ಇಂಡಿ: ಕಬ್ಬಿನ ಬಾಕಿ ಬಿಲ್ಲು ಪೂರೈಕೆ ಅಗ್ರಹಿಸಿ ರೈತರಿಂದ ಸಿರಸ್ತೆದಾರರಿಗೆ ಮನವಿ

ಇಂಡಿ 17: ತಾಲೂಕಿನ ಹಿರೇಬೇವನೂರ ಗ್ರಾಮದ ಜ್ಞಾನಯೋಗಿ ಶಿವಕುಮಾರ ಸಕ್ಕರೆ ಕಾರಖಾನೆಯಿಂದ ರೈತರ ಕಬ್ಬಿನ ಬಾಕೀ ಬಿಲ್ಲು ಪೂರೈಕೆಯಾಗಬೇಕಿದೆ.  ಕೇಳಲು ಹೋದರೆ ರೈತರಿಗೆ ಸಂಬಂಧಿಸಿದ ಕಾರಖಾನೆಯವರು  ಸರಿಯಾಗಿ ಸ್ಪಂದಿಸುತ್ತಿಲ್ಲ.  ಕಾರಣ ಕೂಡಲೇರೈತರ ಕಬ್ಬಿನ ಬಾಕೀ ಹಣವನ್ನು ಪೂರೈಸುವಂತೆ ಮಾಡಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ  ಕಾರಖಾನೆಯ ಮುಂದೆ ಕಾರಖಾನೆಯನ್ನು ಬಂದ್ ಮಾಡಿ ರೈತರು ಹೋರಾಟ ಮಾಡಬೇಕಾಗುತ್ತದೆ ಎಂದು ತಾಲೂಕಿನ ಹಿರೇಬೇವನೂರ ಸಕ್ಕರೆ ಕಾರಖಾನೆಗೆ ಕಬ್ಬು ಪೂರೈಸಿದ ರೈತರು ಮಂಗಳವಾರ ಮಿನಿವಿಧಾನಸೌಧಕ್ಕೆ ಆಗಮಿಸಿ ತಸ್ಹೀಲದಾರ ಅನುಪಸ್ಥಿತಿಯಲ್ಲಿ ಕಚೇರಿಯ ಸಿರಸ್ತೆದಾರ. ಕೆ.ವಾಯ್.ಹೊಸಮನಿ ಅವರಿಗೆ  ಮನವಿಪತ್ರ ಸಲ್ಲಿಸಿದ್ದಾರೆ.

ತಾಲೂಕಿನಲ್ಲಿ ಸರಿಯಾಗಿ ಮಳೆಯಾಗದೆ ರೈತರ ಪರೀಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಕಷ್ಟದಲ್ಲಿಯೂ ರೈತರು ಸಾಲ ಶೂಲ ಮಾಡಿ ಕಬ್ಬುಬೆಳೆದು  ಕಾರಖಾನೆಗೆ ಕಬ್ಬು ಪೂರೈಸಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕಬ್ಬಿನ ಬಾಕೀ ಬಿಲ್ಲು ಪೂರೈಸುತ್ತಿಲ್ಲ. ಕೇಳಲು ಹೋದರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರೈತರ ನೋವಿಗೆ ಸ್ಪಂದಿಸಿ ರೈತರ ಕಬ್ಬಿನ ಬಾಕೀ ಹಣವನ್ನು ಕಾರಖಾನೆಯವರು ಪೂರೈಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕಾರಖಾನೆಯನ್ನು ಬಂದ ಮಾಡಿ ಕಾರಖಾನೆಯ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂಬ ಮನವಿಪತ್ರವನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ರೈತರುಗಳಾದ ಬಸನಗೌಡ ರೇ.ಪಾಟೀಲ, ರಾಮಂದ್ರ ಮೇತ್ರಿ, ಬಸವರಾಜ ಬೋಳೇಗಾಂವ, ಹಣಮಂತ ಉಪ್ಪಾರ, ಈರಪ್ಪ ನಾಟೀಕಾರ, ಬಸಪ್ಪ ನಾಟೀಕಾರ, ಬಿ.ಸುಧಾಕರ, ಶ್ರೀಶೈಲ ನಾಟೀಕಾರ, ಬಸಯ್ಯ ಹಿರೇಮಠ, ಗುರುಪಾದಯ್ಯ ಮಠ, ಕೃಷ್ಣಾ ರಾಠೋಡ, ಸಂಗಪ್ಪ ನಾವದಗಿ, ಸಿದ್ದಪ್ಪ ನಾಯ್ಕೋಡಿ, ನಾಗಪ್ಪ ಮಣೂರ, ಲಕ್ಮಣ ಭುಯ್ಯಾರ, ಪರಶುರಾಮ ಮಿರಗಿ, ಸಿದ್ದಪ್ಪ ನಿಂಬರ್ಗಾ, ನಾಗಪ್ಪ ಹ್ಯಾಟಿ, ಭೂತಾಳಿ ಪೂಜಾರಿ, ಮಲ್ಲಿಕಾರ್ಜುನ ಹೊಸಮನಿ, ಅಮಗೊಂಡ ವಡಿಯರ, ಬಸವರಾಜ ಪೂಜಾರಿ, ನಾನಾಗೌಡ ಪಾಟೀಲ, ಶಿವಯೋಗೆಪ್ಪ ನಾವಿ, ವಿಜಯಕುಮಾರ ಉಡಚಣ ಮುಂತಾದ ರೈತರು  ಇದ್ದರು.