ಗ್ರಾಮೀಣ ಸಮಾಜದ ನೈಜ್ಯತೆಯ ತಿಳಿವಳಿಕೆಯಲ್ಲಿ ಎನ್‌ಎಸ್‌ಎಸ್ ಶಿಬಿರ ಸಹಕಾರಿ : ಪಪೂಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು
NSS camp helps in understanding the reality of rural society: Papushree Siddeshwara Mahaswamy
ಮೂಡಲಗಿ 11: ಗ್ರಾಮೀಣ ಸಮಾಜದ ನೈಜ್ಯತೆಯನ್ನು ಅರಿಯಲು ಎನ್‌ಎಸ್‌ಎಸ್ ಶಿಬಿರಗಳು ಸಹಕಾರಿಯಾಗಿದ್ದು ಆಧುನಿಕ ಜೀವನದ ಭರಾಟೆಯಲ್ಲಿ ನೈಜ್ಯ ಸಮಾಜದ ಚಿಂತನೆ ಮಕ್ಕಳಲ್ಲಿ ಅರಿವು ಮೂಡಿಬರುತ್ತಿಲ್ಲ ಸಮಾಜದ ಆಗು ಹೋಗುಗಳ ಜೊತೆಗೆ ಗ್ರಾಮೀಣ ಜನರ ಬದುಕು ಅವಿಭಕ್ತ ್ಘ ವಿಭಕ್ತ ಕುಟುಂಬಗಳ ನಡುವಿನ ಅಂತರ ತಿಳಿದುಕೊಳ್ಳುವದರ ಜೊತೆಗೆ ಸಂಸ್ಕೃತಿ ಸಂಪ್ರದಾಯಗಳ ತಿಳವಳಿಕೆ ಬೆಳಸಿಕೊಳ್ಳಲು ಇಂದಿನ ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಅಗತ್ಯವಿದೆ ಎಂದು ಇಟ್ನಾಳದ ಸಿದ್ದೇಶ್ವರ ಆಶ್ರಮದ ಪ.ಪೂ.ಶ್ರೀ. ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಮೂಡಲಗಿ ಪಟ್ಟಣದ ಸಮೀಪದ ಇಟ್ನಾಳ ಗ್ರಾಮದ ಮಾದವಾನಂದ ದೇವಸ್ಥಾನದಲ್ಲಿ ಆರ್. ಡಿ. ಎಸ್, ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಾರ್ಷಿಕ ಎನ್. ಎಸ್. ಎಸ್. ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿ ಶಿಕ್ಷಣ ಕೇವಲ ಓದಿಗೆ ಸೀಮತವಾಗಬಾರದು ಅಖಂಡ ಭಾರತದಲ್ಲಿ ಬದುಕುತ್ತಿರುವ ನಾವೆಲ್ಲರು ಭಾರತದ ಪರಂಪರೆ ಸಂಸ್ಕೃತಿ ಗುಂಪು ಜೀವನದ ಮೌಲ್ಯಗಳನ್ನು ಅರಿಯಲು ಇಂತಹ ಸಾಮೂಹಿಕ ಜೀವನದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮರಸ ಜೀವನದ ಮೌಲ್ಯಗಳನ್ನು ಬೆಳಸುವ ಶಿಕ್ಷಣದ ಅಗತ್ಯವಿದೆ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರ್ತಿಸಲು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಸತೀಶ ಗೋಟೂರೆ ಮಾತನಾಡಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಪರಿಭಾವನೆಯನ್ನು ಮೂಡಿಸುವ ಉದೇಶವನ್ನು ಹೊಂದಿ ಎನ್.ಎಸ್.ಎಸ್. ಸದಸ್ಯತ್ವ ಪಡೆದು ಕೊಂಡು ವಿದ್ಯಾರ್ಥಿ ಜೀವನದ ಜೊತೆಗೆ ಸ್ವಯಂ ಸೇವಕರಾಗಿ ನಿಸ್ವಾರ್ಥ ಸಮಾಜ ಸೇವಾ ಕಾರ್ಯವನ್ನು ನಿರ್ವಹಿಸಿ ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ಎನ್.ಎಸ್.ಎಸ್. ಶಿಬಿರಗಳು ನೀಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಡಿ.ಎಸ್ ಪಿಯು ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ವಹಿಸಿಕೊಂಡು ಮಾತನಾಡುತ್ತಾ ಎನ್.ಎಸ್.ಎಸ್. ಶಿಬಿರಗಳು ಸಮಾಜ ಸೇವಾ ಮನೋಭಾವನೆ ಜೊತೆಗೆ ನಿಸ್ವಾರ್ಥತೆಯಿಂದ ಕೂಡಿದ್ದು ಅದರಲ್ಲಿ ತೊಡಗುವರು ಶ್ರದ್ದೆ, ಭಕ್ತಿಯಿಂದ ಸಾಮಾಜಿಕ ಕಾಯಕದೊಂದಿಗೆ ತೊಡಗಿಕೊಳ್ಳುವುದು ಅವಶ್ಯವಿದೆ ಎಂದರು. ಇಟ್ನಾಳದ ಪಿಕೆಪಿಎಸ್ ಅಧ್ಯಕ್ಷರಾದ ಚನ್ನಪ್ಪ ಮಗದುಮ್ಮ ಲಕ್ಷ್ಮೀ ಪಿಕೆಪಿಎಸ್ ಅಧ್ಯಕ್ಷರಾದ ಗಿರಿಗೌಡ ಪಾಟೀಲ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಗೀತಾ ಕಂಬಾರ ಮಾಜಿ ಉಪಾಧ್ಯಕ್ಷರಾದ ಯಲ್ಲವ್ವ ಬ್ಯಾಕೂಡ ಊರಿನ ಹಿರಿಯರಾದ ಮಲ್ಲಪ್ಪ ದಾನಿಹಾಳ, ಶಂಕರ ಪಾಟೀಲ, ಗೋವಿಂದ ಪೂಜೇರಿ, ಭೀಮಪ್ಪಾ ಪಾಟೀಲ ಸಿದ್ದಪ್ಪಾ ಬ್ಯಾಕೂಡ ಉಪನ್ಯಾಸಕರಾದ ಎಸ್.ಎನ್.ಕುಂಬಾರ ಕಿರಣ ಪಟ್ಟಣಶೆಟ್ಟಿ ಸುನೀಲ ಸತ್ತಿ ರಾಘವೇಂದ್ರ ಡಬಾಜ, ಅಕ್ಷತಾ ಹೊಸಮನಿ, ಕವಿತಾ ಮಳಲಿ ಮತ್ತಿತ್ತರರು ಉಪಸ್ಥಿತರಿದ್ದರು. ಜ್ಯೋತಿ ಬಿ. ಗರಗದ ನಿರೂಪಿಸಿದರು ಎನ್.ಎಸ್.ಎಸ್. ಘಟಕಾಧಿಕಾರಿ ರಾಜು ಪತ್ತಾರ ಸ್ವಾಗತಿಸಿದರು. ವರ್ಷಾ ಮಾದರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 