ಯುವಕರ ಮನದಲ್ಲಿ ಸಾಹಿತ್ಯ ಉಳಿದರೆ ಬದುಕು ಬದಲಾಗಲಿದೆ : ಸರಜೂ ಕಾಟ್ಕರ್

ಯುವಕರ ಮನದಲ್ಲಿ ಸಾಹಿತ್ಯ ಉಳಿದರೆ ಬದುಕು ಬದಲಾಗಲಿದೆ : ಸರಜೂ ಕಾಟ್ಕರ್  If literature remains in the minds of the youth, life will change: Saraju Katkar


ಬೆಳಗಾವಿ 10 : ಯುವಕರಲ್ಲಿ ಸಾಹಿತ್ಯದ ಅಭಿರುಚಿ ಮೂಡುವ ಕೆಲಸವಾಗಲು ಕವಿ, ಸಾಹಿತಿ, ಗಾಯಕರ ಪಾತ್ರ ಬಲುದೊಡ್ಡದು. ಸಾಮಾಜಿಕ ಬದಲಾವಣೆಗೆ ಇವೆಲ್ಲವೂ ಸಕಾರಣವಾಗಿವೆ. ಇಂದಿನ ಯುವಕರ ಮನದಲ್ಲಿ ಇಂತಹ ಸಾಹಿತ್ಯ ಉಳಿದರೆ ಬದುಕು ಬದಲಾಗಲಿದೆ ಎಂದು ದ.ರಾ. ಬೇಂದ್ರೆ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಸಾಹಿತಿ ಸರಜೂ ಕಾಟ್ಕರ್ ಹೇಳಿದರು. ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಮಂಗಳವಾರ ಕೆ.ಎಸ್‌. ನರಸಿಂಹಸ್ವಾಮಿ ಟ್ರಸ್ಟ್‌ ಏರಿ​‍್ಡಸಿದ್ದ ಕೆ.ಎಸ್‌. ನರಸಿಂಹಸ್ವಾಮಿ ನೆನಪಿನ ವಸಂತೋತ್ಸವ - 2026 ಉದ್ಘಾಟಿಸಿ ಮಾತನಾಡಿದರು.

ಕೆಎಸ್ ನರಸಿಂಹಸ್ವಾಮಿ  ಟ್ರಸ್ಟ್‌ ಈ ಭಾಗದಲ್ಲಿ ಹಮ್ಮಿಕೊಂಡಿರುವ ಕೆ.ಎಸ್‌.ಎನ್ ನೆನಪಿನ ವಸಂತೋತ್ಸವ ಉತ್ತರ ದಕ್ಷಿಣ ಕರ್ನಾಟಕ ಬೆಸೆಯುವ ವಿನೂತನ ಕಾರ್ಯಕ್ರಮವಾಗಿದ್ದು, ಎಲ್ಲಿಯ ಮಂಡ್ಯ, ಎಲ್ಲಿಯ ಬೆಳಗಾವಿ ಎನ್ನುವಂತಿದ್ದ ವಾತಾವರಣವನ್ನು ಬೆಸೆಯುವಂತೆ ಮಾಡಿದೆ. ಕೆಎಸ್ನ ಟ್ರಸ್ಟ್‌ ನಮ್ಮ ಗಡಿನಾಡು ಪ್ರದೇಶದಲ್ಲಿ ಮತ್ತಷ್ಟು ಕಾರ್ಯಕ್ರಮ ರೂಪಿಸಲಿ ಎಂದು ಹಾರೈಸಿದರು. ಬಸವರಾಜ ಕಟ್ಟೀಮನಿ ಪ್ರತಿಷ್ಟಾನ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಕೆ.ಎಸ್‌.ಎನ್‌- ಬೆಟಗೇರಿ ಕೃಷ್ಣಶರ್ಮ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನಗಳು ಕನ್ನಡ ನಾಡು, ನುಡಿ ಗಟ್ಟಿಯಾಗಲು ತ್ರಿಮೂರ್ತಿಗಳಂತೆ ಶ್ರಮಿಸಲು ತಯಾರಾಗಿವೆ.  

