ನಮ್ಮ ದಾರಿ ಸರಿಯಿಲ್ಲ ಅಂತ ಕುಳಿತರೆ ಗುರಿ ಮುಟ್ಟುವುದಕ್ಕೆ ಸಾಧ್ಯವೇ: ದಾನಕೈ

ಲೋಕದರ್ಶನ ವರದಿ

ಯಲಬುಗರ್ಾ 22: ನಮ್ಮ ದಾರಿ ಸರಿಯಿಲ್ಲ, ನಮ್ಮ ಹಣೆಬರಹ ಸರಿಯಿಲ್ಲ ಅಂತ ಸುಮ್ಮನೆ ಕುಳಿತರೆ,  ನಾವು ಉದ್ಯೋಗವಿಲ್ಲದೆ ನಿರೂದ್ಯೋಗಿಗಳಾಗಿ ಅಲೆದಾಡುವ ಪ್ರಸಂಗವನ್ನು ಅನುಭವಿಸಬೇಕಾಗುತ್ತದೆ, ಇದರಿಂದ ನಮ್ಮ ಜೀವನದಲ್ಲಿ ಗುರಿಮುಟ್ಟುವದಕ್ಕೆ ಸಾಧ್ಯವಾಗುವದಿಲ್ಲ ಅದಕ್ಕಾಗಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಸದಸ್ಯರಾಗಿ, ಸಾಲ ಸೌಲಭ್ಯಗಳನ್ನು ಪಡೆದುಕೊಂಡು.

ಇದರ ಜೋತೆಗೆ ಮದ್ಯ ವ್ಯಸನಿಗಳನ್ನು ಮದ್ಯವರ್ಜನ ಶಿಬಿರಕ್ಕೆ ಸೇರಿಸಿ ಅವರನ್ನು  ದುಶ್ಚಟಗಳಿಂದ ದೂರಮಾಡುವುದು ಮತ್ತು ಊರಿನ ಕೆರೆಗಳನ್ನು ಹೂಳೆತ್ತುವ  ಮುಖಾಂತರ ಸಮಾಜಮುಖಿಯಾಗಿ ಸೇವೆ ಮಾಡಿದಾಗ ನಾವು ಒಳ್ಳೇಯ ವ್ಯಕ್ತಿಗಳಾಗಿ ಗುರಿ ಮುಟ್ಟುವುದಕ್ಕೆ, ಆಥರ್ಿಕವಾಗಿ ಸಬಲರಾಗುವದಕ್ಕೆ ಸಾಧ್ಯವಾಗುತ್ತದೆ ಎಂದು ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕನರ್ಾಟಕ  ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ಕೆ.ದಾನಕೈ  ಅವರು  ಮಾತನಾಡುತ್ತಾ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮಹಿಳಾ ಜ್ಞಾನ ವಿಕಾಸ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ  ಧರ್ಮಸ್ಥಳದ ಧಮರ್ಾಧಿಕಾರಿ ಡಾ.  ವೀರೇಂದ್ರ ಹೆಗ್ಗಡೆಯವರ 50 ವರ್ಷದ ಪಟ್ಟಾಧಿಕಾರದ ಸವಿ ನೆನಪಿಗಾಗಿ ಸ್ವ ಸಹಾಯ ಸಂಘ, ಒಕ್ಕೂಟದ ಸದಸ್ಯರಿಂದ ಚಿತ್ರ ನಿಮರ್ಾಣವಾಗುದಕ್ಕೆ ಸಾಧ್ಯವಾಗಿತು ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ಕೆ.ದಾನಕೈ  ಅವರು ಯಲಬುಗರ್ಾದ ಶಕ್ತಿ ಚಿತ್ರಮಂದಿರದಲ್ಲಿ ಎರ್ಪಡಸಿದ ಚಲನಚಿತ್ರ ಕಾನೂರಾಯಣ ಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ  ಮಾತನಾಡಿದರು.

ಪ್ರತಿಯೋಬ್ಬರಿಂದ ಇಪ್ಪತ್ತು ರೂಗಳನ್ನು ಪಡೆದು ಒಟ್ಟೂ 20 ಲಕ್ಷ ಸದಸ್ಯರಿಂದ  4.50 ಕೋಟಿ ವೆಚ್ಚದಲ್ಲಿ ಎಸ್, ನಾಗಭರಣ ನಿದರ್ೇಶನದಲ್ಲಿ ಜರುಗಿದೆ, ಆಥರ್ಿಕವಾಗಿ, ರಾಜಕೀಯವಾಗಿ, ಸಮಾಜಿಕವಾಗಿ ಬದಲಾವಣೆಗಳ ಸನ್ನಿವೇಶಗಳನ್ನು ಈ ಕಾನೂರಾಯಣ ಚಿತ್ರದಲ್ಲಿ ಈ ಚಿತ್ರಣ ಮೂಡಿದೆ ಎಂದು ಯೋಜನಾಧಿಕಾರಿ ರಾಜೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾನೂರಾಯಣ ಚಲನಚಿತ್ರವನ್ನು ನೋಡಿದವರು  ಇಂದಿನಿಂದ ಆರುದಿನಗಳವರೆಗೆ ಉಚಿತವಾಗಿ ಚಿತ್ರವನ್ನು ನೋಡಬಹುದು ಸ್ವ ಸಹಾಯ ಸಂಘ, ಒಕ್ಕೂಟದ ಸದಸ್ಯರು  ಹಾಗೂ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು  ಹೈದ್ರಾಬಾದ ಕನರ್ಾಟಕ ಪ್ರಾಧೇಶಿಕ ವಿಭಾಗದ ತಾಂತ್ರಿಕ ಪ್ರಬಂಧಕರಾದ ಕುಮಾರಿ ವೈಷ್ಣವಿ  ಹೇಳಿದರು.

ಮಹಿಳಾ ಜ್ಞಾನ ವಿಕಾಸ ಸಮಿತಿಯ ಸಮನ್ವಾಧಿಕಾರಿ  ಸುಧಾ, ನವ ಜೀವನ ಸಮಿತಿಯ ಸಿದ್ದರೋಡ ಭಾವಿಕಟ್ಟಿ, ಎಚ್,ಬಸವರಾಜ ಇತರರು ಇದ್ದರು.ಚಿತ್ರ ಮಂದಿರದ ಮಾಲಿಕ ಮಲ್ಲಿಕಾಜರ್ುನ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ನವ ಜೀವನ ಸಮಿತಿ, ಒಕ್ಕೂಟದ ಸದಸ್ಯರು, ಸೇವಾ ಪ್ರತಿನಿಧಿಗಳು, ಪ್ರೇಕಕರು ಸೇರಿ  300 ಜನರು ಕಾನೂರಾಯಣ ಚಿತ್ರವನ್ನು ವೀಕ್ಷಣೆಮಾಡಿದರು.