ಇಂಡಿ:ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಲೋಕದರ್ಶನ ವರದಿ

ಇಂಡಿ: ಕ್ಷೇತ್ರದಲ್ಲಿ ಆದ ಬದಲಾವಣೆಗಳು ಜೊತೆಗೆ ಜನರಿಗೆ ಸರಕಾರದ ಯೋಜನೆಗಳು ಸಮಪರ್ಕವಾಗಿ ಮುಟ್ಟುವಂತೆ ಅಧಿಕಾರಿಗಳ ಕೆಲಸ ಮಾಡಬೇಕು. ಕೇವಲ ಸಭೆಗೆ ಬಂದರೆ ಸಾಲದು ರೈತಾಪಿ ವರ್ಗದ ಪರವಾದ ಕೆಲಸ ಮಾಡಬೇಕು. ಇಂತಹವರ ಸೇವೆ ಮಾಡಿದರೆ ಮಾತ್ರ ಜೀವನದಲ್ಲಿ ನೀವು ಮಾಡಿದ ಕೆಲಸಕ್ಕೆ ಸಂತೃಪ್ತಿ ಸಿಕ್ಕಂತಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಪಟ್ಟಣದ ಮಿನಿ ವಿಧಾನಸೌಧ ಸಭಾ ಭವನದಲ್ಲಿ ದ್ವಿತೀಯ ತ್ರೈಮಾಸಿಕ  ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ತಾಲೂಕಿನಲ್ಲಿ ಡಿಶೆಂಬರ್ ತಿಂಗಳಿಂದ ಮಾರ್ಚತಿಂಗಳ ವರೆಗೆ ಕ್ಷೇತ್ರದ ಜನರಿಗೆ ನೀವು ನೀಡುವ ಸೇವೆ ಸಮಪರ್ಕವಾಗಿರಲಿ ಕೆಲಸ ಮಾಡುವಾಗ ರೈತರ ಕಷ್ಟ ಕಾರ್ಪಣ್ಯಗಳನ್ನು ಮನಗಂಡು ಕಳಕಳಿಯಿಂದ ಕೆಲಸ ಮಾಡಿ ಅಂದಾಗ ನಮಗೂ ನಿಮಗೂ ಸಂತೋಷ ಸಿಗುತ್ತದೆ. 

ಇಂದು ಇಂಡಿ-ಸಿಂದಗಿ ಭಾಗದಲ್ಲಿ ಭೀಕರ ಬರ ಎದುರಾಗಿದೆ ತಾಲೂಕಾ ಅಧಿಕಾರಿಗಳು ಸಾರ್ವಜನಿಕರಿಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಿ ನಾನು ಈ ಸಭೆ ಕರೆದಿರುವ ಉದ್ದೇಶ ಕುಡಿಯುವ ನೀರಿನ ಸಮಸ್ಯ ಇರುವದರಿಂದ ಯಾವುದೇ ಕುಂಟು ನೆಪ ಹೇಳದೆ ಎಲ್ಲಿಂದಾದರೂ ಯಾವುದೆ ಮೂಲದಿಂದಾದರೂ ಸಾರ್ವಜನರಿಕೆ ನೀರು ಒದಗಿಸಬೇಕು. 

ಈ ಹಿಂದೆ ಆವರಿಸಿದ 72 ರ ಬರಗಾಲದಂತೆ ಈಗಿನ ವಾತಾವರಣ ಗೋಚರಿಸುತ್ತಿದೆ. ಹಿಂದೆ ಆಹಾರದ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಆದರೆ ಈಗ ಕುಡಿಯುವ ನೀರಿನ ಸಮಸ್ಯ ಆಗಿದೆ. ಮಾನ್ಯ ಸಚಿವರಾದ ಕೃಷ್ಣ ಬೈರೇಗೌಡರ ಜೊತೆ ಚಚರ್ಿಸಿ ಆ ಸಮಸ್ಯೆಯಾಗದಂತೆ ಪರಿಹರಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಈ ಭಾಗದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಈ ಹಿಂದೆ ಒಂದು ಸಭೆಯಲ್ಲಿ ಶಾಸರೆ ಈ ಭಾಗದ ರೈತಾಪಿ ಜನರ ಚಿಂತನೆ ಮಾಡಿ ಇವರಿಗೆ ನೀರು ಕೊಡಿ ಇಲ್ಲಾ ಡಿನೋಟಿಪಾಯಿ ಮಾಡಿ ಬಿಡಿ ಎಂದಾಗ ನನಗೆ ನೋವಾಗಿದೆ ಆದ್ದರಿಂದ ಅವರ ಆಶೆಯಂದತೆ ಅಧಿಕಾರಿಗಳು ಎಲ್ಲರೂ ಕೂಡಿಕೊಂಡು ನೀರಾವರಿ ವಂಚಿತ ಪ್ರದೇಶಕ್ಕೆ ನೀರು ಒದಗಿಸಿ ಪುಣ್ಯಕಟ್ಟಿಕೊಳ್ಳಿ ಇಂತಹವರ ವಾಣಿಯ ಬಲದಿಂದ ನಾವು ಪ್ರೇರಿತರಾಗಿ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳು ಸಹಿತ ಸರಿಯಾಗಿ ಕೆಲಸ ಮಾಡಿ ಎಂದರು.

