ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

Inauguration of a clean drinking water unit

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ  

ಬ್ಯಾಡಗಿ 31 : ನೀರು ಮಾನವನ ಪಾಲಿನ ಜೀವ ಜಲ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಶನಿವಾರ ಪಟ್ಟಣದ ಶಿಡೇನೂರಮಟ್ಟಿಯಲ್ಲಿ   ಡಾಖು ಮಹಾರಾಜರ ಜಾತ್ರಾ ಮಹೋತ್ಸವದ ನಿಮಿತ್ತ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಮಾತನಾಡಿದರು. ಮುಂಬರುವ ದಿನದಲ್ಲಿ ಈ ಭಾಗದಲ್ಲಿ ಜಾತ್ರೆಯು ನಡೆಯಲಿದ್ದು, ಜಾತ್ರೆಗೆ ಹೆಚ್ಚಿನ ಭಕ್ತರು ಆಗಮಿಸಿ ಅವರಿಗೆ ಶುದ್ದ ಕುಡಿಯುವ ನೀರಿನ ಸಮಸ್ಯೆಎದುರಾಗದಂತೆ ನೋಡಿಕೊಳ್ಳಲು ಅನುಕೂಲವಾಗುವ ದೃಷ್ಠಿಯಿಂದ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಮಾಡಲಾಗಿದ್ದು, ಅದರ ಪ್ರಯೋಜನ ಜಾತ್ರೆಯ ಜನತೆಗೆ ಮುಟ್ಟಲಿದೆ. ಜಾತ್ರಾ ಸಮಿತಿಯವರು ನೀರಿನ ಬಗ್ಗೆ ಬಹಳ ಕಾಳಜಿ ವಹಿಸಿ ನೀರಿನ ದುರುಪಯೋಗದಂತೆ, ದೂರದ ಊರುಗಳಿಂದ ಜಾತ್ರೆಗೆ ಬರಲಿರು ಭಕ್ತರಿಗೆ ಶುದ್ಧ ಕುಡಿಯುವ ನೀರಿನ ಬವಣೆಯಾಗದಂತೆ ಕ್ರಮ ವಹಿಸಿ ಶುದ್ಧ ಕುಡಿಯುವ ನೀರಿನ ಪ್ರಯೋಜನವಾಗುವಂತೆ ನೋಡಿಕೊಳ್ಳಬೇಕೆಂದರು.ಶುದ್ದ ಕುಡಿಯುವ ನೀರಿನ ಘಟಕದ ಅಕ್ಕ ಪಕ್ಕದಲ್ಲಿ ಸಭಾಭವನ ಮತ್ತು ಜಾತ್ರಾ ಭಕ್ತರಿಗೆ ವಿಶ್ರಾಂತಿ ಕೋಣೆ ಕಟ್ಟಡಕ್ಕಾಗಿ ಶಾಸಕರ ಅನುದಾನದಲ್ಲಿ ಎರಡು ಹಂತದಲ್ಲಿ ಅನುದಾನ ನೀಡಿ ಸಭಾಭವನ ನಿರ್ಮಾಣ ಮಾಡಿ ಕೊಡುವ ಭರವಸೆಯನ್ನು ಭಕ್ತರಿಗೆ ನೀಡಿದರು. ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು   ಡಾ.ಕುಮಾರ ಮಹಾರಾಜರು ವಹಿಸಿದ್ದರು. ಸಭೆಯಲ್ಲಿ  ಗಂಗೂಬಾಯಿ ಲಮಾಣಿ, ಅರ್ಜುನ ಲಮಾಣಿ, ದ್ಯಾವಪ್ಪ ಅಂಗಡಿ ಇದ್ದರು.