ಸೋಗಿಯಲ್ಲಿ ನಿವೃತ್ತ ನೌಕರರ ಸೇವಾ ಟ್ರಸ್ಟ್‌ ಉದ್ಘಾಟನೆ

Inauguration of Retired Employees Service Trust at Sogi

ಸೋಗಿಯಲ್ಲಿ ನಿವೃತ್ತ ನೌಕರರ ಸೇವಾ ಟ್ರಸ್ಟ್‌ ಉದ್ಘಾಟನೆ

ಹೂವಿನಹಡಗಲಿ 12: ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವ ಸೋಗಿ ಗ್ರಾಮದ ಹಿರಿಯರು ಟ್ರಸ್ಟ್‌ ರಚಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಶುಕ್ರವಾರ ನಿವೃತ್ತ ನೌಕರರ ಸೇವಾ ಟ್ರಸ್ಟ್‌ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಶನಿವಾರ ಉದ್ಘಾಟಿಸಿ’ಗ್ರಾಮದ ನಿವೃತ್ತ ನೌಕರರ ಸಾಮಾಜಿಕ ಕಾಳಜಿ ಇತರರಿಗೆ ಮಾದರಿ ಯಾಗಿದೆ. ಗ್ರಾಮೀಣ ಅನಾರೋಗ್ಯ ಜನರು ತೊಂದರೆಗಳನ್ನು ನಿರ್ಲಕ್ಷಿಸದೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಮಕ್ಕಳಿಗೆಹೂವಿನಹಡಗಲಿ ತಾಲ್ಲೂಕು ಸೋಗಿ ಗ್ರಾಮದಲ್ಲಿ ನಿವೃತ್ತ ನೌಕರರ ಸೇವಾ ಟ್ರಸ್ಟ್‌ಅನ್ನು ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಉದ್ಘಾಟಿಸಿದರು.ಶಿಕ್ಷಣದ ಜತೆಗೆ ಸಂಸ್ಕಾರ ನೀಡಿ ಉತ್ತಮ ನಾಗರಿಕರನ್ನಾಗಿ ಬೆಳೆಸಬೇಕು’ ಎಂದರು.ಹಿರಿಯ ವೈದ್ಯರಾದ ಡಾ.ಪಟ್ಟದ ಸಿದ್ದಮಲ್ಲಪ್ಪ, ಡಾ.ಚನ್ನಬಸಪ್ಪ, ಡಾ.ಶ್ರೀನಿವಾಸ ಇದ್ದರು. ಟ್ರಸ್ಟ್‌ ಅಧ್ಯಕ್ಷ ವೀರ​‍್ಪ ಅಧ್ಯಕ್ಷತೆ ವಹಿಸಿದ್ದರು.ಗೌರವ ಅಧ್ಯಕ್ಷ ಗಡ್ಡಿ ಪತ್ರ​‍್ಪ, ಸದಸ್ಯರಾದ ಹಾಲಪ್ಪ, ಮಲ್ಲಿನಾಥ. ಪತ್ರಿಬಸಪ್ಪ, ಬಸಲಿಂಗಪ್ಪ, ಕೊಟ್ರ​‍್ಪ ಇದ್ದರು.ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಯಿತು.