ಪೌರಾಡಳಿತ ನಿರ್ದೆಶನಾಲಯದ ತಪಾಸಣಾ ವರದಿ: ದಾಂಡೇಲಿ ನಗರಸಭೆ
ಕಾರವಾರ 10 : ದಾಂಡೇಲಿ ನಗರಸಭೆಯ ಹಿಂದಿನ ಪೌರಾಯುಕ್ತರಾದ ಗಣಪತಿ ಶಾಸ್ತ್ರಿ ಅವರು ಸಲ್ಲಿಸಿರುವ ದೂರಿನನ್ವಯ ಆಶ್ರಯ ಯೋಜನೆಯ ಫಲಾನುಭವಿಗಳೆಂದು ಲೀಸ್‌ದಾರರಿಗೆ ಹೆಚ್ಚಿನ ಅಳತೆಯನ್ನು ನಮೂದಿಸಿ ನೀಡಲಾಗಿದೆ. ಆಶ್ರಯ ಫಲಾನುಭವಿಗಳಿಗೆ ನೊಂದಾಯಿಸಿರುವ ಕ್ರಯ ಪತ್ರದಲ್ಲಿ ಹೆಚ್ಚಿನ ಅಳತೆಯನ್ನು ನಮೂದಿಸಿರುವದು ಮತ್ತು ಒಂದಕ್ಕಿಂತ ಹೆಚ್ಚು ಪ್ಲಾಟ್ ಗಳನ್ನು ನೊಂದಾಯಿಸಿರುವದು ಕಂಡು ಬರುತ್ತದೆ. ಈ ಬಗ್ಗೆ ವಿಸೃತ ತನಿಖೆ ಅಗತ್ಯವಿದೆ ಎಂದು ಬೆಂಗಳೂರಿನ ಪೌರಾಡಳಿತ ನಿರ್ದೆಶನಾಲಯದಿಂದ ತಪಾಸಣೆಗೆಂದು ನೇಮಕ ಮಾಡಿದ ಪೌರಾಡಳಿತ ನಿರ್ದೆಶನಾಲಯದ ಸಹಾಯಕ ನಿರ್ದೇಶಕರಾದ (ಅಭಿವೃದ್ದಿ )ಚಿದಾನಂದ ಸ್ವಾಮಿ, ವ್ಯವಸ್ಥಾಪಕರಾದ ಮಹಮ್ಮದ್ ಸೈಪುದ್ದೀನ್ ಆರ್.ಬಿ. ಮತ್ತು ಕಾರ್ಯಪಾಲ ಅಭಿಯಂತರ ಬಸವರಾಜ ಅವರು ತಮ್ಮ ತಪಾಸಣಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.*ತಪಾಸಣಾ ವರದಿ ಏನು ಹೇಳುತ್ತಿದೆ?:*ದಾಂಡೇಲಿ ನಗರಸಭೆ ಮಾಲೀಕತ್ವದ 792 ನಿವೇಶನಗಳನ್ನು 1962 ರಿಂದ 1974 ರ ಅವಧಿಯವರೆಗೆ 99ವರ್ಷಗಳ ಅವಧಿಗೆ ಲೀಸ್ ಮೇಲೆ ನೀಡಲಾಗಿರುತ್ತದೆ. ಸರ್ಕಾರ ಆದೇಶ ಹೊರಡಿಸಿ ದಿನಾಂಕ: 3-3-2000 ನೇ ಸಾಲಿನಲ್ಲಿ ಲೀಸ್ ಗೆ ನೀಡಲಾದ 792 ಆಸ್ತಿಗಳ ಲೀಸ್ ಅನ್ನು ತಕ್ಷಣದಿಂದ ರದ್ದು ಮಾಡಿ, 792 ಆಸ್ತಿಗಳಲ್ಲಿ ಕಟ್ಟಡ ನಿರ್ಮಾಣವಾಗಿರುವ 745 ಆಸ್ತಿಗಳನ್ನು ಹಾಲಿ ಲೀಸ್ ದಾರರಿಗೆ ಪ್ರತಿಯೊಂದು ನಿವೇಶನಕ್ಕೆ 30 ಸಾವಿರ ರೂಪಾಯಿಯಂತೆ ಪಾವತಿಸಿಕೊಂಡು, ಪುರಸಭಾ ಕಾಯ್ದೆಯನ್ವಯ ಸರ್ಕಾರದ ಮಂಜೂರಾತಿ ನೀಡಲಾಗಿರುತ್ತದೆ. ಅದೇ ರೀತಿ 1995 ನೇ ಸಾಲಿನಿಂದ 2004 ನೇ ಸಾಲಿನವರೆಗೆ 2837 ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಇದರಲ್ಲಿ 