ಭಾರತೀಯ ಕೃಷಿ ಸೂಕ್ಷ್ಮಜೀವಶಾಸ್ತ್ರಜ್ಞ ಡಾ. ಶ್ರೀಹರಿಗೆ ಜಪಾನ್ ಉದ್ಯಮ ಪ್ರಶಸ್ತಿ

ಲೋಕದರ್ಶನ ವರದಿ

 ಹುಬ್ಬಳ್ಳಿ, 14: ಭಾರತದ ಕೃಷಿ ಸೂಕ್ಷ್ಮಜೀವಶಾಸ್ತ್ರಜ್ಞ ಮತ್ತು ಇಕೊಸೈಕಲ್ ಕಾಪರ್ೊರೇಷನ್ನ ಅಧ್ಯಕ್ಷ ಡಾ.ಶ್ರೀಹರಿ ಚಂದ್ರಘಾಟ್ಗಿಯವರಿಗೆ ಜಪಾನ್ನ ಟೋಕಿಯೊ ಚೇಂಬರ್ ಆಫ್ ಕಾಮಸರ್್ ಅಂಡ್ ಇಂಡಸ್ಟ್ರಿಸ್ (ಟಿಸಿಸಿಐ),"ಔಟ್ಸ್ಟ್ಯಾಂಡಿಂಗ್ ಅವಾಡರ್್ ಫಾರ್ ಕರೇಜಿಯಸ್ ಎಕ್ಸಿಕ್ಯೂಟಿವ್ ಪ್ರಶಸ್ತಿ ನೀಡಿ ಗೌರವಿಸಿದೆ. ಟೋಕಿಯೊದಲ್ಲಿ ಅಕ್ಟೋಬರ್ 11ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಡಾ. ಶ್ರೀಹರಿಯವರಿಗೆ ರಜತ ಫಲಕ, ಟ್ರೋಫಿ ಮತ್ತು ಐದು ಲಕ್ಷ ಜಪಾನಿಯೆನ್ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕರೇಜಿಯಸ್ ಎಕ್ಸಿಕ್ಯೂಟಿವ್ ಪ್ರಶಸ್ತಿಯು ಜಪಾನ್ ಕಾಪರ್ೊರೇಟ್ ವಲಯದಲ್ಲಿ ಅತ್ಯುನ್ನತ ಗೌರವವಾಗಿದೆ. ವ್ಯವಹಾರ ನಿಧರ್ಾರಗಳನ್ನು ಕೈಗೊಳ್ಳುವಲ್ಲಿ ರಿಸ್ಕ್ ತೆಗೆದುಕೊಳ್ಳುವ, ಗರಿಷ್ಠ ವ್ಯಾಪಾರ ತಡೆಗಳನ್ನು ಮೀರಿ ಸಾಧನೆ ಮಾಡುವ, ವಿಶಿಷ್ಟ ವ್ಯವಸ್ಥಾಪನಾ ಕೌಶಲಗಳ ಮೂಲಕ ಮಾರುಕಟ್ಟೆಯ ಸಾಮಾನ್ಯ ಜ್ಞಾನಕ್ಕೆ ಸವಾಲೊಡ್ಡುವ ಅಪೂರ್ವ ಕಾಪರ್ೊರೇಟ್ ಮುಖಂಡರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಕೇವಲ ವ್ಯವಹಾರದ ಪ್ರಗತಿಗೆ ಮಾತ್ರವಲ್ಲದೇ, ಸಮಾಜಕ್ಕೆ ಒಟ್ಟಾರೆ ಕೊಡುಗೆ ನೀಡುವ ನಿಟ್ಟಿನಲ್ಲಿ ವ್ಯವಸ್ಥಾಪನಾ ಕೌಶಲ ಮತ್ತು ವ್ಯವಹಾರ ನಿಧರ್ಾರಗಳನ್ನು ಕೈಗೊಳ್ಳುವ ಗಣ್ಯರಿಗೆ ಈ ಪ್ರಶಸ್ತಿ ಸಲ್ಲುತ್ತದೆ.

