ಕೊಪ್ಪಳ 28: ಮಕ್ಕಳಿಗೆ ಕಿರುಕುಳ, ಶೋಷಣೆ, ದೌರ್ಜನ್ಯವೆಸಗಿದ್ದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸುರಕ್ಷತಾ ಸಮಿತಿಯ ಕಾರ್ಯದರ್ಶಿ ಅಥವಾ ಅಧ್ಯಕ್ಷರು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಬಹುದು ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ ಅವರು ಹೇಳಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದ ಟಣಕನಕಲ್ಲ ಮೊರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರದಂದು ಆಯೋಜಿಸಲಾದ ಮಕ್ಕಳ ಹಕ್ಕುಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಸಂಸ್ಥೆಗಳ ಮಕ್ಕಳ ರಕ್ಷಣಾ ನೀತಿಯಡಿಯಲ್ಲಿ ಪ್ರತಿ ಸಂಸ್ಥೆಯು ಸಹ "ಮಕ್ಕಳ ರಕ್ಷಣಾ ಸಮಿತಿ"ಗಳನ್ನು ರಚಿಸತಕ್ಕದ್ದು, ಈ ಸಮಿತಿಯ ಅಧ್ಯಕ್ಷರು, ಆ ಶೈಕ್ಷಣಿಕ ಸಂಸ್ಥೆಯ ಮುಖೋಪಾಧ್ಯಾಯರು, ಈ ಸಮಿತಿಗೆ ಅಧ್ಯಕ್ಷರಾಗಿದ್ದು, ಕಾರ್ಯದಶರ್ಿಗಳಾಗಿ ಒಬ್ಬ ಶಿಕ್ಷಕ,ಶಿಕ್ಷಕಿಯನ್ನು ನೇಮಿಸತಕ್ಕದು. ಈ ಸಮಿತಿಯಲ್ಲಿ ಪ್ರತಿ ತರಗತಿಯಿಂದ ಒಬ್ಬ ಮಕ್ಕಳ ಪ್ರತಿನಿಧಿಯನ್ನು, ವಾರ್ಡನ, ಭದ್ರತಾ ಸಿಬ್ಬಂದಿಯ ಪ್ರತಿನಿಧಿ ಮತ್ತು ಪಾಲಕರ ಒಬ್ಬ ಪ್ರತಿನಿಧಿಯನ್ನು ಒಳಗೊಂಡಿರತಕ್ಕದ್ದು. ಶೈಕ್ಷಣಿಕ ಸಂಸ್ಥೆಯಲ್ಲಿ ಯಾರೇ ಅಧಿಕಾರಿ, ಸಿಬ್ಬಂದಿ ಅಥವಾ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಮಕ್ಕಳಿಗೆ ಕಿರುಕುಳ, ಶೋಷಣೆ, ದೌರ್ಜನ್ಯವೆಸಗಿದ್ದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸುರಕ್ಷತಾ ಸಮಿತಿಯ ಕಾರ್ಯದಶರ್ಿ ಅಥವಾ ಅಧ್ಯಕ್ಷರು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸತಕ್ಕದ್ದು. ಈ ಸಮಿತಿಗೆ ಅಥವಾ ವಿದ್ಯಾಥರ್ಿಗಳಿಗೆ ಕಾನೂನು ನೆರವು ಅವಶ್ಯವಿದ್ದಲ್ಲಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಅಗತ್ಯ ನೆರವನ್ನು ನೀಡಲಾಗುವದು ಎಂದುಹಿರಿಯ ಸಿವ್ಹಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ ಅವರು ಹೇಳಿದರು.
ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ವಿಭಾಗೀಯ ಸಂಯೋಜಕ ಕಾಯರ್ಾಗಾರದ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್ರವರು ಮಾತನಾಡಿ, ಈ ದೇಶದಲ್ಲಿ ಜನಿಸಿರುವ ಪ್ರತಿಯೊಂದು ಮಾನವ ಜೀವಿಯು ಸಹ, ಈ ದೇಶದ ಪ್ರಜೆಯಾಗಿರುತ್ತಾರೆ. ಆದ್ದರಿಂದ ಇಂದಿನ ಮಕ್ಕಳು, ಇಂದಿನ ಪ್ರಜೆಗಳಾಗಿದ್ದು, ಮಕ್ಕಳನ್ನುದ್ದೇಶಿಸಿ ಇಂದಿನ ಮಕ್ಕಳು, ನಾಳಿನ ಪ್ರಜೆಗಳು ಎನ್ನುವಂತಿಲ್ಲಾ ಎಂದು ಸವರ್ೊಚ್ಛ ನ್ಯಾಯಾಲಯವು ನಿದರ್ೇಶಿಸಿದೆ ಎಂದು ತಿಳಿಸಿದರು. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015 ರನ್ವಯ, 18 ವರ್ಷದೊಳಗಿನವರೆಲ್ಲರೂ ಮಕ್ಕಳು ಎಂದು ಪರಿಗಣಿತವಾಗಿರುತ್ತಾರೆ. ಈ ಪ್ರಜೆಗಳ ಹಕ್ಕುಗಳ ಸಂರಕ್ಷಣೆಗಾಗಿ ಮತ್ತು ಮಕ್ಕಳ ಮೇಲಾಗುವ ಶೋಷಣೆಯನ್ನು ತಪ್ಪಿಸಲು ಸರಕಾರವು ಹಲವಾರು ಕಾನೂನು ಮತ್ತು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಪ್ರಮುಖವಾದವುಗಳು, ಬಾಲಕಾಮರ್ಿಕ ಪದ್ಧತಿ ನಿಷೇಧ ಮತ್ತು ಹದಿಹರೆಯದ ಮಕ್ಕಳ ದುಡಿಮೆ ನಿಯಂತ್ರಣ ತಿದ್ದುಪಡಿ ಕಾಯ್ದೆ-2016, ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತಯ ರಕ್ಷಣೆ) ಕಾಯ್ದೆ-2015 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಎಂದು ತಿಳಿಸುತ್ತಾ, ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು.
ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಸಂಯೋಜಕ ಹರೀಶ ಜೋಗಿ ಅವರು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರವ್ಮದ ಅಧ್ಯಕ್ಷೆಯನ್ನು ಟಣಕನಕಲ್ಲ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮಂಜುನಾಥ, ವಹಿಸಿದ್ದರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ, ದೇವರಾಜ್ ತಿಲಗರ, ಪ್ರತಿಭಾ, ಮೊರಾಜರ್ಿ ದೇಸಾಯಿ ವಸತಿಸಹಿತ ಶಾಲೆಯ ಶಿಕ್ಷಕರು, ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಮಕ್ಕಳ ಭಾಗವಹಿಸಿದ್ದರು.