ಲೋಕದರ್ಶನ ವರದಿ
ಬೆಳಗಾವಿ,7: ಕನರ್ಾಟಕ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ "ಟುವಡ್ಸರ್್ ಇಕ್ವಾ ್ಯಲಿಟಿ: ಥಿಂಕ್ ಇಕ್ವ್ಲ್, ಬಿಲ್ಡ್ ಸ್ಮಾರ್ಟ, ಇನ್ನೋವೇಟ್ ಫಾರ್ ಚೇಂಜ್ ವಿಷಯ ಕುರಿತು ದಿನಾಂಕ: 08 ರಂದು ಒಂದು ದಿನದ ವಿಚಾರ ಸಂಕಿರ್ಣವನ್ನು ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಭಾರತೀಯ ಸಮಾಜಶಾಸ್ತ್ರೀಯ ಸಮಿತಿ, ನವದೆಹಲಿಯ ಅಧ್ಯಕ್ಷರಾದ ವಿಶ್ರಾಂತ ಪ್ರೊ.ಆರ್.ಇಂದಿರಾ ಸಮಾಜಶಾಸ್ತ್ರ ವಿಭಾಗ, ಮೈಸೂರು ಅವರು ಆಗಮಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಕೆ. ಪಂಚರತ್ನಾ ಪ್ರಾಣಿಶಾಸ್ತ್ರ ವಿಭಾಗ, (ವಿಜ್ಞಾನ) ಡೀನ್ ಕವಿವಿ ಮತ್ತು ಪ್ರೊ.ರಂಜನಾ ಗೋಧಿ, ವಿಶ್ರಾಂತ ಪ್ರೊ. ಸಮಾಜಶಾಸ್ತ್ರ ವಿಭಾಗ ಲಿಂಗರಾಜ್ ಕಾಲೇಜ ಬೆಳಗಾವಿ ಹಾಗೂ ಅಧ್ಯಕ್ಷತೆಯನ್ನು ಡಾ.ಶೌಕತ್ ಅಝೀಮ, ಸಮಾಜಶಾಸ್ತ್ರ ವಿಭಾಗ, ಕವಿವಿ ಮತ್ತು ಮನಶಾಸ್ತ್ರ ವಿಭಾಗದ, ಸಮಾಜ ವಿಜ್ಞಾನ ಡೀನ್ ಪ್ರೊ.ವಿಜಯಲಕ್ಷ್ಮಿ ಅಮ್ಮಿನಭಾವಿ ಭಾಗವಹಿಸಲಿದ್ದಾರೆ.
ವಿಚಾರ ಸಂಕಿರ್ಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆ ಜಂಟಿ ನಿದರ್ೇಶಕರಾದ ಡಾ.ನೀಲಾಂಬಿಕಾ ಪಟ್ಟಣಶೆಟ್ಟಿ, ಹಾಗೂ ಕುಲಸಚಿವರಾದ ಪ್ರೊ.ಸಿ.ಬಿ.ಹೊನ್ನು ಸಿದ್ಧಾರ್ಥ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳಾ ಸಾಧಕರನ್ನು ಸನ್ಮಾನಿಸಲಾಗುವುದು. ಕುಲಪತಿ ಪ್ರೊ. ಪ್ರಮೋದ ಭೀ. ಗಾಯಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಕವಿವಿ ಮಹಿಳಾ ಸಂಶೋಧನಾ ಅಧ್ಯಯನ ಕೇಂದ್ರದ ನಿದರ್ೇಶಕರಾದ ಪ್ರೊ. ಶಕುಂತಲಾ ಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.