ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದರೆ ಕ್ರಮಗಳನ್ನು ಕೈಗೊಳ್ಳಲಾಗುವುದು : ವಾಸುಕುಮಾರ್
ಕಂಪ್ಲಿ 20: ಸರಕುಗಳು ಸೇರಿದಂತೆ ವಿವಿಧ ಸಾಮಾನುಗಳನ್ನು ಸಾಗಿಸುವ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನು ಉಲ್ಲಂಘನೆ ಹಾಗು ಅಪರಾಧವಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿಐ ವಾಸುಕುಮಾರ್ ಕೆ.ಬಿ. ತಿಳಿಸಿದರು.
ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಪರಾಧ ತಡೆ ಜಾಗೃತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಏರಿ್ಡಸಿದ್ದ ಪ್ರಯಾಣಿಕರ ವಾಹನಗಳ ಚಾಲಕರು ಮತ್ತು ಮಾಲೀಕರ ಸಭೆಯಲ್ಲಿ ಮಾತನಾಡಿ ಆಟೋ ರಿಕ್ಷಾಗಳಲ್ಲಿ ನಿಗಧಿತ ಸಂಖ್ಯೆಗಿಂತ ಅಧಿಕ ಪ್ರಯಾಣಿಕರನ್ನು, ಶಾಲಾ ಮಕ್ಕಳನ್ನು ಸಾಗಿಸುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸಿದರು. ಪ್ರಯಾಣಿಕರ ವಾಹನಗಳ ಮಾಲೀಕರು ಮತ್ತು ಚಾಲಕರು ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು, ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರ ಗಮನಕ್ಕೆ ತರಬೇಕು ಎಂದು ತಿಳಿಸಿದರು. ವಾಹನಗಳ ಚಾಲಕರು ಹಾಗೂ ಮಾಲೀಕರಾದ ವಿರೂಪಾಕ್ಷಿ, ಆಟೋ ರಾಘವೇಂದ್ರ, ಮಹೇಶ್, ಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.
ಅಪರಾದ ಜಾಗೃತಿ ಸಭೆಃ- ಪಟ್ಟಣದ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾದ ತಡೆ ಜಾಗೃತಿ ಸಭೆ ನಡೆಯಿತು.ಕಂಪ್ಲಿ ಠಾಣೆಯ ಪಿಐ ವಾಸುಕುಮಾರ ಕೆ.ಬಿ.ಮಾತನಾಡಿ ವಿದ್ಯಾರ್ಥಿನಿಯರು ಸೈಬರ್ ಅಪರಾಧಗಳ ಬಗ್ಗೆ ಎಚ್ಚರ ವಹಿಸಬೇಕು. ಶಾಲೆ, ಕಾಲೇಜಿಗೆ ಬಂದು ಹೋಗುವ ವೇಳೆ ಕಿರುಕುಳವಾಗುತ್ತಿದ್ದಲ್ಲಿ ಪೊಲೀಸರ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಎಸ್‌ಐಗಳಾದ ಬಸವರಾಜ, ಗಂಗಣ್ಣ,ಪೊಲೀಸ್ ಸಿಬ್ಬಂದಿಗಳು, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು,ವಿದ್ಯಾರ್ಥಿನಿಯರು ಇದ್ದರು.