ಲೋಕದರ್ಶನ ವರದಿ
ಬೆಳಗಾವಿ, 8: ಹಿಂದುಳಿದ ಪಂಗಡದ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಹಾಗೂ ಈ ವಿದ್ಯಾಥರ್ಿಗಳ ಉದ್ಯೋಗ ಸಾಮಥ್ರ್ಯಗಳನ್ನು ಹೆಚ್ಚಿಸಲು, ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸಹಯೋಗದೊಂದಿಗೆ ಬೆಳಗಾವಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ) ಖಅ,ಖಖಿ ವಿದ್ಯಾಥರ್ಿಗಳಿಗೆ ಕೌಶ್ಯಲ್ಯ ಮತ್ತು ವ್ಯಕ್ತಿತ್ವ ವಿಕಸನ ಕೇಂದ್ರವನ್ನು ಸ್ಥಾಪಿಸಿದೆ.ಹೈ ಸ್ಪೀಡ್ ಅಂತಜರ್ಾಲವನ್ನು ಹೊಂದಿದ 50ಕ್ಕಿಂತ ಹೆಚ್ಚು ಗಣಕ ಯಂತ್ರಗಳನ್ನು ಒಳಗೊಂಡಿದೆ. ಇದನ್ನು ಜಿ.ಐ.ಟಿಯಲ್ಲಿ ಶುಕ್ರವಾರದಂದು ಬೆಳಗಾವಿಯ ಜಿಲ್ಲೆಯ ಎಸ ಟಿ ಕಾಪರ್ೊರೇಶನ್ ಅಧಿಕಾರಿಗಳಾದ ಡಾ. ಉಮಾ ಸಾಲಿಗೌಡಾರ ಈ ಕೇಂದ್ರವನ್ನು ಉದ್ಘಾಟಿಸಿದರು. ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಎರಡೂ ರಾಜ್ಯಗಳು ಅನೇಕ ಯೋಜನೆಗಳಿಗಾಗಿ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಬಜೆಟ್ ಅನ್ನು ನಿಗದಿಪಡಿಸುತ್ತಿವೆ ಮತ್ತು ಎಸ್ಸಿ, ಎಸ್ಟಿಗೆ ಸೇರಿದ ವಿದ್ಯಾಥರ್ಿಗಳ ಶೈಕ್ಷಣಿಕ ಸ್ಥಿತಿಯನ್ನು ಹೆಚ್ಚಿಸಲು ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ರೀತಿಯ ಯೋಜನೆಗಳನ್ನು ಹಾಗೂ ಅವರ ಸಂವಹನ ಮತ್ತು ತಾಂತ್ರಿಕ ಕೌಶಲಗಳನ್ನು ಸುಧಾರಿಸಲು ವಿದ್ಯಾಥರ್ಿಗಳಿಗೆ ಧನ ಸಹಾಯದ ಮೂಲಕ ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದರು. ಈ ಯೋಜನೆಗಳನ್ನು ಸರಿ ಯಾಗಿ ಸದು ಪಯೋಗ ಮಾಡಿಕೊಳ್ಳಲು ಎಸ್ಸಿ , ಎಸ್ಟಿ ಸಮುದಾಯದ ವಿದ್ಯಾಥರ್ಿಗಳಿಗೆ ಕರೆ ಕೊಟ್ಟು ಸಮಾಜದಲ್ಲಿ ಹೆಚ್ಚು ಸಮರ್ಥರಾಗಲು ಅವರನ್ನು ಆಗ್ರಹಿಸಿದರು. ಜೊತೆಗೆ ನಿಮ್ಮ ಪರಿಶ್ರಮ ಮತ್ತು ಪ್ರಾಮಾಣಿಕತೆಗಳು ನಿಮ್ಮನ್ನು ಯಶಸ್ಸಿನ ಉತ್ತುಂಗಕ್ಕೇರಿಸುತ್ತವೆ ಎಂದು ಅವರು ಹೇಳಿದರು. ನೀವು ಜಿ ಐ ಟಿ ಯಂತಹ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದೀರಿ ಅಂದರೆ ಅದು ನಿಮ್ಮ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿ ಆದರೆ ಬದಲಾಗುತ್ತಿರುವ ಜಗತ್ತಿನಲ್ಲಿ ಸಾಧನೆ ವೈಯಕ್ತಿಕವಾಗಿ ಮಾಡುವ ಪ್ರಾಮಾಣಿಕ ಪ್ರಯತ್ನದ ಮೇಲೆ ಅವಲಂಬಿತವಾಗಿರುತ್ತದೆ ಇಂಡಿ ಅಭಿಪ್ರಾಯಪಟ್ಟರು.
ಕೆಎಲ್ಎಸ ಕಾಯರ್ಾಧ್ಯಕ್ಷ ಎಂ. ಆರ್. ಕುಲಕಣರ್ಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ. ಯು. ಏನ್ .ಕಾಲಕುಂದ್ರಿಕರ ಗೌರವ ಅತಿಥಿಗಳಾಗಿದ್ದರು. ಕೆಎಲ್ಎಸ ಸದಸ್ಯ ರಾಜ್ ಬೆಳಗಾವಂಕರ, ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಎ. ಎಸ. ದೇಶಪಾಂಡೆ ಸ್ವಾಗತಿಸಿದರು. ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ವಿ. ಎಸ. ಮಜಲಿ ಕೇಂದ್ರದ ವರದಿಯನ್ನು ಓದಿದರು. ಎಸ್ಸಿ, ಎಸ್ಟಿ ಕೇಂದ್ರದ ಸಂಚಾಲಕ ಪ್ರೊ ರಮೇಶ್ ಮೇದಾರ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಆರತಿ ಶಹಾಪೂರಕರ ನಿರೂಪಿಸಿದರು.