ಸ್ವಾಮಿ ವಿವೇಕಾನಂದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಚಿಣ್ಣನ್ನವರ

ಧಾರವಾಡ 13: ನಾಡಿನ ಕೀತರ್ಿಯನ್ನು ವಿಶ್ವದೆಲ್ಲೆಡೆ ಹರಡಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾಂನದರ ಜೀವನದ ತತ್ವ, ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾಥರ್ಿಯೂ ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ಉನ್ನತ ಸಾಧನೆ ಮಾಡಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ ಹೇಳಿದರು

ಅವರು  ಕನರ್ಾಟಕ ಕಾಲೇಜಿನಲ್ಲಿ ಸ್ವಾಮಿ ವೆವೇಕಾನಂದರ ಜನ್ಮದಿನಾಚರಣೆ ನಿಮಿತ್ಯ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕನರ್ಾಟಕ ಕಲಾ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಾತರ್ಾ ಮತ್ತೂ ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತವಾಗಿ ಆಯೋಜಿಸಿದ್ದ 'ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮ' ವನ್ನು ಉದ್ಘಾಟಿಸಿ, ಮಾತನಾಡಿದರು.

ಸ್ವಾಮಿ ವಿವೇಕಾನಂದರು ಯುವ ಸಮೂಹದ ಸ್ಫೂತರ್ಿ. ಅವರ ಬದುಕಿನ ರೀತಿಯೇ ನಮ್ಮ ಜೀವನಕ್ಕೆ ಒಂದು ಪಾಠ. ಅವರ ರಾಷ್ಟ್ರ ಭಕ್ತಿ, ದೇಶ ಪ್ರೇಮ, ಧರ್ಮನಿಷ್ಠೆ, ಧೃಡನಿಲುವು ಸದಾ ಮಾದರಿಯಾಗಿವೆ. 

ಇಂದು ದೇಶದಲ್ಲಿ ಪ್ರತಿಶತ 50ಕ್ಕಿಂತ ಹೆಚ್ಚು ಯುವಜನತೆ ಇದ್ದು, ರಾಷ್ಟ್ರದ ನವನಿಮರ್ಾಣದಲ್ಲಿ ಅವರ ಪಾತ್ರ ಬಹು ಮುಖ್ಯವಾಗಿದೆ. ಸ್ವಾಮಿ ವಿವೇಕಾನಂದರ ತತ್ವಗಳಲ್ಲಿ ದೈಹಿಕ ಬಲ, ಮನೋಬಲ ಮತ್ತು ಆತ್ಮ ಬಲದಿಂದ ಒಬ್ಬ ವ್ಯಕ್ತಿಯು ಯಾವುದೇ ಸವಾಲನ್ನು ಏದುರಿಸಲು ಸಾಧ್ಯ ಎಂಬುವದನ್ನು ತಮ್ಮ ಉಪದೇಶಗಳಲ್ಲಿ ಹೇಳಿದ್ದಾರ.ೆ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮತ್ತು ಸಾಧಿಸುವ ಗುರಿಯತ್ತ ಮುನ್ನಡೆಯಬೇಕು ಎಂದು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.

ಧಾರವಾಡ ವಕೀಲರ ಸಂಘದ ಉಪಾಧ್ಯಕ್ಷ ಪ್ರಕಾಶ ಉಡಿಕೇರಿ ಅವರು ಮಾತನಾಡಿ, ಇಂದಿನ ವಿದ್ಯಾಥರ್ಿಗಳು ತಮ್ಮ ಜೀವನದಲ್ಲಿ ಗುರಿ ಮತ್ತು ಸ್ಪಷ್ಟ ಉದ್ದೇಶವನ್ನು ಇಟ್ಟುಕೊಂಡು ವಿವೇಕಾನಂದರಂತಹ ಮಹಾತ್ಮರ ಉಪದೇಶಗಳನ್ನು ಪಾಲಿಸಬೇಕು. ನಮ್ಮ ಪಾಲಿಗೆ  ಅವು ದಾರಿ ದೀಪಗಳಾಗಿವೆ. ಸ್ವಾಮಿ ವಿವೇಕಾನಂದರು ಯುವ ಜನತೆಯ ಐಕಾನ್ ಆಗಿ ಅವರು ಇಂದಿಗೂ ಪ್ರಸ್ತುತವಾಗಿದ್ದು, ಅವರು ನಮ್ಮ ದೇಶದ ಪರಂಪರೆ ಮತ್ತು ಸಂಸ್ಕೃತಿಯನ್ನು ವಿಶ್ವಕ್ಕೆ ಪ್ರಸಾರ ಮಾಡಿದ ವ್ಯಕ್ತಿಯಾಗಿದ್ದು, ಅಂತಹ ಮಹಾನ್ ವ್ಯಕ್ತಿಯು ನಮಗೆ ಆದರ್ಶ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎಫ್. ಚಾಕಲಬ್ಬಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ವಿವೇಕಾನಂದರು ಇಡಿ ದೇಶವನ್ನು ಕಾಲ ನಡಿಗೆ ಮೂಲಕ  ನಡೆದು ದೇಶವನ್ನು ಸರಿಯಾಗಿ ಅಧ್ಯಯನ ಮಾಡಿದ್ದರು. ಕೃಷಿಕರಿಗೆ ಮತ್ತು ಯುವಕರಿಗೆ ಮಾರ್ಗದರ್ಶನ ಮಾಡಿದ್ದ ಅವರು ಕೃಷಿಯನ್ನು ಒಂದು ಉದ್ಯಮವಾಗಿ ಪರಿಗಣಿಸಿ ಎಂದು ಹೇಳಿದ್ದರು ಎಂದು ಹೇಳಿದರು.

ಕನರ್ಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಫ್.ಮೂಲಿಮನಿ ಮಾತನಾಡಿದರು. ಕಾಲೇಜಿನ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ ಮಾಡಲಾಯಿತು.

ನೆಹರು ಯುವ ಕೇಂದ್ರದ ಅನಿಲ ಪುರಾಣಿಕ, ಕೆಸಿಡಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಡಾ. ಬಿ.ಎಸ್.ಭಜಂತ್ರಿ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಎಸ್.ಜಿ.ಬಾವಿಕಟ್ಟಿ. ಪ್ರಾಧ್ಯಾಪಕ ಡಾ ಆಯ್.ಸಿ.ಮುಳಗುಂದ ಡಾ. ಎ.ಸಿ.ಕುರಹಟ್ಟಿ, ಡಾ ಪ್ರಭಾಕರ ಕಾಂಬಳೆ ಇತರರು ಸೇರಿದಂತೆ ವಿದ್ಯಾಥರ್ಿಗಳು, ಎನ್.ಎಸ್.ಎಸ್ ಸ್ವಯಂ ಸೇವಕರು ಭಾಗವಹಿಸಿದರು.