ಭಾರತ ಭವ್ಯವಾದ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ: ಬಸವಲಿಂಗಶ್ರೀ

India is a country with a magnificent culture: Basavalingashree

ಭಾರತ ಭವ್ಯವಾದ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ: ಬಸವಲಿಂಗಶ್ರೀ 

ಇಂಡಿ 07: ಭಾರತ ಜಗತ್ತಿನಲ್ಲಿ ಅತ್ಯಂತ ಭವ್ಯವಾದ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರವಾಗಿದೆ.ಭಾರತದ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಅತಿ ಅವಶ್ಯವಾಗಿದೆ. ಆ ಕೆಲಸವನ್ನು ಸಿಪಿಐ ಡಾ.ಜ್ಯೋತಿರ್ಲಿಂಗ ಹೊನ್ನಕಟ್ಟಿ ಅವರು ಮಾಡುತ್ತಿರುವುದು ಶ್ಲಾಘನೀಯ ಎಂದು ವಿಜಯಪೂರ ಸಿದ್ದೇಶ್ವರ ಜ್ಞಾನಯೋಗ ಆಶ್ರಯ ಪೀಠಾಧ್ಯಕ್ಷ ಬಸವಲಿಂಗ ಸ್ವಾಮಿಗಳು ಹೇಳಿದರು. ಅವರು ತಾಲೂಕಿನ ಬೆನಕನಹಳ್ಳಿ (ಹರಳಯ್ಯನಹಟ್ಟಿ) ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮೀಜಿಯವರ ಗುರು ನಮನ ಮತ್ತು ದಿವಂಗತ ಚಂದ್ರಾಮ ಹೊನ್ನಕಟ್ಟಿ ಮಾಸ್ಟರ್ ಇವರ 23ನೇಯ ಪುಣ್ಯರಾಧನೆ ಹಾಗೂ ಕನ್ನಡ ಸಾಹಿತಿ ಪೋಲಿಸ್ ಇಲಾಖೆಯ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಸಿಪಿಐ ಡಾ. ಜ್ಯೋತಿರ್ಲಿಂಗ ಹೊನ್ನಕಟ್ಟಿ ಅವರು ಬರೆದಿರುವ ಪುಸ್ತಕ ಬಿಡುಗಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು  ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆರ್ಶಿವಚನ ನೀಡಿದರು. ಕಾಯಕ ಪ್ರಶಸ್ತಿಯನ್ನು ಅಥಣಿ ಉಪವಿಭಾಗಾಧಿಕಾರಿ ಮಲ್ಲನಗೌಡ ಝರೆ, ಪತ್ರಕರ್ತ ಸಿದ್ದಯ್ಯ ಹಿರೇಮಠ, ಪುರಾಣಿಕ ಶಿವಾನಂದಯ್ಯ ಹಿರೇಮಠ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.  ಮಾಸ್ತರ ಪ್ರಶಸ್ತಿಯನ್ನು ನಿವೃತ್ತ ಪ್ರಾಚಾರ್ಯ ವಿ ಡಿ ಐಹೊಳ್ಳಿ, ಸಿದ್ದಣ್ಣ ಉತ್ನಾಳ, ನಿಜಣ್ಣ ಎಂ ಕಾಳೆ, ಬಸವರಾಜ ನಾರಾಯಣಪುರ, ಮುರಿಗೆಪ್ಪ ಅಂಗಡಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.  ಐವತ್ತು ಜನರಿಗೆ ಹೆಲ್ಮೆಟ್ ನೀಡಲಾಯಿತು. ಅಧ್ಯಕ್ಷತೆಯನ್ನು ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಸವರಾಜ ಇಂಡಿ ಅವರು ವಹಿಸುವರು. ಉಪಸ್ಥಿತರಿದ್ದ ಜ್ಞಾನನಂದ ಸ್ವಾಮಿಗಳು, ಆತ್ಮಾನಂದ ಸ್ವಾಮಿಗಳು, ಆಲಮೇಲದ ಜಗದೇವ ಮಲ್ಲಬೊಮ್ಮಯ್ಯ ಸ್ವಾಮಿಗಳು ಶಿವಾನಂದ ಶಾಸ್ತ್ರಿಗಳು, ಮಲ್ಲನಗೌಡ ಝರೆ ಸೇರಿದಂತೆ ಅನೇಕರು ಮಾತನಾಡಿದ ಈ ಕಾರ್ಯಕ್ರಮದಲ್ಲಿ ಗುರು ಹಿರಿಯರ ಬೆನಕನಹಳ್ಳಿ (ಹರಳಯ್ಯನಹಟ್ಟಿ) ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ರಾತ್ರಿಯಿಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.