2368 ಫಲಾನುಭವಿಗಳು ನಗರಸಭೆ ಜಾಗೆಯನ್ನು ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡು ಬಹಳ ವರ್ಷಗಳಿಂದ ವಾಸವಿದ್ದವರಾಗಿದ್ದಾರೆ. ನಗರಸಭೆಯಿಂದ ಠರಾವು ಮಾಡಿ ಆಶ್ರಯ ಫಲಾನುಭವಿಗಳಿಗೆ ನಿವೇಶನಗಳ ಹಕ್ಕು ಪತ್ರಗಳನ್ನು ನೊಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಾಯಿಸಿದವರಿಗೆ ಸಿಟಿ ಸರ್ವೆಯ ಮಾಲೀಕತ್ವದ ಅಂಕಣದಲ್ಲಿ ಸೇರಿಸಲಾಗಿದೆ. ಆದರೆ ಭೂ ಮಾಪನಾ ಕಛೇರಿಯಲ್ಲಿ ಹೆಚ್ (ಹೋಲ್ಡರ್) ಕಾಲಂನಲ್ಲಿ ಮಾಲೀಕರ ಹೆಸರು ನೊಂದಾಯಿಸಲು ಆಕ್ಷೇಪಣೆ ಮಾಡಲಾಗಿದೆ. ಇದರಿಂದ ಫಲಾನುಭವಿಗಳು ಬ್ಯಾಂಕ ಸಾಲದಿಂದ ವಂಚಿತರಾಗಿದ್ದಾರೆ. ಇದರಿಂದ ಫಲಾನುಭವಿಗಳಿಂದ 10 ಸಾವಿರ ರೂಪಾಯಿ ಪಡೆದು ಸಿಟಿ ಸರ್ವೆಯಲ್ಲಿ ದಾಖಲಿಸಲಾಗಿದೆ. ದಾಂಡೇಲಿ ನಗರಸಭೇಯ ಸಾಮಾನ್ಯ ಸಭೆಯ ತೀರ್ಮಾನದಂತೆ ದಿನಾಂಕ : 5-4-2015 ರಿಂದ ದಿ:3-2-2021 ರ ಅವಧಿಯಲ್ಲಿ ಪೌರಾಯುಕ್ತರು ನಗರಸಭೆಯ 600 ಆಸ್ತಿಗಳಿಗೆ ಹಳಿಯಾಳ ಉಪ ನೋಂದಣಾಧಿಕಾರಿ ಕಛೇರಿಯಲ್ಲಿ ನೊಂದಣಿ ಮಾಡಿರುವದು ಕಂಡು ಬರುತ್ತದೆ. ಸದರಿ ನೊಂದಣಿ ವಿವರಗಳನ್ನು ಪರೀಶೀಲಿಸಲಾಗಿ ವಾಣಿಜ್ಯ ಉದ್ದೇಶದ ಆಸ್ತಿಗಳನ್ನು ನೊಂದಣಿ ಮಾಡಿ ನೀಡಿರುವದು ಕಂಡು ಬರುತ್ತದದೆ. ಈ ಬಗ್ಗೆ ಯಾದಿಯನ್ನು ಮಾಡಿದ್ದು ಕೋಷ್ಟಕದಲ್ಲಿರುವ 1 ನೇ ಆಸ್ತಿಯ ಲೀಸ್ ನೀಡಿದ್ದು ನಗರಸಭೆಯ ಆಸ್ತಿಯಾಗಿದೆ. ರಾಧಾಕೃಷ್ಣ ಕನ್ಯಾಡಿ ಪ್ಲಾಟ್ ನಂ 1 ಮೂಲ ಲೀಸ್‌ದಾರರಾಗಿರುವದಿಲ್ಲ. ಪಾಂಡುರಂಗ ಚವ್ಹಾಣರವರಿಂದ ಖರೀದಿಗೆ ಪಡೆದಿದ್ದು 20ಥ15 ಮತ್ತು 20ಥ15 ಅಡಿ ಎಂದು ನಮೂದಿಸಿರುತ್ತದೆ , ಎಂದು ಉಲ್ಲೇಖಿಸಿದ್ದಾರೆ. ಸರ್ಕಾರದ ಆದೇಶದಂತೆ ನೊಂದಣಿ ಮಾಡಿ ಕೊಡುವುದಾದಲ್ಲಿ ಲೀಸ್ ನೀಡಿದ ವಿಸ್ತೀರ್ಣ ಮಾತ್ರ ನೀಡಬೇಕಾಗಿರುತ್ತದೆ. ನಗರಸಭೆಯ ಸಾಮಾನ್ಯ ಸಭೆ 28-2-2015 ಮತ್ತು 3-1-2019 