ಭಾರತೀಯ ಸೇನಾ ಪದಕ: ಚೇತನ್ ಸಾರಾಪುರೆಗೆ ಸನ್ಮಾನ
ಮಾಂಜರಿ 19: ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ಸೈನಿಕರ ನಿಸ್ವಾರ್ಥ ಸೇವೆ ಮತ್ತು ಕಾರ್ಯದಿಂದ ನಾವು ನೆಮ್ಮದಿಯಾಗಿ ಬದುಕುತ್ತಿದ್ದೇವೆ ಅದಕ್ಕಾಗಿ ನಾವು ಪ್ರತಿಯೊಬ್ಬ ಸೈನಿಕರ ಕಾರ್ಯಕ್ಕೆ ಮೆಚ್ಚಲೇಬೇಕೆಂದು ನಮ್ಮ ಭಾರತೀಯ ಸೇನೆಯ ಕಾರ್ಯ ಸಂಪೂರ್ಣ ಜಗತ್ತನ್ನು ಧೈರ್ಯದಿಂದ ಮೂಡುತ್ತದೆ ಎಂದು ದತ್ತ ಶೇತ್ಕರಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಮರ್ ಯಾದವ್ ಹೇಳಿದರು.
ಅವರು ಬುಧವಾರರಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಭಾರತೀಯ ಸೇನೆಯಲ್ಲಿ ಸೇವೆ ಕಲ್ಲಿತ್ತಿರುವ ಜವಾನ ಚೇತನ್ ಸಾರಾಪುರೆ ಈತನಿಗೆ ಭಾರತೀಯ ಸೇನಾ ಪದಕ್ಕೆ ಲಭಿಸಿದ್ದಕ್ಕಾಗಿ ಆತನಿಗೆ ಯೋಜಿಸಲಾದ ಸನ್ಮಾನ ಸಮಾರಂಭದ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು
ಜೂನ್ 24ರಂದು ನಮ್ಮ ದೇಶದ ಕಾಶ್ಮೀರ ಎಂದು ಖ್ಯಾತಿ ಪಡೆದ ಜಮ್ಮು ಕಾಶ್ಮೀರ್ ನಲ್ಲಿ ಚೇತನ್ ಸರಪುರೆ ಇವರು ಸೇವೆ ಸಲ್ಲಿಸುವಾಗ ಅವರ ಮೇಲೆ ಉಗ್ರವಾದಿಗಳಿಂದ ಹಲ್ಲೆ ಮಾಡಿದ ಪ್ರತ್ಯುತ್ತರವಾಗಿ ಆತನ ಪ್ರತ್ಯುತ್ತರ ಹಲ್ಲೆ ಮಾಡಿ ಒಬ್ಬ ಕಟ್ಟಡ ಉಗ್ರವಾದಿಯನ್ನು ಕೊಂದು ಹಾಕಿದ್ದಕ್ಕಾಗಿ ಆತನಿಗೆ ಈ ಭಾರತೀಯ ಸೇನಾ ಪದವನ್ನು ಪಡೆದು ನಮ್ಮ ಗ್ರಾಮದ ಹೆಮ್ಮೆಯ ವಿಷಯ ಸಂಗತಿ ವಾಗಿದೆ ಎಂಬ ಅವರು ಹೇಳಿದರು ಈ ವೇಳೆ ಭಾರತೀಯ ಸೇನಾ ಪದಕ ಪಡೆದ ಚೇತನ್ ಸಾರಾ ಪುರೆ ಈತನಿಗೆ ಹಲವಾರು ಮುಖಂಡರಗಳಿಂದ ಸನ್ಮಾನ ಮಾಡಲಾಯಿತು. ನಿವೃತ್ತ ಸೈನಿಕರಾದ ಪೋಪಟ್ ರೆಂದಳೆ ಅಶೋಕ ಘಾಟಗೆರಾಮಚಂದ್ರ ಭೋಸಲೆ ದೀಲೀಪ್ ಪವಾರ್ ಶಶಿಕಾಂತ್ ಪಾಟೋಳೆ ವಿಜಯ ಘಾಟಿಗೆ ತಾತ್ಯಾಸಾಹೇಬ ಪಾಯಿಮಲ್ ಅಮೂಲ್ ಜಾಧವ್ ಹಾಗೂ ಇನ್ನುಳಿದ ನಾಗರಿಕರು ಹಾಜರಿದ್ದರು.