ಕರ್ನಾಟಕ ರಾಜ್ಯ ಕಾರ್ಮಿಕ ಶಕ್ತಿಯ ಪದಾಧಿಕಾರಿಗಳ ನೇಮಕ
ಬಳ್ಳಾರಿ 08: ನಗರದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಶಕ್ತಿಯ, ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷರನ್ನಾಗಿ ಕೊರ್ಲಗುಂದಿ ಪಂಪಾಪತಿ ಅವರನ್ನು ನೇಮಿಸಲಾಯಿತು.
ಕಲ್ಯಾಣ ಕರ್ನಾಟಕ ಮಹಿಳಾ ಅಧ್ಯಕ್ಷರನ್ನಾಗಿ ವಿಜಯಲಕ್ಷ್ಮಿ ಮರೀಶೆಟ್ರು (ವಕೀಲರು) ಕಂಪ್ಲಿ ಅವರನ್ನು ನೇಮಿಸಲಾಯಿತು. ಹಾಗೆಯೇ ್ರ್ರಥಮ ಬಾರಿಗೆ ನೂತನ ಬಳ್ಳಾರಿ ಜಿಲ್ಲಾ ಅಧ್ಯಕ್ಷರನ್ನಾಗಿ ಎಚ್.ಎಸ್.ಸುಧಕರ್ ಹೆಗಡೆ ಅವರನ್ನು, ಜಿಲ್ಲಾ ಮಹಿಳಾ ಅಧ್ಯಕ್ಷರನ್ನಾಗಿ ರಿಹಾನ ಅವರನ್ನು ಹಾಗೂ ಇನ್ನಿತರ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪತ್ರಗಳನ್ನು ನೀಡಲಾಯಿತು. ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಶಕ್ತಿಯ ಕಲ್ಯಾಣ ಸಂಘದ ಶರತ್ತುಗಳ ಹಾಗೂ ನಿಯಮಗಳಬದ್ಧವಾಗಿ ಸಾಮಾಜಿಕ ಸೇವೆ ಮಾಡುವುದರಲ್ಲಿ ಆದ್ಯತೆ ನೀಡಿ ಮುಂದಿನ ದಿನಗಳಲ್ಲಿ ಕಾರ್ಯ ಪ್ರವೃತ್ತಿ ಕೊಳ್ಳುತ್ತೇವೆಂದು ಪ್ರಮಾಣವಚನ ಸ್ವೀಕರಿಸಿದರು ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಶಕ್ತಿಯ ಕಲ್ಯಾಣ ಕರ್ನಾಟಕದ ರಾಜ್ಯಾಧ್ಯಕ್ಷರು ಎಸ್ ದೇವಾನಂದ ಕುಮಾರ್ ತಿಳಿಸಿದರು.