ರಲ್ಲಿ ಆಶ್ರಯ ವಸತಿ ಯೋಜನೆಯಲ್ಲಿ ಪಡೆದಿರುವ ನಿವೇಶನಗಳ ಹಕ್ಕುಗಳನ್ನು ನೊಂದಾಯಿಸಿಕೊಡಲು ತೀರ್ಮಾನಿಸಿರುವುದನ್ನು ಉಲ್ಲೇಖಿಸಿ 4367 ಚದರ ಅಡಿ ಜಾಗೆಯನ್ನು ನೊಂದಾಯಿಸಿರುವದು ಕಂಡು ಬರುತ್ತದೆ. ಇದೇ ರೀತಿ ಅನೇಕ ವಾಣಿಜ್ಯ ಪ್ಲಾಟಗಳನ್ನು ಆಶ್ರಯ ಯೋಜನೆಯಲ್ಲಿ ಹಕ್ಕು ಪತ್ರ ಪಡೆದು ನೊಂದಣಿಯಾಗಿದೆ.ಅಂದಿನ ಪೌರಾಯುಕ್ತರಾದ ಆರ್.ವಿ ಜತ್ತಣ್ಣವರ್ ದಾಂಡೇಲಿ ನಗರಸಭೆ ಠರಾವನ್ನು ಮುಂದಿರಿಸಿ, ಹಕ್ಕು ಪತ್ರಗಳನ್ನು ನೊಂದಾಯಿಸಿಕೊಡಲು ತೀರ್ಮಾನಿಸಿರುವದನ್ನು ಉಲ್ಲೇಖಿಸಿ, ಜಾಗದ ವಿಸ್ತೀರ್ಣವು, ಅಶ್ರಯ ಯೋಜನೆಯಡಿ ನೀಡುವ ವಿಸ್ತೀರ್ಣಕ್ಕಿಂತ ಹೆಚ್ಚಾಗಿ ನೊಂದಾಯಿಸಿ ನೀಡಿರುವುದು ಕಂಡು ಬರುತ್ತದೆ. ಆಶ್ರಯ ಯೋಜನೆಯ ಫಲಾನುಭವಿಗಳೆಂದು ನೊಂದಣಿ ಮಾಡಿ ಅನೇಕ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ನಿಗದಿ ಪಡಿಸಿದ ವಿಸ್ತೀರ್ಣಕ್ಕಿಂತ ಹೆಚ್ಚಿನ ಅಳತೆಯನ್ನು ನೊಂದಾಯಿಸಿ ನೀಡಿರುತ್ತಾರೆ.ನೊಂದಣಿ ಕಡತಗಳ ನಾಪತ್ತೆದಾಂಡೇಲಿ ನಗರಸಭೆಯಲ್ಲಿ ನೊಂದಣಿಗಾಗಿ ಸಿದ್ದ ಪಡಿಸಿರುವ ಕಡತಗಳನ್ನು ಪರೀಶೀಲನೆಗೆ ಪೌರಾಡಳಿತ ನಿರ್ದೇಶಕರ ಕಛೇರಿಯಿಂದ ಬಂದಂತಹ ತಪಾಸಣಾ ತಂಡ ಕೋರಿದಾಗ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗು ನೌಕರರು ಈ ನೊಂದಣಿಗೆ ಸಂಬಂಧಿಸಿದ ಕಡತಗಳನ್ನು ನಿರ್ವಹಣೆ ಮಾಡಿರುವದಿಲ್ಲ ಎಂದು ಲಿಖಿತವಾಗಿ ನೀಡಿದ್ದಾರೆನ್ನಲಾಗಿದೆ. ನೊಂದಣಿಗೆ ಸಿದ್ದ ಪಡಿಸಿರುವ ಯಾವುದೇ ಕಡತಗಳು ಲಭ್ಯವಾಗಿಲ್ಲವೆಂದು ತಪಾಸಣಾ ವರದಿಯಲ್ಲಿ ತಿಳಿಸಿರುವ ತಪಾಸಣಾ ತಂಡ ಹಿಂದಿನ ಪೌರಾಯುಕ್ತ ಗಣಪತಿ ಶಾಸ್ರಿ ತಮ್ಮ ವರದಿಯಲ್ಲಿ ನೀಡಿರುವ ದಾಖಲೆಗಳನ್ನು ಪರೀಶೀಲಿಸಿದಾಗ ಅಂದಿನ ಪೌರಾಯುಕ್ತರಾದ ಆರ್.ವಿ. ಜತ್ತಣ್ಣವರ್ ನಗರಸಭೆ ಜಾಗೆಯನ್ನು ನೊಂದಾಯಿಸಿ ನೀಡಿರುತ್ತಾರೆ.*ದೋಷಾರೋಪಣಾ ಪಟ್ಟಿ ಸಿದ್ದಪಡಿಸಿ ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿಗೆ ಸೂಚನೆ :*ಪೌರಾಡಳಿತ ನಿರ್ದೆಶನಾಲಯದಿಂದ ಬಂದ ಅಧಿಕಾರಿಗಳ ತಂಡ ದಿನಾಂಕ ; 15-6-2023 ರಂದು ನೀಡಿದ ತಪಾಸಣಾ ವರದಿಯ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೆರ್ಶಕರು ದಿನಾಂಕ ; 9-9-2023 ರಂದು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ ದೋಷಾರೋಪಣಾಪಟ್ಟಿ ಸಿದ್ದಪಡಿಸಿ ಶಿಸ್ತು ಕ್ರಮಕ್ಕೆ ಪ್ರಸ್ಥಾವನೆ ಸಲ್ಲಿಸಲು ನಿರ್ದೆಶನ ನೀಡಿದ್ದಾರೆ.ಸದರಿ ಪತ್ರದಲ್ಲಿ ಕರ್ನಾಟಕ ವಸತಿ ನಿಗಮದಿಂದ ನಗರಸಭೆ ದಾಂಡೇಲಿ ವ್ಯಾಪ್ತ್ತಿಯಲ್ಲಿ ಅಭಿವೃದ್ದಿ ಪಡಿಸಿರುವ ನಿವೇಶನಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತಮ್ಮ ಕಛೇರಿಯಿಂದ ಬಂದ ಪ್ರಸ್ಥಾವನೆ ಮೇರೆಗೆ ಈ ನಿರ್ದೆಶನಾಲಯದ ಅಧಿಕಾರಿಗಳ ತಂಡ ದಾಂಡೇಲಿಗೆ ತೆರಳಿ ತಪಾಸಣಾ ವರದಿಯನ್ನು ನೀಡಿದೆ. ವರದಿಯಲ್ಲಿ ಆಶ್ರಯ ಯೋಜನೆಯ ಫಲಾನುಭವಿಗಳೆಂದು ಲೀಸ್‌ದಾರರಿಗೆ ಹೆಚ್ಚಿನ ಅಳತೆಯನ್ನು ನಮೂದಿಸಿ ನೀಡಿರುವದು, ಆಶ್ರಯ ಫಲಾನುಭವಿಗಳಿಗೆ ನೊಂದಾಯಿಸಿರುವ ಕ್ರಯ ಪತ್ರದಲ್ಲಿ ಹೆಚ್ಚಿನ ಅಳತೆಯನ್ನು ನಮೂದಿಸಿ ನೀಡಿರುವದು, ಆಶ್ರಯ ಹಾಗು ಒಂದಕ್ಕಿಂತ ಹೆಚ್ಚು ಪ್ಲಾಟಗಳನ್ನು ನೊಂದಾಯಿಸಿರುವದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತಪಾಸಣಾ ವರದಿ ಲಗತ್ತಿಸಿರುವದು ಕಂಡು ಬಂದಿದ್ದು ತಕ್ಷಣ ತಮ್ಮ ಅಭಿಪ್ರಾಯದೊಂದಿಗೆ ಸಂಬಂಧಿಸಿದವರ ವಿರುದ್ದ ದೋಷಾರೋಪಣಾ ಪಟ್ಟಿ ಸಿದ್ದ ಪಡಿಸಿ, ಶಿಸ್ತು ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪೌರಾಡಳಿತ ನಿರ್ದೇಶಕರು ಕೋರಿದ್ದಾರೆ. ಈ ಪತ್ರ ಬಂದು ಒಂದುವರೆ ವರ್ಷವಾದರೂ ಜಿಲ್ಲಾಧಿಕಾರಿಗಳ ಕಛೇರಿಯಿಂದ ಯಾವುದೇ ಕ್ರಮ ಜರುಗಿದ್ದು ಕಂಡು ಬಂದಿಲ್ಲ...