ಬಲಿಜ ಜನಾಂಗದ ಏಳಿಗೆಗಾಗಿ ಜನಾಂಗದ ಪ್ರತಿಯೊಬ್ಬ ವ್ಯಕ್ತಿಯು ಶ್ರಮ ಪಟ್ಟರೆ ಬಲಿಜ ಸಮುದಾಯದ ಅಭಿವೃದ್ಧಿ ಸಾಧ್ಯತೆ : ದೇವಿನಗರ್ ಶ್ರೀನಿವಾಸುಲು
ಬಳ್ಳಾರಿ 10 : ಬಲಿಜ ಸಮುದಾಯದ ಬಾಂಧವರು ಬಲಿಜ ಜನಾಂಗದ ಏಳಿಗೆಗಾಗಿ ಜನಾಂಗದ ಪ್ರತಿಯೊಬ್ಬ ವ್ಯಕ್ತಿಯು ಶ್ರಮ ಪಟ್ಟರೆ ಬಲಿಜ ಸಮುದಾಯದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಲಿಜ ಸಮುದಾಯದ ಪ್ರಧಾನ ಸೇವಕರು ದೇವಿನಗರ್ ಶ್ರೀನಿವಾಸುಲು ತಿಳಿಸಿದರು. ಅವರು ಮಾ.10 ದಂದು ಬಳ್ಳಾರಿ ಏಗಿಖಿ ನಗರದ ನಿವಸಿಯಾದ ಏ.ಐ ಕುಮಾರಸ್ವಾಮಿ ಮನೆಯ ಹತ್ತಿರ ದೇವಿನಗರ ಶ್ರೀನಿವಾಸ್ ರವರು ನೇತೃತ್ವದಲ್ಲಿ ಏರಿ್ಡಸಿದ್ದ ಬಲಿಜ ಸಮಾಜದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಲಿಜ ಸಮುದಾಯದ ಮುಖಂಡರು ಪಟೇಲ್ ನಗರ್ ರಾಜೇಶ್ ಮಾತಾಡಿ ಬಲಿಜ ಬಾಂಧವರು ಒಗ್ಗಟ್ಟಾಗಿ ಬಾಳಬೇಕಂದು ಸಮುದಾಯದ ಜನರಿಗೆ ಕರೆ ನೀಡಿದರು. ಅದರಂತೆ ಬಳ್ಳಾರಿ ಬಲಿಜ ಸಮುದಾಯದ ಹಿರಿಯ ಮುಖಂಡರು ಈ ಕಾರ್ಯಕ್ರಮದಲ್ಲಿ ಖಃಋ ನಾರಾಯಣ್, ಜೆಡ್.ಪಿ ಶ್ರೀರಾಮುಲು, ವೇಣುಗೋಪಾಲ್ , ಬ್ಯಾಂಕ್ ವಿಜಯಕುಮಾರ್, ಪಟೇಲ್ ನಗರ್ ರಾಜೇಶ್, ಬ್ಯಾಂಕ್ ರಾಮಕೃಷ್ಣ, ದೇವಿನಗರ್ ಶ್ರೀಧರ್, ಬಂಗಾರು ರಾಜು, ಪರಶುರಾಮ್ ಶಿವುಕುಮಾರ್ ಪಟೇಲ್ ನಗರ್ ಏರಿಸ್ವಾಮಿ, ಹುಂಡೇಕರ್ ರಾಜೇಶ್, ಏಖಖಖಿಅ ಚಂದ್ರಶೇಖರ್, ಪಟೇಲ್ ನಗರ್ ಜಗನಾಥ್, ಸೇರಿದಂತೆ ಬಲಿಜ ಸಮಾಜದ ಅನೇಕ ಮುಖಂಡರುಗಳು ಯುವ ಮುಖಂಡರು ಭಾಗವಹಿಸಿದ್ದರು. ಈ ಕಾರ್ಯಕ್ರದಲ್ಲಿ ಬಲಿಜ ಸಮುದಾಯದ ಅಶೋಕ್, ರಂಗನಾಯಕುಲು, ತಿಮ್ಮಪ್ಪ, ಶ್ರೀನಿವಾಸ್, ಬ್ರೂಸ್ ಪೇಟೆ ಅನಿಲ್, ಸೇರಿದಂತೆ ಸಮುದಾಯದ ಹಲವಾರು ಮುಖಂಡರು ಮತ್ತು ಯುವಕರು ಇದ್ದರು.