವದಕ್ಕೆ ಬರುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕೃತಿ, ಸಂಸ್ಕಾರ ನೀಡಲಾಗುತ್ತಿದೆ. ಮಕ್ಕಳು ಶಿಕ್ಷಣ ಪಡೆದು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸಿಆರ್‌ಪಿ ಚಂದ್ರಯ್ಯ ಸೊಪ್ಪಿನಮಠ. ಮಾತನಾಡಿ ಶಿಕ್ಷಣ, ಸಂಸ್ಕಾರದ ಮೌಲ್ಯಗಳನ್ನು ಅರಿತರೆ, ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಾಧ್ಯ ಎಂದರು. ನಂತರ ಸಾಧಕರಿಗೆ ಹಾಗೂ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ, ಸನ್ಮಾನದೊಂದಿಗೆ ಗೌರವಿಸಲಾಯಿತು.ಮಕ್ಕಳಿಂದ ಸಾಂಸ್ಥತೀಕ ಕಾರ್ಯಕ್ರಮ ಹಾಡುಗಳಿಗೆ ಡ್ಯಾನ್ಸ್ ಮಾಡಿ, ನೆರೆದಿದ್ದ ಜನರನ್ನು ತಮ್ಮತ್ತ ಆಕರ್ಷಿಸಿದರು.ಹಿತಾತಂಡದಿಂದ ನಾನಾ ಹಾಡುಗಳಿಗೆ ಮಕ್ಕಳು ಸ್ಕೆಟ್ ಹಾಕಿ, ಗಮನ ಸೆಳೆದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಅರವಿ ಬಸವನಗೌಡ, ವೀರಶೈವ ಸಂಘದ ಕಂಪ್ಲಿ ತಾಲೂಕು ಉಪಾಧ್ಯಕ್ಷ ವಾಗೀನಗೇರಿ ವಿದ್ಯಾಧರ, ಕಾರ್ಯದರ್ಶಿ ಹೆಚ್. ನಾಗರಾಜ ವಕೀಲರು, ಸಹ ಕಾರ್ಯದರ್ಶಿ ಕೆ. ವಿರುಪಾಕ್ಷಪ್ಪ, ಕೋಶಾಧಿಕಾರಿ ಎಸ್.ಎಂ. ನಾಗರಾಜ ಸ್ವಾಮಿ, ನಿರ್ದೇಶಕರಾದ ವಾಲಿ ಕೊಟ್ರ್ಪ, ಡಿ. ವೀರ್ಪ, ಜಿ. ಚಂದ್ರಶೇಖರ ಗೌಡ, ಎಸ್.ಡಿ. ಬಸವರಾಜ, ಹೊನ್ನಳ್ಳಿ ಗಂಗಾಧರ, ಎಸ್ .ಎಂ ಚನ್ನಯ್ಯಸ್ವಾಮಿ ಮುಖ್ಯಗುರುಗಳಾದ ಬಸವರಾಜ, ತಿಪ್ಪಣ್ಣ, ಶ್ವೇತಾ, ಛಾಯದೇವಿ ಸೇರಿದಂತೆ ಅನೇಕರಿದ್ದರು.