ಲೋಕದರ್ಶನ ವರದಿ
ಬೆಳಗಾವಿ, 6: ತನ್ನ ಅದ್ಭುತವಾದ ಸಾಂಸ್ಕೃತಿ ಪರಂಪರೆ ಮತ್ತು ಅಧ್ಯಾತ್ಮೀಕ ಪರಂಪರೆಯಿಂದಾಗಿ ಭಾರತವು ವಿಶ್ವಮಾನುವಾಗಿದೆ ಮತ್ತು ವಿಶ್ವಕ್ಕೆ ಗುರುವಾಗಿ ಎಂದು ಹಿರಿಯ ಚಿಂತಕ ಬಸವ ತತ್ವ ಪ್ರಚಾರಕ ಶಿವಜಾತಯ್ಯ ದಳವಾಯಿ ನುಡಿದರು.
ಅವರು ಕುವೆಂಪುನಗರದಲ್ಲಿ ಕುವೆಂಪು ನಗರ,ಪ್ರೆಸ್ ಕಾಲನಿ,ಸಹ್ಯಾದ್ರಿ ನಗರ ಮುಂತಾದ ಬಡಾವಣೆಗಳ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಜಾಪ್ರಭುತ್ವದ ಬೀಜ ಬಿತ್ತಿದರು, ಎನಗಿಂತ ಕಿರಿಯರಿಲ್ಲ ಎಂದು ಹೇಳಿ ಅದರಂತೆ ಬಾಳಿ ಬದುಕುದ ಬಸವಣ್ಣನವರು ಕಿಂಕರತ್ವ ಬಳಸಿಕೊಂಡು ಭಕ್ತಿ ಭಂಡಾರಿಯಾದರು, ಭಕ್ತಿಯ ಬಿಕ್ಷೆ ಬೇಡಿ ಶಂಕರರಾದರು ಅಷ್ಟೇ ಏಕೆ ವಿಶ್ವ ಗುರುವಾಗಿ ಬೆಳೆದರು.
ಕಲ್ಯಾಣದ ಶರಣರಿಂದ ರಚಿತವಾದ ವಚನ ಸಾಹಿತ್ಯ ವೈಚಾರಿಕ ಕ್ರಾಂತಿಯನ್ನೇ ಮಾಡಿತು, ಇಂತಹ ವಚನ ಸಾಹಿತ್ಯ ಇಂದು ಉಳಿದಿದೆ ಎಂದರೇ ಅದು ಚನ್ನಬಸವಣ್ಣನವರಿಂದ,ಸ್ವಭಾವತ: ಸಮಾಧಾನಿಯಾಗಿರುವ ಶರಣರು ವಚನ ಸಾಹಿತ್ಯದ ಉಳಿವಿಗಾಗಿ ಖಡ್ಗ ಹಿಡಿಯಬೇಕಾಗಿ ಬಂತು ಎಂದವರು ಹೇಳಿದರು.
ಸಂಪತ್ತಿನ ಶ್ರೀಮಂತಿಕೆ ಒಂದಿಲ್ಲೊಂದು ದಿನ ಅಳಿಯುತ್ತದೆ,ಸಾಕೆನಿಸುತ್ತದೆ.ಆದರೇ ಅಧ್ಯಾತ್ಮದ ಶ್ರೀಮಂತಿಕೆ ಬೆಕೆನಿಸುತ್ತದೆ,ಹೃದಯ ಶ್ರೀಮಂತಿಕೆ ನಮ್ಮನ್ನು ಬೆಳೆಸುತ್ತದೆ,ಅಧ್ಯಾತ್ಮದ ಬೆಳಕು ಮಾತ್ರ ಎಂದಿಗೂ ಕುಂಠೀತವಾಗದು ಅದನ್ನು ಕಂಡಷ್ಟು ಮತ್ತೆ ಮತ್ತೆ ಬೆಕೆನಿಸುತ್ತದೆ ಇಂಥ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೆಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ವಿ.ಎಸ.ಕುಂದ್ರಾಳ ಮಾತನಾಡಿ ಸಂಘದ ಚಟುವಟಿಕೆಗಳನ್ನು ವಿವರಿಸಿದರು.ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಡಾ:ಎಸ್.ಎಸ್.ಅಂಗಡಿ ಅವರು ಬಸವಣ್ಣನವೆ ವಚನಗಳಲ್ಲಿ ಸಾಮಾಜಿಕ ಚಿಂತನೆ ಕುರಿತು ಉಪನ್ಯಾಸ ನೀಡಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಅತ್ಯಂತ ಶ್ರೀಮಂತ ಸಂಸ್ಕೃತಿ ನಮ್ಮದಾಗಿದ್ದು ಇನ್ನೊಬ್ಬರ ಕಣ್ಣೊರಿಸುವ ಇನ್ನೊಬ್ಬರಿಗೆ ಸಹಾಯ ಮಾಡುವ ಸಂಸ್ಕೃತಿ ನಮ್ಮದಾಗಿದ್ದು ಅದನ್ನು ಎಲ್ಲರೂ ಉಳಿಸಿ ಬೆಳೆಸಿಕೊಂಡು ಹೋಗುವಂತೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಎರಡು ಹಾಡುಗಳನ್ನು ಹಾಡಿದ ಝೀ ಕನ್ನಡದ ಸರಿಗಮಪ ವಿಜೇತೆ ಲಕ್ಷ್ಮೀ ತಳವಾರ ಅವರನ್ನು ಮತ್ತು ದಾಸೋಹ ಸೇವೆ ನೀಡಿದ ಶ್ರೀಮತಿ ವಿನೋದಾ ಮತ್ತು ಶ್ರೀ ಶಂಕರ ಕೆಂಗನಾಳ ದಂಪತಿಗಳನ್ನು ಮತ್ತು ಶ್ರೀಮತಿ ನಿರ್ಮಲಾ ಮತ್ತು ಶ್ರೀ.ಸೋಮಶೇಖರ ಸುಳೆಗಾವಿ ದಂಪತಿಗಳನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಸ್ವಾಗತಿಸಿ ಕಾರ್ಯಕ್ರಮವನ್ನು ಶ್ರಿಕಾಂತ ಶಾನವಾಡ ನಿರ್ವಹಿಸಿದರು,ಎಸ್.ಆರ್.ಚೋಬಾರಿ ವಂದಿಸಿದರು.ಸಂಘದ ಕಾರ್ಯದಶರ್ಿ ಶಂಕರ ಶೆಟ್ಟಿ,ಇತರ ಪದಾಧಿಕಾರಿಗಳಾದ ವಿ.ಎಸ್. ಸಂಕೇಶ್ವರಿ,ಕಟ್ಟಿಮನಿ,ಚೌಗಲಾ, ಮುಂತಾದವರು ಉಪಸ್ಥಿತರಿದ್ದರು.