ಈ ಬಾರಿಯ ಪ್ರಶಸ್ತಿಗೆ 148 ಕಂಪನಿಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಪರಿಗಣಿಸಲಾಗಿತ್ತು. ಉದ್ಯಮಿಗಳು, ಮಾಧ್ಯಮ ಸಂಸ್ಥೆ ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡ 12 ಮಂದಿ ತೀಪರ್ುಗಾರರ ತಂಡ ಈ ಪ್ರಶಸ್ತಿಗೆ ಡಾ. ಶ್ರೀಹರಿಯವರನ್ನು ಆಯ್ಕೆ ಮಾಡಿದೆ. ಫ್ಯೂಜಿ ಸಾಂಕೀ ಮಾಧ್ಯಮ ಸಮೂಹದ ಅಧ್ಯಕ್ಷ ಉಸೇಕಾ, ಅಂತರರಾಷ್ಟ್ರೀಯ ವಿವಿಯ ಕುಲಪತಿ ಡಾ.ಇಟಮಿ, ಹೋಂಡಾ ಮೋಟರ್ಸ್ ನಿದರ್ೇಶಕ ಇಟೊವು, ಮಿತ್ಸುಬಿಶಿ ಎಲೆಕ್ಟ್ರಿಕ್ನ ವಿಶೇಷ ಕಾನ್ಸುಲರ್ ಶಿಮೊಮುರಾ ಮತ್ತಿತರರು ತೀಪರ್ುಗಾರರ ತಂಡದಲ್ಲಿದ್ದರು. ಆರು ತಿಂಗಳ ಕಾಲ ನಾಲ್ಕು ಹಂತಗಳಲ್ಲಿ ಅಭ್ಯಥರ್ಿಗಳನ್ನು ಗುರಿತಿಸಿ, ಅಂತಿಮವಾಗಿ ವಿಜೇತರನ್ನು ಆಯ್ಕೆ ಮಾಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಟಿಸಿಸಿಐ ಉಪಾಧ್ಯಕ್ಷ ಮತ್ತು ಹೋಂಡಾ ಮೋಟರ್ಸ್ನ ಕಾರ್ಯನಿವರ್ಾಹಕ ನಿದರ್ೇಶಕ ಇಟೊ, "ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಜಪಾನಿ ಆಥರ್ಿಕತೆಯ ಚಾಲನಾಶಕ್ತಿಯಾಗಿದ್ದು, ಬೃಹತ್ ಕೈಗಾರಿಕೆಗಳಿಗೆ ಕೂಡಾ ಇವು ಬೆನ್ನೆಲುಬಾಗಿವೆ. ಆದಾಗ್ಯೂ ಅವು ಮಾರುಕಟ್ಟೆ ಸವಾಲುಗಳನ್ನು ನಿಭಾಯಿಸುವಲ್ಲಿ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂಥ ಸವಾಲುಗಳನ್ನು ಎದುರಿಸಿ ಕಂಪನಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಅತ್ಯದ್ಭುತ ವ್ಯವಸ್ಥಾಪನಾ ನಿಧರ್ಾರಗಳನ್ನು ಕೈಗೊಂಡ ಉದ್ಯಮ ಗಣ್ಯರನ್ನು ಗುರುತತಿಸಿ ಗೌರವಿಸುವ ಅದ್ಭುತ ಅವಕಾಶ ಟಿಸಿಸಿಐಗೆ ಲಭಿಸಿದೆ. ಒಬ್ಬರು ಭಾರತೀಯರನ್ನು ಈ ವಿಶೇಷ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಅತ್ಯಂತ ವಿಶಿಷ್ಟ ಅಂಶ. ಜಪಾನ್ನ ಜನಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ 30 ವರ್ಷಗಳಲ್ಲಿ ದೇಶದ ಪ್ರಗತಿಯನ್ನು ಮುಂದುವರಿಸಲು ಕೌಶಲಯುಕ್ತ ಕಾಮರ್ಿಕರು ಮತ್ತು ವ್ಯವಸ್ಥಾಪನಾ ಶ್ರಮ ಸಂಪನ್ಮೂಲಕ್ಕಾಗಿ ಭಾರತವನ್ನು ಎದುರು ನೋಡಬೇಕಾಗಿದೆ ಎಂದು ಹೇಳಿದರು.

 ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಡಾ. ಶ್ರೀಹರಿ, "ಈ ಪ್ರಶಸ್ತಿ ಪಡೆಯುತ್ತಿರುವುದು ಅತಿದೊಡ್ಡ ಗೌರವ. ಇದು ಸಾಧ್ಯವಾಗುವಂತೆ ಮಾಡಿದ್ದಕ್ಕಾಗಿ ಇಕೊಸೈಕಲ್ ಕಾಪರ್ೊರೇಷನ್ನ ಎಲ್ಲ ಉದ್ಯೋಗಿಗಳಿಗೆ ನಾನು ಕೃತಜ್ಞ. ಪರಿಸರ ಕ್ಷೇತ್ರದ ಪ್ರಸ್ತುತ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಾವು ವಿನೂತನ ಪರಿಹಾರಗಳನ್ನು ಜಾರಿಗೊಳಿಸಿದ್ದೇವೆ. ಇಂಥ ಪ್ರಶಸ್ತಿಗಳು ಇನ್ನಷ್ಟು ರಭಸದಿಂದ ಇಂಥ ಕೆಲಸವನ್ನು ಮುಂದುವರಿಸಲು ಸಹಕಾರಿಯಾಗುತ್ತವೆ. ಉದಯೋನ್ಮುಖ ಆಥರ್ಿಕತೆಗಳಿಗೆ ಇದನ್ನು ಒಯ್ದು, ಮನುಷ್ಯ ನಿಮರ್ಿತ ಪರಿಸರ ಸಂಘರ್ಷವನ್ನು ಪರಿಣಾಮಕಾರಿ ತಂತ್ರಜ್ಞಾನದ ಮೂಲಕ ನಿಭಾಯಿಸಲು ಅನುಕೂಲ ಮಾಡಿಕೊಡಲು ಸಾಧ್ಯವಾಗುತ್ತದೆ" ಎಂದು ಹೇಳಿದರು.

