ಸುರೇಶ ಯಾದವ ಪೌಠೇಶನ್ ವತಿಯಿಂದ ಇಪ್ತಾರ ಕೂಟವನ್ನು ಏರಿ್ಡಸಲಾಗಿತು
ಬೆಳಗಾವಿ, 26; ಜಿಲ್ಲೆಯ ರಾಮತೀರ್ಥ ನಗರದ ಸುರೇಶ ಯಾದವ ಪೌಠೇಶನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಇಪ್ತಾರ ಕೂಟ ವನ್ನು ಏರಿ್ಡಸಲಾಗಿತ್ತು. ಮುಸ್ಲಿಂ ಧರ್ಮದ ಪವಿತ್ರ ಹಬ್ಬ ರಂಜಾನ್ ಈ ಸಂಧರ್ಭದಲ್ಲಿ ಮುಸ್ಲಿಮರು ದಿನವೀಡೀ ಉಪವಾಸ ಆಚರಿಸುತ್ತಾರೆ. ಉಪವಾಸ ತೊರೆಯುವ ಅವರಿಗಾಗಿ ಹಿಂದೂ ಧರ್ಮದವರು ಇಪ್ತಾರ್ ಕೂಟ ಆಯೋಜನೆ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ. ಹೌದು ಇಂತಹದೊಂದು ಧಾರ್ಮಿಕ ಭಾವೈಕ್ಯತೆಯ ಕ್ಷಣಕ್ಕೆ ಬೆಳಗಾವಿ ಸಾಕ್ಷಿಯಾಯಿತು. ಆಟೋನಗರದ ಪ್ಯಾರಾದೈಸ್ ಹಾಲನಲ್ಲಿ ಆಯೋಜಿಸಲಾಗಿದ್ದ ಇಪ್ತಾರ್ ಕೂಟದಲ್ಲಿ ಹಿಂದೂ ಮುಸ್ಲಿಂ ಬಾಂದವರಿಬ್ಬರೂ ಭಾಗಿಯಾಗಿ ಆಚರಣೆ ಮಾಡಲಾಯಿತು ಸುಮಾರು ನಾಲ್ಕು ನೂರರಿಂದ ಐದು ನೂರವರೆಗೆ ಮುಸ್ಲಿಂ ಭಾಂದವರು ಭಾಗವಹಿಸಿದ್ದರು.ಈ ಇಪ್ತಾರ್ ಕೂಟದಲ್ಲಿ ಮುಕ್ತಾರ ಪಟಾಣ, ಸಲೀಮ್ ಮುಲ್ಲಾ, ರಜಾಕ, ಹಡಗಲಿ, ವೀರನಗೌಡ ಪಾಟೀಲ್ ಹಾಗೂ ರಾಮತೀರ್ಥ ನಗರ, ಆಟೋನಗರದ ಮುಸ್ಲಿಂ ಬಾಂದವರು ಪಾಲ್ಗೊಂಡಿದ್ದರು.