ಸನ್ಮತಿ ಸೂರ್ಯ ತ್ಯಾಗಿ ಭವನ ಲೋಕಾರ್ಪಣೆ
Inauguration of Sanmati Surya Tyagi Bhavan
ಕಾಗವಾಡ, 06: ತಾಲೂಕಿನ ಲೋಕೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸನ್ಮತಿ ಸೂರ್ಯ ತ್ಯಾಗಿ ಭವನವನ್ನು ಮಾಜಿ ಸಚಿವ ಹಾಗೂ ಮಾಜಿ ಶಾಸಕ ಶ್ರೀಮಂತ ಪಾಟೀಲ ರವಿವಾರ ದಿ. 06 ರಂದು ಲೋಕಾರ್ಪಣೆಗೊಳಿಸಿದರು.
ಶ್ರೀ 108 ಆಚಾರ್ಯ ಸೂರ್ಯಸಾಗರ ಮುನಿಮಹಾರಾಜರ ಸಾನಿಧ್ಯದಲ್ಲಿ ಲೋಕೂರು ಗ್ರಾಮದಲ್ಲಿ ನೂತನ ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರ ಮತ್ತು ಮಂದಿರದ ಎದುರಿಗೆ ಭವ್ಯ ಮಾನಸಸ್ಥಂಬದ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ತ್ಯಾಗಿ ಭವನದ ವಾಸ್ತುಶಾಂತಿ ಮತ್ತು ಲೋಕಾರೆ್ಣ ಕಾರ್ಯಕ್ರಮವು ಎರಡು ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳಿಂದ ನಡೆಯುತ್ತಿದ್ದು, ಇಂದು ಶ್ರೀಮಂತ ಪಾಟೀಲ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತ್ಯಾಗಿ ಭವನವನ್ನು ಲೋಕಾರೆ್ಣಗೊಳಿಸಿದರು.
ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ನಂತ ಆಚಾರ್ಯ ಶ್ರೀ ಸೂರ್ಯ ಸಾಗರ ಮುನಿಮಹಾರಾಜರ ಮಂಗಲ ಪ್ರವಚನ ಕಾರ್ಯಕ್ರಮ ನಡೆಯಿತು.
ಈ ಸಮಯದಲ್ಲಿ ಯುವ ಮುಖಂಡ ಶ್ರೀನಿವಾಸ ಪಾಟೀಲ, ಸುಧಾಕರ ಭಗತ, ಮುಂಬೈನ ವಿಶ್ವಸೇನ ಮಿಂಡಾ, ಇಚಲಕರಂಜಿಯ ಮಹಾವೀರ ಕಸಲಿವಾಲ, ಸೇಲಂನ ಅಜೀತ ಕಸಲಿವಾಲ, ಶಿರಗುಪ್ಪಿಯ ಡಾ. ಮಹಾಧವಲ ಭೋಮಾಜ, ಶಿಕೋಹಾಬಾದನ ಇಂದ್ರಧ್ವಜ ಜೈನ, ಅಮೃತ ಕುಡಚಿ, ಅಕಲುಜ್‌ನ ವೈಭವ ದೋಶಿ, ಕುಪವಾಡದ ಅಭಯ ಪಾಟೀಲ, ರವೀಂದ್ರ ದೇವಮೋರೆ, ಡಿ.ಎ. ಪಾಟೀಲ, ರಾಜೇಶ ದೋಶಿ, ಶೇಷರಾಜ ಪಟನಿ, ಭಾವಚಂದ ಪಟನಿ ಸೇರಿದಂತೆ ನೂರಾರು ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 