ಗ್ಯಾರಂಟಿಗಳ ಅನುಷ್ಠಾನದಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ : ಕೋಳಿವಾಡ

Implementation of guarantees hampers development : Koliwada

ಗ್ಯಾರಂಟಿಗಳ ಅನುಷ್ಠಾನದಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ : ಕೋಳಿವಾಡ 

ರಾಣೇಬೆನ್ನೂರು  03: ಗ್ಯಾರಂಟಿಗಳ ಅನುಷ್ಠಾನದಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂಬುದು ವಿಪಕ್ಷಗಳ ಮಿಥ್ಯಾರೋಪವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ನಗರದ ವಿವಿಧ ವಾರ್ಡ್‌ಗಳಲ್ಲಿ ಬುಧವಾರ ನಗರೋತ್ಥಾನ ಯೋಜನೆಯಡಿ ?19.45 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನಗರದಲ್ಲಿನ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ದುರಸ್ತಿಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಅದು ಹೊಸ ವರ್ಷದ ಮೊದಲ ದಿನವೇ ಸಾಕಾರಗೊಳ್ಳುತ್ತಿದೆ.  

ನಗರದ ದೊಡ್ಡಕೆರೆಗೆ ಕೊಳಚೆ ನೀರು ಸೇರುತ್ತಿದ್ದು, ಅದನ್ನು ಬೇರೆ ಕಡೆ ಹರಿಯುವಂತೆ ಮಾಡುವ ಸಲುವಾಗಿ ?15 ಕೋಟಿಗಳ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಟೆಂಡರ್‌ಕೂಡ ಕರೆಯಲಾಗಿದೆ. ಆದರೆ ಗುತ್ತಿಗೆದಾರರು ಬಾರದ ಹಿನ್ನೆಲೆಯಲ್ಲಿ ಅದು ಸ್ವಲ್ಪ ವಿಳಂಬವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ?9 ಕೋಟಿ ವೆಚ್ಚದಲ್ಲಿ ಅದನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸುವ ಚಿಂತನೆಯಿದ್ದು, ಅಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ನಮ್ಮ ತಂದೆ ಕೆ.ಬಿ. ಕೋಳಿವಾಡ ಶಾಸಕರಾಗಿದ್ದಾಗ ಕ್ಷೇತ್ರದ ಜನರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಒತ್ತು ನೀಡಿದ್ದರು ಹಾಗೂ ತಾಲೂಕಿನ ರೈತರಿಗಾಗೀನೀರಾವರಿಸೌಲಭ್ಯವನ್ನು ಒದಗಿಸಿದ್ದರು.  

ನಾನು ಕೂಡ ಅವರದೇ ಹಾದಿಯಲ್ಲಿ ಸಾಗುತ್ತಿದ್ದು, ತಾಲೂಕಿನ ರೈತರಿಗಾಗಿ ಹೊಲಗಳಿಗೆ ಕ್ರಿಮಿನಾಶಕ ಸಿಂಪಡಿಸಲು ಸರ್ಕಾರದಿಂದ ಉಚಿತವಾಗಿ ಡೋನ್ ವಿತರಿಸಲು ಕೃಷಿ ಸಚಿವರಿಗೆ ಮನವಿ ಮಾಡಿರುವೆ. ರಾಜ್ಯದಲ್ಲಿ ಪೈಲಟ್ ಯೋಜನೆಯಾಗಿ ಇದನ್ನು ಪರಿಗಣಿಸಿದ್ದು, ರಾಣಿಬೆನ್ನೂರು ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದರು. ನಗರಸಭಾ ಸದಸ್ಯರಾದ ಪ್ರಭಾವತಿ ತಿಳವಳ್ಳಿ, ಪುಟ್ಟಪ್ಪ ಮರಿಯಮ್ಮನವರ, ನಾಗರಾಜ ಪವಾರ, ಪೌರಾಯುಕ್ತ ಎಫ್‌.ಐ. ಇಂಗಳಗಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಎಸ್‌.ಬಿ. ಮರಿಗೌಡ್ರ, ಎಂ.ಎಸ್‌. ಗುಡಿಸಲಮನಿ, ನಿರ್ಮಲಾ ನಾಯಕ, ಎಸ್‌.ಎಸ್‌. ರಾಮಲಿಂಗಣ್ಣನವರ, ಬಸವರಾಜ ಪಟ್ಟಣಶೆಟ್ಟಿ, ಗದಿಗೆಪ್ಪ ಹೊಟ್ಟಿಗೌಡ್ರ, ಮಾಲತೇಶ ಅಗಡಿ, ಇರ್ಫಾನ್ ದಿಡಗೂರು. ಮತ್ತಿತರರಿದ್ದರು.  

ಬಾಕ್ಸ್‌  

ತಾಲೂಕಿನ ರೈತರಿಗಾಗಿ ಹೊಲಗಳಿಗೆ ಕ್ರಿಮಿನಾಶಕ ಸಿಂಪಡಿಸಲು ಸರ್ಕಾರದಿಂದ ಉಚಿತವಾಗಿ ಡೋನ್ ವಿತರಿಸಲು ಕೃಷಿ ಸಚಿವರಿಗೆ ಮನವಿ ಮಾಡಿರುವೆ. ರಾಜ್ಯದಲ್ಲಿ ಪೈಲಟ್ ಯೋಜನೆಯಾಗಿ ಇದನ್ನು ಪರಿಗಣಿಸಿದ್ದು, ರಾಣಿಬೆನ್ನೂರು ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ  - -ಪ್ರಕಾಶ ಕೋಳಿವಾಡ.