ಹಲವಾರು ಯೋಜನೆಗಳು ಜಾರಿಯಾಗಿವೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ಹೇಳುತ್ತಿರಿ ಕಾಗದ ಮೆಲೆ ಆದರೆ ಸಾಲದು ನೀಜ ಸ್ವರೂಪದಲ್ಲಿ ಆಗಿದೆಯೇ ಎಂಬುದನ್ನು ಅರಿಯಬೇಕು. 

ಕಂದಾಯ ಇಲಾಖೆಗೆ ಸಾಕಷ್ಟು ಲೋಪಗಳು ನಡೆಯುತ್ತಿವೆ ಎಂಬ ದೂರುಗಳು ಬಂದಿವೆ, ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಇಂತಹ ವ್ಯವಸ್ಥೆ ಮರುಕಳಿಸದಂತೆ ನೋಡಿಕೊಳ್ಳಿ, ಗ್ರಾಮೀಣ ಭಾಗದಲ್ಲಿ ಸಾಕಷ್ಟು ರಸ್ತೆಗಳ ಸಮಸ್ಯಗಳಿಗೆ ನಾನು ಅನೇಕ ಬಾರಿ ಹೇಳಿದ್ದರೂ ಸಹಿತ ಪ್ರಯೋಜನವಾಗುತ್ತಿಲ್ಲ ಕೂಡಲೆ ಹಳ್ಳಿಗಳಲ್ಲಿ ರಸ್ತೆಗಳ ಸಮಸ್ಯ ನಿವಾರಿಸಿ ಸ್ಥಳೀಯ ಜನರ ಮನಸನ್ನು ಒಲೈಸಿ ರಾಜಿ ಮಾಡಿ ಸಮಸ್ಯ ಇತ್ಯರ್ಥಗೋಳಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಭೀಕರ ಬರಗಾಲದಿಂದ ತೋಗರಿ, ಜೋಳ, ಕಡೆಲೆ ಒಣಗಿವೆ ಈ ಹಿಂದೆ ರೈತರಿಗೆ ಅನುಕೂಲವಾಗಲಿ ಎಂದು ತೋಗರಿ ಕೇಂದ್ರ ತೆರೆದು ಸಹಾಯ ಮಾಡಲಾಗಿತ್ತು ಆದರೆ ಇಂದು ರೈತರು ಬೆಳೆದ ತೋಗರಿ ಬಾರದೆ ಸಂಪೂರ್ಣ ವಿಫಲವಾಗಿರುವದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ಸರಿಯಾದ ಮಾಹಿತಿ ಸಂಗ್ರಹಿಸಿ ಬೆಳೆ ಪರಿಹಾರ ಬಗ್ಗೆ ಸರಕಾರಕ್ಕೆ ಸೂಕ್ತ ಮಾಹತಿ ನೀಡಬೇಕು ಬೆಳೆ ಪರಿಹಾರ ಪ್ರತಿಯೊಬ್ಬ ರೈತರಿಗೆ ಬರುವಂತಾಗಬೇಕು. 

ಇಂಡಿ ನಗರದ ಮಹಾಯೋಜನೆ ಸರಕಾರದಲ್ಲಿ ಮಂಜೂರಾತಿ ಬಂದಿರುವದರಿಂದ ಜನರಿಗೆ ಮಾಹಿತಿ ಇಲ್ಲ ಅಧಿಕಾರಿಗಳು ಜನರಿಗೆ ತಿಳುವಳಿಕೆ ನೀಡಬೇಕು. ಮೇಘಾ ಮಾರುಕಟ್ಟೆ ಮುಂದಿನ ದಿನಗಳಲ್ಲಿ ನಿಮರ್ಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡುವದಾಗಿ ಹೇಳಿದರು. ಈ ಸಂಧರ್ಭದಲ್ಲಿ ತಹಶೀಲ್ದಾರ ಯತೀಶ ಉಲ್ಲಾಳ, ತಾ.ಪಂ ಅಧ್ಯಕ್ಷ ಶೇಖರ ನಾಯಕ ತಾ.ಪಂ ಅಧಿಕಾರಿ ಡಾ.ವಿಜಯಕುಮಾರ ಆಜೂರ ಇದ್ದರು. ಕೃಷಿ ಅಧಿಕಾರಿ ಮಹಾದೇವ ಏವೂರ, ಬಿ.ಫ್.ನಾಯ್ಕರ, ರಾಜಕುಮಾರ ತೋರವಿ, ಎಸ್.ಬಿ.ಬಿಂಗೇರಿ, ಪಿ.ಎಸ್.ಆಯ್ ರವಿ ಯಡವಣ್ಣವರ, ತಾ.ಪಂ ಯೋಜನಾಧಿಕಾರಿ, ವಿಠ್ಠಲ ಹಳ್ಳಿಕರ್ ಸೇರಿದಂತೆ ಅನೇಕ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.