ಧಾರ್ಮಿಕ ಮತ್ತು ಭಾಷಾ ಸೌಹಾರ್ದದಂತೆ ನಾಡಿನ  ಪ್ರತಿಷ್ಟಾನಗಳ ನಡುವೆಯೂ ಸೌಹಾರ್ದತೆಯ ಅಗತ್ಯವಿದೆ. ಬಹು ಮುಖ್ಯವಾಗಿ ನಾವೆಲ್ಲರೂ ಸಾಹಿತ್ಯ, ಸಂಗೀತ, ಕಲೆಗಳನ್ನು ಯುವ ಸಮುದಾಯಕ್ಕೆ ಧಾರೆಯೆರುವ ಕೆಲಸ ಮಾಡಬೇಕಿದೆ ಎಂದು ನುಡಿದರು.  ಟ್ರಸ್ಟ್‌ ನ ಅಧ್ಯಕ್ಷರಾದ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಅನುದಾನದ ಕೊರತೆಯ ನಡುವೆಯೂ ಅಖಂಡ ಕರ್ನಾಟಕಕ್ಕೆ ಮೈಸೂರು ಮಲ್ಲಿಗೆಯ ಕವಿ ಕೆ. ಎಸ್‌. ನರಸಿಂಹಸ್ವಾಮಿ ಅವರ ಹಾಡುಗಳನ್ನು ವಿದ್ಯಾರ್ಥಿ ಮತ್ತು ಯುವ ಜನತೆಗೆ ತಲುಪಿಸುವ ದೃಷ್ಟಿಯಿಂದ ಈ ಒಂದು ಗೀತ ಗಾಯನ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂಗ ಸಂಸ್ಥೆಗಳು ಹಾಗೂ ಇತರ ಸಂಘ ಸಂಸ್ಥೆಗಳ ಜೊತೆಗೂಡಿ ಇಂತಹ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ತಮ್ಮ ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ವಿವರಿಸಿದರು.       

  ಕೆ.ಎಸ್‌.ನ ಗೀತೆಗಳಾದ ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲಿ, ದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನು, ತುಂಬು ತಿಂಗಳಿನ ಮಲ್ಲಿಗೆ ಹಂಬಿನ ಮತ್ತಿತರ ಗೀತೆಗಳ ಗಾಯನ ತರಬೇತಿ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕೆ.ಎಸ್‌. ನರಸಿಂಹಸ್ವಾಮಿ ಟ್ರಸ್ಟ್‌ ನ ಸದಸ್ಯರಾದ ನಗರ ಶ್ರಿನಿವಾಸ ಉಡುಪ, ಕೆ. ವಿ . ಬಲರಾಮ, ಮಾದಾಪುರ ಸುಬ್ಬಣ್ಣ, ಪ್ರಾಧ್ಯಾಪಕರಾದ ಎಸ್‌. ವಿ. ವಾಲಿಶೆಟ್ಟಿ, ಗೀತಾ ದಯಣ್ಣವರ, ತಸ್ಲೀನ್ ಶಿರಗುಪ್ಪಿ, ಮಂಜುನಾಥ ಕಲಾಲ್, ರೂಪಾ ಅಕ್ಕಿ. ಕವಯತ್ರಿಯರಾದ ಸುಮಾ ಕಾಟ್ಕರ್, ಆಶಾ ಯಮಕನಮರಡಿ, ಜ್ಯೋತಿ ಬಾದಾಮಿ, ವಾಸಂತಿ ಮೇಳೆದ,

ಶ್ವೇತಾ ನರಗುಂದ, ರೋಹಿಣಿ ಗಂಗಾಧರಯ್ಯ, ಸುನೀತಾ ನಂದೆನ್ನವರ, ಆಶಾ ಸಂಸುದ್ದಿ, ಅನಿತಾ ಮಾಲಗತ್ತಿ, ಇಂದಿರಾ ಮೋಟೆಬೆನ್ನುರ ಅವರಲ್ಲದೆ ನಗರದ  ವಿವಿಧ ಮಹಾವಿದ್ಯಾಲಯಗಳ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.್ಖ ಫೋಟೋ ಶೀರ್ಷಿಕೆ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಕೆ ಎಸ್ ನರಸಿಂಹಸ್ವಾಮಿ ನೆನಪಿನ ವಸಂತೋತ್ಸವ -2026 ಕಾರ್ಯಕ್ರಮದ ಗೀತ ಗಾಯನ ತರಬೇತಿ ಕಾರ್ಯಾಗಾರವನ್ನು ಸಾಹಿತಿ ಸರಜೂ ಕಾಟ್ಕರ್ ಉದ್ಘಾಟಿಸಿದರು. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಯಲ್ಲಪ್ಪ ಹಿಮ್ಮಡಿ, ನಗರ ಶ್ರೀನಿವಾಸ ಉಡುಪ, ವಿದ್ಯಾವತಿ ಭಜಂತ್ರಿ, ಎಂ. ಎನ್‌. ಸುಬ್ರಹ್ಮಣ್ಯ, ಕೆ. ವಿ. ಬಲರಾಮ್ ಉಪಸ್ಥಿತರಿದ್ದರು.