ಡಾ. ಶ್ರೀಹರಿ ಚಂದ್ರಘಾಟ್ಗಿ ಕಿರುಪರಿಚಯ:

ಡಾ.ಶ್ರೀಹರಿ ತಂದೆ ವಾಯುಪಡೆ ಅಧಿಕಾರಿ. 1961 ರಲ್ಲಿ ಗೋವಾ ವಿಮೋಚನೆ ಮತ್ತು 1971ರಲ್ಲಿ ಬಾಂಗ್ಲಾ ವಿಮೋಚನೆಯಲ್ಲಿ ಭಾಗಿಯಾಗಿದ್ದರು. ತಾಯಿ ಶಿಕ್ಷಕಿ. ಸಿದ್ದಾಪುರದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಶ್ರೀಹರಿ, 1992 ರಲ್ಲಿ ಧಾರವಾಡ  ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು.  ಹೊಸದಿಲ್ಲಿಯ ಇಂಡಿಯನ್ ಕೌನ್ಸಿಲ್ ಆಫ್ ಆಗ್ರಿಕಲ್ಚರಲ್ ರಿಸರ್ಚನಿಂದ ಜೂನಿಯರ್ ರಿಸಚರ್್ ಸಾ್ಕಲರ್ಶಿಪ್ ಪಡೆದು ಅದೇ ಕಾಲೇಜಿನಲ್ಲಿ 1994 ರಲ್ಲಿ ಸ್ನಾತಕೋತ್ತರ ಹಾಗೂ 1997 ರಲ್ಲಿ ಕೃಷಿ ಮೆಕ್ರೊಬಾಯಾಲಜಿಯಲ್ಲಿ ಪಿಎಚ್ಡಿ ಹಾಗೂ ಸ್ವರ್ಣ ಪದಕ ಪಡೆದರು. 1998ರಲ್ಲಿ ಮಾನ್ಬುಶೊ ಫೆಲೋಶಿಪ್/ಶಿಕ್ಷಣ ಸಚಿವಾಲಯ, ಜಪಾನ್ ಪಡೆದು ಶಿಬಾ ವಿಶ್ವವಿದ್ಯಾನಿಲಯದಲ್ಲಿ  ಸಂಶೋಧಕರಾಗಿ ಸೇರಿದರು. 2000ರಲ್ಲಿ ಎಕೊಸೈಕಲ್ ಕಾಪರ್ೋರೇಷನ್ ವಿಜ್ಞಾನಿಯಾಗಿ  ವೃತ್ತಿಪರ ಜೀವನ ಆರಂಭಿಸಿದರು. 2005ರಲ್ಲಿ ಎಕೊಸೈಕಲ್ನ ಅಧ್ಯಕ್ಷ ಮತ್ತು ಸಿಇಓ ಆದರು.

ಡಾ. ಶ್ರೀಹರಿ, ಪರಿಸರ ಸಂರಕ್ಷಣೆಗಾಗಿ ಸ್ವಾಭಾವಿಕ ಮೈಕ್ರೊಆರ್ಗರ್ಾನಿಸಂ ಕಂಡುಹಿಡಿದು ಅಭಿವೃದ್ಧಿಪಡಿಸಿದ್ದಾರೆ.  ಪೇಟೆಂಟ್ ಹೊಂದಿರುವ ತಂತ್ರಜ್ಞಾನವನ್ನು ಜಪಾನ್, ತೈವಾನ್, ಥೈಲೆಂಡ್, ಭಾರತ, ಚೀನಾ ಹಾಗೂ ಅಮೆರಿಕದಲ್ಲಿ ಅಳವಡಿಸಲಾಗಿದೆ.  ಇವು ಪಯರ್ಾಯ ಪರಿಹಾರವಾಗಿದೆ.