ಲೋಕದರ್ಶನ ವರದಿ
ಗದಗ 19: ಮಹಿಳೆಯರಲ್ಲಿ ದೈವತ್ವವನ್ನು ಕಾಣುವ ಮೂಲಕ ವಿಶ್ವಕ್ಕೆ ನಾಗರಿಕತೆ ಕಲಿಸಿದ ದೇಶ ಭಾರತ ಎಂದು ಹೊಸಳ್ಳಿ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು.
ಬೆಟಗೇರಿ ಹುಯಿಲಗೋಳರೋಡ್ ಗೌರಿಗುಡಿ ಓಣಿಯ ಗೌರಿಶಂಕರ ದೇವಸ್ಥಾನದ 25ನೇ ವಾಷರ್ಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲದರಲ್ಲಿಯೂ ನಾವು ದೇವರನ್ನು ಕಾಣುತ್ತೇವೆ. ದೈವತ್ವದ ಮನಸ್ಸುಳ್ಳವರು ನಾವು. ಹೆಣ್ಣುಮಕ್ಕಳನ್ನು ದೈವತ್ವರೂಪದಲ್ಲಿ ಕಂಡ ದೇಶ ಭಾರತ. ಧರ್ಮವನ್ನು ಅನುಸರಿಸದಿದ್ದರೆ ಬದುಕು ವಿನಾಶವಾಗುವುದು ನಿಶ್ಚಿತ. ಕೆಳಗೆ ಬಿದ್ದವರ ಕಣ್ಣೀರೊರೆಸುವುದೇ ಮನಷ್ಯತ್ವ. ಮನಸ್ಸಿನಲ್ಲಿ ಮನುಷ್ಯತ್ವವಿರಬೇಕು. ಈ ಪರಂಪರೆಯನ್ನು ಪಾಲಿಸಿಕೊಂಡು ಬದುಕು ಸಾಗಿಸಿದವರ ಬದುಕಲ್ಲಿ ನಿತ್ಯವೂ ಶ್ರಾವಣ ಇದ್ದಂತೆ. ಮನುಷ್ಯತ್ವ ಇದ್ದಲ್ಲಿ ಧರ್ಮವಿದೆ ಎಂದು ಹೊಸಳ್ಳಿ ಶ್ರೀಗಳು ಹೇಳಿದರು.
ಯುವಕರು ಚೆನ್ನಾಗಿ ದುಡಿಯಿರಿ, ಉತ್ತಮ ಊಟ ಮಾಡಿ, ಮತ್ತೊಬ್ಬರ ಹಣ, ಆಸ್ತಿಗಾಗಿ ಆಶೆ ಪಟ್ಟು ಇನ್ನೊಬ್ಬರ ಮನೆಯನ್ನು ಮುರಿಯಬೇಡಿ, ಭಗವಂತನನ್ನು ನಂಬಿ ಬದುಕಿ, ನಿಮ್ಮನ್ನು ದೇವರು ಕಾಪಾಡುತ್ತಾನೆ. ತಂದೆ-ತಾಯಿಯರನ್ನು ಕಡೆಗಾಣಿಸಬೇಡಿ, ತಾಯಿಗಿರುವಷ್ಟು ಗೌರವ ವಿಶ್ವದಲ್ಲಿ ಮತ್ತಾರಿಗೂ ಇಲ್ಲ. ತಂದೆ ತಾಯಿಯರೇ ನಿಜವಾದ ಸಂಪತ್ತು ಎಂದು ಬೂದೀಶ್ವರ ಸ್ವಾಮೀಜಿ ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯ ಮಲ್ಲಿಕಾಜರ್ುನ ಚಿನ್ನೂರ ಮಾತನಾಡಿ, ಸಮಾಜವೆಂಬುದು ನಮ್ಮ ಅಸ್ಮಿತೆ, ಸಮಾಜದ ಕೆಲಸ ದೇವರ ಕೆಲಸವಿದ್ದಂತೆ. ಪ್ರತಿಯೊಬ್ಬರೂ ನಿಷ್ಕಲ್ಮಶ ಮನಸ್ಸಿನಿಂದ ಸಮಾಜ ಸೇವೆಗೆ ಮುಂದಾಗಬೇಕು. ಗೌರಿಗುಡಿ ಓಣಿಯ ಒಗ್ಗಟ್ಟು, ಸಂಗಟನೆ ಬಗ್ಗೆ ಹೆಮ್ಮೆ ಎನಿಸುತ್ತದೆ. ಇಂತಹ ಒಗ್ಗಟ್ಟನ್ನು ನಮ್ಮ ಸಮಾಜದ ಯುವಕರು ಎಲ್ಲೆಡೆ ಮಾಡಲು ಮುಂದಾಗಬೇಕು ಎಂದರು. ಸಮಾಜದ ಅಧ್ಯಕ್ಷ ವೀರಣ್ಣ ಮುಳ್ಳಾಳ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದವರನ್ನು ಅಭಿನಂದಿಸಿದರು.
ಶಿವಪುತ್ರಪ್ಪ ಕುಂದಗೋಳ, ಶಿವಪುತ್ರಪ್ಪ ಬೆಂತೂರ, ಬಸಟ್ಟಪ್ಪ ಕಣವಿ, ಬಸವಣ್ಣಪ್ಪೆ ಮಾಳಶೆಟ್ಟಿ, ಸಂಗಪ್ಪ ಪಡೆಸೂರ, ಗಣೇಶಸಿಂಗ್ ಬ್ಯಾಳಿ ವೇದಿಕೆಯಲ್ಲಿದ್ದರು. ಬಸವರಾಜ ಕುಂದಗೋಳ ಸ್ವಾಗತಿಸಿದರು. ಶ್ರೀನಿವಾಸ ಹಡಪದ, ಸಿದ್ದು ಮುಳ್ಳಾಳ ನಿರೂಪಿಸಿದರು. ಗೌರಿಶಂಕರ ದೇವಸ್ಥಾನದ 25ನೇ ವಾಷರ್ಿಕೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಶರಣಯ್ಯ ಶಿವಪ್ಪಯ್ಯನಮಠ ವೈದಿಕತ್ವದಲ್ಲಿ ವಿಶೇಷ ಪೂಜೆ, ಅಭಿಷೇಕ ಕಾರ್ಯಕ್ರಮಗಳು ಜರುಗಿದವು. ಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆ ಮೂಲಕ ವೀರಭದ್ರೇಶ್ವರ ದೇವಸ್ಥಾನದಿಂದ ಆಭಿನವ ಬೂದೀಶ್ವರ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ಗೌರಿಗಣೇಶ ದೇವಸ್ಥಾನಕ್ಕೆ ಕರೆ ತರಲಾಯಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಿತು.