ನಾಳೆ ಕೊಪ್ಪಳದಲ್ಲಿ ಲಯನ್ಸ್ ಡೇ ಕೇರ್ ಸೆಂಟರ್ ಉದ್ಘಾಟನೆ
ಕೊಪ್ಪಳ 25: ಲಯನ್ಸ್ ಕ್ಲಬ್ ಕೊಪ್ಪಳ ತನ್ನ 49 ನೇ ವರ್ಷದ ಸೇವಾ ಸಾರ್ಥಕ್ಯದಲ್ಲಿ ಮುನ್ನಡೆಯುತ್ತಿದೆ. ಎರಡು ಶಾಲೆಗಳು, ಕಣ್ಣಿನ ಆಸ್ಪತ್ರೆ, ಡಯಲಿಸಿಸ್ ಸೆಂಟರ್ ಲಯನ್ಸ್ ಕ್ಲಬ್ನ ತಾಶ್ವತ ಅಂಗ ಸಂಸ್ಥೆಗಳು, ಈ ಅಂಗ ಸಂಸ್ಥೆಗಳಿಗೆ ಮತ್ತೊಂದು ಅಂಗಸಂಸ್ಥೆಯಾಗಿ ಇದೀಗ ’ಲಯನ್ಸ್ ಡೇ ಕೇರ್ ಸೆಂಟರ್’ ಇದೇ ದಿ. 27 ಶುಕ್ರವಾರ ಬೆಳಿಗ್ಗೆ 10:30 ಗಂಟೆಗೆ ಉದ್ಘಾಟನೆಯಾಗುತ್ತಿದೆ ಎಂದು ಕೊಪ್ಪಳ ಲೈನ್ಸ್ ಕ್ಲಬ್ ಸಂಸ್ಥೆಯ ಮುಖ್ಯಸ್ಥ ಬಸವರಾಜ್ ಬಳ್ಳೊಳ್ಳಿ ಹೇಳಿದರು.
ಅವರು ಬುಧವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನ್ದಲ್ಲಿ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದ ಅವರು ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಇವರು ಲಯನ್ಸ್ ಡೇ ಕೇರ್ ಸಂಕೀರ್ಣದ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಎಂ.ಜೆ.ಎಫ್. ಲಯನ್ ಮನೋಜ ಎಲ್. ಮಾನೇಕ್ ಮತ್ತು ಲಯನ್ಸ್ ಕ್ಲಬ್ನ ಇನ್ನಿತರ ಉನ್ನತಾಧಿಕಾರಿಗಳಾದ ಲಯನ್ ಡಾ. ರವಿ ಎಲ್. ನಾಡಿಗೇರ, ಡಾ. ಆನಂದ ಹೋಟೀಸ್, ಲಯನ್ ಸುಗ್ಗಲಾ ಯಳಮಲಿ ಆಗಮಿಸಲಿದ್ದಾರೆ.
ಕೊಪ್ಪಳ ಲಯನ್ಸ್ ಕ್ಲಬ್ನ ಎಲ್ಲ ಸದಸ್ಯರೂ ಭಾಗವಹಿಸಲಿದ್ದಾರೆಎಂದು ವಿವರಿಸಿದರು,ಲಯನ್ಸ್ ಕ್ಲಬ್ನ ಚಾರ್ಟರ್ ಸದಸ್ಯರು, ಹಿರಿಯ ಮಾರ್ಗದರ್ಶಕರೂ ಆಗಿದ್ದ ಲಿಂಗೈಕ್ಯ ಲಯನ್ ಮಲ್ಲಿಕಾರ್ಜುನ ಸೋಮಲಾಪುರ ಅವರ ಸ್ಮರಣಾರ್ಥ ಶ್ರೀ ಮಲ್ಲಿಕಾರ್ಜುನ ಸೋಮಲಾಪುರ ಮೆಮೋರಿಯಲ್ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಕೊಪ್ಪಳದ ಸಹಯೋಗದಲ್ಲಿ ಈ ಲಯನ್ಸ್ ಡೇ ಕೇರ್ ಸೆಂಟರ್ ಕಾರ್ಯಾರಂಭ ಮಾಡಲಿದೆ ಎಂದು ಮಾಹಿತಿ ನೀಡಿದರುಕಾರ್ಯದರ್ಶಿ ಪ್ರದೀಪ್ ಸೋಮಲಾಪುರ್ ಮಾತನಾಡಿಕೊಪ್ಪಳ ಮತ್ತು ಸುತ್ತಲಿನ ಜನತೆಗೆ ಬಹುಪಯುಕ್ತವಾದ ಕೇರ್ ಸೆಂಟರ್ ಇದು, ಬಹುಶಃ ಇದು ಈ ಭಾಗದಲ್ಲಿ ಮೊದಲ ಪ್ರಯತ್ನ. ಬಡಜನರಿಗೆ ಮತ್ತು ಅವಶ್ಯಕತೆ ಇರುವವರಿಗೆ ಸುಲಭವಾಗಿ ಆರೋಗ್ಯದ ಸೌಲಭ್ಯಗಳು ಇಲ್ಲಿ ದೊರೆಯುತ್ತವೆ ಎಂದರು.ವಿವಿಧ ರೋಗಗಳ ತಜ್ಞರಿಂದ ಹೊರರೋಗಿ ವಿಭಾಗದಲ್ಲಿ ಪ್ರತಿದಿನ ಇಲ್ಲಿ ವೈದ್ಯಕೀಯ ಸೇವೆಗಳು ದೊರಕುತ್ತವೆ. ಮಂಗಳವಾರ ಮತ್ತು ಗುರುವಾರ ಕಾನ್ಸರ್, ಡರ್ಮಟಾಲಾಜಿಸ್ಟ್, ಜನರಲ್ ಸರ್ಜನ್, ಇ.ಎನ್.ಟಿ. ತಜರ ವಿಶೇಷ ಸಮಾಲೋಚನೆ ನಡೆಸಲಾಗುತ್ತದೆ ಎಂದು ಹೇಳಿದರು,ಲೈನ್ಸ್ ವೆಂಕಟೇಶ್ ಸಾನ್ಬಾಳ್ ಮಾತನಾಡಿಮಧುಮೇಹ ರೋಗಿಗಳಿಗೆ ವಿಶೇಷ ಮಧುಮೇಹ ಚಿಕಿತ್ಸಾಲಯವಿದೆ. ಮಧುಮೇಹ ರೋಗಕ್ಕೆ ಸಂಬಂಧಿಸಿದ ಹಲವು ಚಿಕಿತ್ಸೆಗಳನ್ನು ಅತೀ ಕಡಿಮೆ ದರದಲ್ಲಿ ಒದಗಿಸಲಾಗುವುದು.ಸಣ್ಣ ಶಸ್ತ್ರಚಿಕಿತ್ಸೆಗಳು, ಕೀಮೋಥೆರಪಿ, ಎಂಡೋಸ್ಕೋಪಿ, ಆ್ಯಂಟಿ ಬಯೋಟಿಕ್ ಚಿಕಿತ್ಸೆ, ಬ್ಲಡ್ ಟ್ರಾನ್ಸ್ ಪ್ಯೂಜನ್ ನಂತಹ ಸೇವೆಗಳನ್ನು ಬಡಜನಸ್ನೇಹಿ ರಿಯಾಯಿತಿ ದರದಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು.ಲೈನ್ಸ್ ಕ್ಲಬ್ ಅಧ್ಯಕ್ಷರಾದ ಪರಮೇಶ್ವರ್ಪ ಕೊಪ್ಪಳ ಮಾತನಾಡಿಹೊಸ ಮತ್ತು ಉಪಯಕ್ತ ಹೆಲ್ತ್ ಡೆಸ್ಕ್ (ಆರೋಗ್ಯ ಕೇಂದ್ರ) ಸೌಲಭ್ಯ ಆರಂಭಿಸಲಾಗಿದೆ. ಜನರು ತಮಗೆ ಅಗತ್ಯವಿರುವ ಆರೋಗ್ಯದ ಮತ್ತು ರೋಗಕ್ಕೆ ಸಂಬಂಧಿಸಿದ ವೈದ್ಯಕೀಯ ಮಾಹಿತಿಗಳನ್ನು ಕರೆ ಮಾಡುವುದರ ಮೂಲಕ ಪಡೆಯಬಹುದು. ಪ್ರತ್ಯೇಕ ಟೋಲ್ ಫ್ರೀ ಸಂಖ್ಯೆ ಲಭ್ಯವಿದೆ.ವೈದ್ಯಕೀಯ ಸಲಕರಣೆಗಳನ್ನು ಬಾಡಿಗೆ ಆಧಾರದ ಮೇಲೆ ಅಗತ್ಯವಿರುವವರಿಗೆ ದೊರಕಿಸಿಕೊಡುವ ಯೋಜನೆ ಇದು. ಕೆಲವರಿಗೆ ದುಬಾರಿಯಾದ ಸಲಕರಣೆಗಳನ್ನು ಕೊಂಡುಕೊಳ್ಳಲು ಆಗುವುದಿಲ್ಲ. ಒಂದು ವೇಳೆ ಖರೀದಿಸಿದರೂ ಆರೋಗ್ಯ ಸುಧಾರಿಸಿದ ಮೇಲೆ ಅವುಗಳ ಅಗತ್ಯವಿರುವುದಿಲ್ಲ. ಹೀಗಾಗಿ ಸಾಮಾನ್ಯರಿಗೂ ಕೈಗೆಟುಕುವ ಬಾಡಿಗೆ ದರದಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಿಕೊಡಲಾಗುವುದು.
ಉದಾ : ಸ್ಟೆಚರ್, ದ್ವೀಲ್ ಚೇರ್ಗಳು, ಹಾಸಿಗೆಗಳು, ವಾಕಿಂಗ್ ವಿಡ್ಲಯನ್ಸ್ ಡೇ ಕೇರ್ ಸೆಂಟರ್ನಲ್ಲಿ ಫಾರ್ಮಸಿ ಸೌಲಭ್ಯವೂ ಇದೆ. ಎಲ್ಲ ಕಡೆ ಲಭ್ಯವಿರದ, ಸುಲಭವಾಗಿ ಸ್ಥಳೀಯ ಮಟ್ಟದಲ್ಲಿ ದೊರಕದ ಓಷಧಿಗಳಿಗೆ ದೂರದೂರದ ಊರುಗಳಿಗೆ ಹೋಗಿ ತರುವುದು ಸಾಮಾನ್ಯವಾಗಿದೆ. ಹೀಗಾಗಿ ಸರಳವಾಗಿ ಈ ಕೇಂದ್ರದಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಇಲ್ಲಿ ಆಗತ್ಯ ಓಷಧಿಗಳನ್ನು ಅತೀ ಕಡಿಮೆ ದರದಲ್ಲಿ ಒದಗಿಸಲಾಗುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರುಹೀಗೆ ಆರೋಗ್ಯ ಕ್ಷೇತ್ರದಲ್ಲಿ ಬಹುಪಯೋಗಿಯಾಗಿರುವ ಲಯನ್ಸ್ ಡೇ ಕೇರ್ ಸೆಂಟರ್ನ ಉಪಯುಕ್ತತೆ ಕುರಿತು ಜಿಲ್ಲೆಯ ಎಲ್ಲ ಜನತೆಗೆ ಮನವರಿಕೆ ಮಾಡಿಕೊಡುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು, ಶುಕ್ರವಾರ ಮುಂಜಾನೆ 10.30 ಕ್ಕೆ ನಡೆಯಲಿರುವ ಈ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಬೇಕೆಂದೂ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ತಿಳಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿಕೊಂಡರು,