ಸನ್ಮತಿ ಸೂರ್ಯ ತ್ಯಾಗಿ ಭವನ ಲೋಕಾರ್ಪಣೆ

Inauguration of Sanmati Surya Tyagi Bhavan

ಕಾಗವಾಡ, 06: ತಾಲೂಕಿನ ಲೋಕೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸನ್ಮತಿ ಸೂರ್ಯ ತ್ಯಾಗಿ ಭವನವನ್ನು ಮಾಜಿ ಸಚಿವ ಹಾಗೂ ಮಾಜಿ ಶಾಸಕ ಶ್ರೀಮಂತ ಪಾಟೀಲ ರವಿವಾರ ದಿ. 06 ರಂದು ಲೋಕಾರ್ಪಣೆಗೊಳಿಸಿದರು. 

ಶ್ರೀ 108 ಆಚಾರ್ಯ ಸೂರ್ಯಸಾಗರ ಮುನಿಮಹಾರಾಜರ ಸಾನಿಧ್ಯದಲ್ಲಿ ಲೋಕೂರು ಗ್ರಾಮದಲ್ಲಿ ನೂತನ ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರ ಮತ್ತು ಮಂದಿರದ ಎದುರಿಗೆ ಭವ್ಯ ಮಾನಸಸ್ಥಂಬದ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ತ್ಯಾಗಿ ಭವನದ ವಾಸ್ತುಶಾಂತಿ ಮತ್ತು ಲೋಕಾರೆ​‍್ಣ ಕಾರ್ಯಕ್ರಮವು ಎರಡು ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳಿಂದ ನಡೆಯುತ್ತಿದ್ದು, ಇಂದು ಶ್ರೀಮಂತ ಪಾಟೀಲ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತ್ಯಾಗಿ ಭವನವನ್ನು ಲೋಕಾರೆ​‍್ಣಗೊಳಿಸಿದರು. 

ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ನಂತ ಆಚಾರ್ಯ ಶ್ರೀ ಸೂರ್ಯ ಸಾಗರ ಮುನಿಮಹಾರಾಜರ ಮಂಗಲ ಪ್ರವಚನ ಕಾರ್ಯಕ್ರಮ ನಡೆಯಿತು. 

ಈ ಸಮಯದಲ್ಲಿ ಯುವ ಮುಖಂಡ ಶ್ರೀನಿವಾಸ ಪಾಟೀಲ, ಸುಧಾಕರ ಭಗತ, ಮುಂಬೈನ ವಿಶ್ವಸೇನ ಮಿಂಡಾ, ಇಚಲಕರಂಜಿಯ ಮಹಾವೀರ ಕಸಲಿವಾಲ, ಸೇಲಂನ ಅಜೀತ ಕಸಲಿವಾಲ, ಶಿರಗುಪ್ಪಿಯ ಡಾ. ಮಹಾಧವಲ ಭೋಮಾಜ, ಶಿಕೋಹಾಬಾದನ ಇಂದ್ರಧ್ವಜ ಜೈನ, ಅಮೃತ ಕುಡಚಿ, ಅಕಲುಜ್‌ನ ವೈಭವ ದೋಶಿ, ಕುಪವಾಡದ ಅಭಯ ಪಾಟೀಲ, ರವೀಂದ್ರ ದೇವಮೋರೆ, ಡಿ.ಎ. ಪಾಟೀಲ, ರಾಜೇಶ ದೋಶಿ, ಶೇಷರಾಜ ಪಟನಿ, ಭಾವಚಂದ ಪಟನಿ ಸೇರಿದಂತೆ ನೂರಾರು ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.