ಕನ್ನಡ ಬಳಕೆಗೆ ಹೆಚ್ಚಿನ ಆದ್ಯತೆ ಕೊಟ್ಟರೆ ಕನ್ನಡ ನಾಡು ನುಡಿ ಸಂಸ್ಕೃತಿ ಶ್ರೀಮಂತವಾಗಲು ಸಾದ್ಯ: ಡಾ.ವಿಜಯಲಕ್ಷ್ಮಿ
ಶಿಗ್ಗಾವಿ 11: ಮಕ್ಕಳಿಗೆ ಕತೆ ಕವನ ಕಾದಂಬರಿಗಳನ್ನೂ ಓದಲು ಮನೆಯಿಂದಲೇ ಪ್ರೆರೇಪಿಸಿ ಕನ್ನಡ ಬಳಕೆಗೆ ಹೆಚ್ಚಿನ ಆದ್ಯತೆ ಕೊಟ್ಟರೆ ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿ ಶ್ರೀಮಂತವಾಗಲು ಸಾದ್ಯ ಎಂದು ಡಾ.ವಿಜಯಲಕ್ಷ್ಮಿ ತಿರ್ಲಾಪೂರ ಹೇಳಿದರು. ಪಟ್ಟಣದ ಸಂಗನಬಸವ ಮಂಗಲಭವನದಲ್ಲಿ ಏರಿ್ಡಸಿದ್ದ ಶಿಗ್ಗಾವಿ ತಾಲೂಕು 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಸಂದೇಶ ನೀಡಿದ ಅವರು ನಮ್ಮಲ್ಲಿನ ಆತ್ಮಾಭಿಮಾನದ ಕೊರತೆಯಿಂದ ಹೆಚ್ಚು ಕನ್ನಡ ಭಾಷೆ ಬಳಕೆಯಾಗದಿರುವದು ದುರ್ದೈವದ ಸಂಗತಿಯಾಗಿದೆ. ಇಂದು ಪುಸ್ತಕಗಳ ಬದಲಿಗೆ ಮೊಬೈಲ್, ಲ್ಯಾಪಟಾಪ್ ಕಂಪ್ಯೂಟರಗಳ ಬಳಕೆಯಿಂದ ಪುಸ್ತಕಗಳ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದರು.್ಷ ಭಾಕ್ಸ ಸುದ್ದಿ : ಹಾವೇರಿಯ ಜಿಲ್ಲೆಯ ಶಿಗ್ಗಾವಿ ತಾಲೂಕು ಕನ್ನಡ ಸಾಹಿತ್ಯದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. ರಾಜ್ಯ ಕಂಡ ದಾರ್ಶನಿಕ ಸಂತರೆಂದು ಕರೆಸಿಕೊಂಡ ಕರ್ನಾಟಕದ ಕಬೀರ ಶಿಶುವಿನಹಾಳ ಶರೀಫರು ತಮ್ಮ ಜನಪದ ರಚನೆಯ ತತ್ವಪದಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಾಮರಸ್ಯದ ಪ್ರತೀಕವಾದವರು. ಭಕ್ತಶ್ರೇಷ್ಟ ಕನಕದಾಸರು, ವರಕವಿ ಸರ್ವಜ್ಞ, ಹಾನಗಲ್ಲ ಕುಮಾರ ಶಿವಯೋಗಿಗಳು, ವಾಗೀಶ ಪಂಡಿತಾರಾಧ್ಯರು, ಕಾದಂಬರಿ ಪಿತಾಮಹ ಗಳಗನಾಥರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗೋಕಾಕರು ಜನಸಿದಂತ ಈ ಜಿಲ್ಲೆ ಕನ್ನಡ ಸಾಹಿತ್ಯ ಲೋಕದ ಕೀರೀಟವಿದ್ದಂತೆ. ಇಂಥ ಮಹನೀಯರು ಜನಿಸಿದ ನಾಡಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದೆ.ಸಮ್ಮೇಳಾನದ್ಯಕ್ಷೆ ಡಾ.ವಿಜಯಲಕ್ಷ್ಮಿ ತಿರ್ಲಾಪೂರ.
ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಿರಂತರವಾಗಿ ಬೆಳಗುವ ದೀಪವಾಗುವ ಮೂಲಕ, ಶಾಂತಿ ಸೌಹಾರ್ದತೆ ಸಂದೇಶವನ್ನು ಸಾರುವಂಥ ಸಮೃದ್ಧಿಯ ಕನ್ನಡ ಸಮ್ಮೇಳನಗಳ ಮೂಲಕ ಇನ್ನೂ ಹೆಚ್ಚು ಜಗತ್ಪ್ರಸಿದ್ದಿ ಪಡೆಯುವಂತಾಗಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಾಸಿರಅಹ್ಮದಖಾನ ಪಠಾಣ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಕೇವಲ ಆಚರಣೆಗಳಿಗೆ ಅಂಟಿಕೊಳ್ಳದೆ ನಮ್ಮ ಮುಂದಿನ ಪೀಳಿಗೆಯ ಜ್ಞಾನ ಭಂಡಾರವಾಗಿ ಬೆಳೆಯಬೇಕು ಅಲ್ಲದೇ ಇಂಗ್ಲಿಷ ವ್ಯಾಮೋಹದಲ್ಲಿರುವ ಇಂದಿನ ಯುವ ಪೀಳಿಗೆಗೆ ಕನ್ನಡದ ಆಸಕ್ತಿ ದಿನೇ ದಿನೇ ಕಡಿಮೆಯಾಗುತ್ತಿದೆ. ಕನ್ನಡ ಭಾಷೆಗೆ ಇರುವಷ್ಟು ಇತಿಹಾಸ ದೇಶದ ಯಾವ ಭಾಷೆಗೂ ಇಲ್ಲ. ಮನುಕುಲಕ್ಕೆ ಸಾಮರಸ್ಯ, ಸಂಸ್ಕೃತಿಯನ್ನು ಉಳಿಸುವಲ್ಲಿ ಕನ್ನಡ ಭಾಷೆ ಉಪಯೋಗಿಸಬೇಕು ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಾಕ್ಸ ಸುದ್ದಿ : ವಿಶ್ವನಾಥ ಬಂಡಿವಡ್ಡರ ಬರೆದ "ಬೆತ್ತ". ನಾಗಪ್ಪ ಬೆಂತೂರ ಬರೆದ ಹೊಂಗಿರಣ ಹೂವುಗಳು. ದೇವರಾಜ ಸುಣಗಾರ ಬರೆದ ಪ್ರಭುವಾಗು ಪ್ರಜಾಪ್ರಭುತ್ವದಲ್ಲಿ. ಸೋಮು ಕುದರಿಹಾಳ ಬರೆದ ಯಾರು ಹೆಚ್ಚು.ಶಿವಾನಂದ ಮ್ಯಾಗೇರಿ ಬರೆದ ಶಿಗ್ಗಾವಿ ಊರು ಸಾಹಿತ್ಯ ನೂರು. ಎಸ್ ಬಿ ಮಾಳಗೊಂಡ ಬರೆದ ಬಾಡ್ಯನ ಭಾವಗೀತೆಗಳು. ಪುಸ್ತಕಗಳನ್ನು ಗಣ್ಯರಿಂದ ಬಿಡುಗಡೆಗೊಳಿಸಲಾಯಿತು ಬಾಕ್ಸ್ ಸುದ್ದಿ:ಬೆಳಿಗ್ಗೆ ಶ್ರೀ ಸಂತಕವಿ ಕನಕದಾಸ ವೇದಿಕೆ, ಸಂತ ಶಿಶುವಿನಹಾಳ ಶರೀಫ ಶಿವಯೋಗಿ ಮಹಾಮಂಟನ ಆರಟಾಳ ರುದ್ರಗೌಡ್ರು ಹಾಗೂ ಹಿರೇಮಲ್ಲೂರ ಈಶ್ವರನ್ ಮಹಾದ್ವಾರದಲ್ಲಿ ಡಾ. ವೈಜಿನಾದ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ,ತಹಸೀಲ್ದಾರ ರವಿ ಕೊರವರ ಅವರಿಂದ ರಾಷ್ಟ್ರ ಧ್ವಜಾರೋಹಣ. ತಾಲೂಕಾ ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಹಾಗೂ ಪುರಸಭೆಯ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅವರಿಂದ ನಾಡ ಧ್ವಜಾರೋಹಣ ನೆರವೇರಿಸಿದರು ಭಾಕ್ಸ ಸುದ್ದಿ : ಸರ್ವಾಧ್ಯಕ್ಷರ ಮೆರವಣಿಗೆಯುತಾಲೂಕ ಕ್ರೀಡಾಂಗಣದಿಂದ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತಿರ್ಲಾಪೂರ ಅವರ ಮೆರವಣಿಗೆಗೆ ಶಾಸಕ ಯಾಸೀರಖಾನ ಪಠಾಣ ಚಾಲನೆ ನೀಡಿದರು.
ಹಿರಿಯ ಸಾಹಿತಿ ಬಫ ಯಲಿಗಾರ, ಕೆಎ???ರ್.ಪಿ 10ನೇ ಪಡೆ ಕಮಾಂಡೆಂಟ್ ಎನ್ ಬಿ ಮೆಳ್ಳಾಗಟ್ಟಿ, ಎಸ್ ಎಫ್ ಮಣಕಟ್ಟಿ, ಗುಡ್ಡಪ್ಪ ಜಲದಿ, ಅರುಣ ಹುಡೆದಗೌಡ್ರ, ಶಾಂತಾಬಾಯಿ ಸುಬೇದಾರ, ಮಮತಾ ಮ್ಯಾಗಿ, ಜ್ಯೋತಿ ನಡೂರ, ರೂಪಾ ಬನ್ನಿಕ್ಕೊಪ್ಪ, ಸಂಗೀತಾ ವಾಲ್ಮೀಕಿ, ವಸಂತಾ ಬಾಗೂರ, ಎಂ ಬಿ ಅಂಬಿಗೇರ, ಬಿ ಸಿ ಪಾಟೀಲ, ಎಫ್ ಸಿ ಕಾಡಪ್ಪಗೌಡ್ರ, ಸಿವಿ ಮತ್ತಿಗಟ್ಟಿ, ಬಸವರಾಜ ಬಸರಿಕಟ್ಟಿ, ಎಸ್ ಎನ್ ಮುಗಳಿ, ಲಲಿತಾ ಹಿರೇಮಠ, ಮಂಜುನಾಥ್ ಬ್ಯಾಹಟ್ಟಿ, ಸುಭಾಸ ಚೌಹಾಣ ಸೇರಿದಂತೆ ಇತರರಿದ್ದರು.ತಾಲೂಕಿನ ಕಲಾವಿದರಿಂದ ನಾಡಗೀತೆ, ರೈತ ಗೀತೆ ಹಾಡಲಾಯಿತು. ಸಿ ಡಿ ಯತ್ನಳ್ಳಿ ಸ್ವಾಗತಿಸಿ, ಎಚ್ ಎಸ್ ರಟ್ಟೀಹಳ್ಳಿ, ಉಮೇಶ ಎಸ್ ಆರ್. ನಿರೂಪಿಸಿದರು.