ಮಾನವ ಜನ್ಮ ಅಮೂಲ್ಯವಾದುದ್ದು ಹಾಳುಗೆಡುವದಿರಿ: ತುಕಾರಾಮ

ಲೋಕದರ್ಶನ ವರದಿ

ತಾಳಿಕೋಟೆ,  ಕುರಾನ್, ಬೈಬಲ್, ಭಗವದ್ಗೀತೆ ಈ ಎಲ್ಲ ಗ್ರಂಥಗಳನ್ನು ಓದಿದಾಗ ಅದರಲ್ಲಿ ಹೇಳುತ್ತಿರುವದೇನೆಂದರೆ ಮಾನವ ಜನ್ಮ ಅಮೂಲ್ಯವಾದುದ್ದು ಅದನ್ನು ಹಾಳು ಗೆಡುವದು ಬೇಡಾ ಎಂಬುದಾಗಿದ್ದು ಈ ಗ್ರಂಥಗಳ ಸತ್ಯಾ ಸತ್ಯತೆಯಿಂದ ನಡೆದರೆ ಜೀವನ ಸಾರ್ಥಕವಾಗಲಿದೆ ಎಂದು ವೈಧ್ಯಕೀಯ ಶಿಕ್ಷಣ ಸಚಿವ ತುಕಾರಮ ನುಡಿದರು ಸಮಿಪದ ಮೂಕೀಹಾಳ ಗ್ರಾಮದ ಶ್ರೀ ಲಾಡ್ಲೇಮಶಾಕ ದಗರ್ಾದ ಜಾತ್ರೋತ್ಸವ ಅಂಗವಾಗಿ ಕನ್ನಡ ಜಾಪದ ಪರಿಷತ್ ಬೆಂಗಳೂರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಜಾನಪದ ಉತ್ಸವ, ಉಚಿತ ಆರೋಗ್ಯ ತಪಾಸಣಾ ಶಿಭಿರದ ಕಾರ್ಯಕ್ರಮನ್ನು ಚಿನ್ನದ ಬೆಳೆ ಎಂದು ಕರೆಯಲಾಗುತ್ತಿರುವ ಬಿಳಿ ಜೋಳವನ್ನು ಗಡಿಗೆಗೆ ತುಂಬುವ ಮೂಲಕ ಉದ್ಘಾಟಿಸಿ ಮಾತನಾಡಿದರು. 

ನಮ್ಮ ಜೀವನದ ಮೌಲ್ಯದ ವಿಚಾರಗಳನ್ನು ಬಿಟ್ಟು ನಾವು ಯಾವ ರೀತಿ ಬಧುಕುತ್ತಿದ್ದೇವೆಂಬುದು ಅರಿವುದು ಅಗತ್ಯವಾಗಿದೆ ಪಾಲಕರ ಸಲಹೆ ಗುರುವಿನ ಆಸರ ಇಲ್ಲದೇ ಗುರಿ ಇಲ್ಲದೇ ಹೊರಟಿರುವ ನಮಗೆ ಏಚ್ಚರಿಸುವ ಕಾರ್ಯ ಹಿಂದಿನ ಕಾಲದಿಂದ ಸಾಗಿಬಂದಂತಹ ಜಾನಪದ ಹಾಡುಗಳಲ್ಲಿ ಅಳವಡಿಸಲಾಗಿದೆ ಎಂದರು. ಹಾಡುಗಳಲ್ಲಿ ಜೀವನದ ಮೆಟ್ಟಿಲುಗಳಿವೆ ಎಂದು ಹೇಳಿದ ಸಚಿವ ತುಕಾರಾಮ ಸ್ವಾತಂತ್ರ್ಯ ತಂದಿರುವದು ಜಾತಿಯತೆಯಿಂದಲ್ಲಾ ಎಲ್ಲರೂ ಒಂದಾಗಿ ಸ್ವತಂತ್ರ ತಂದುಕೊಟ್ಟಿದ್ದಾರೆ ಅಲ್ಲದೇ ಸಂವಿದಾನವನ್ನು ಮಾಡಿಕೊಟ್ಟಿರುವದು ಸಂತಸದ ವಿಷಯ ಎಂದರು. ದೇಶ ಅಭಿವೃದ್ದಿಯತ್ತ ಕೊಂಡುಯುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಪ್ರಕೃತಿಗೆ ಹೊಂದಿಕೊಂಡು ಮಾನವೀತೆ ತೋರುವ ರಾಜಕಾರಣಿಯನ್ನು ಆಯ್ಕೆ ಮಾಡಬೇಕೆಂದರು. ನಾನು ಸಚಿವನಾಗಿದ್ದೇನೆಂಬ ಅಹಂಕಾರ ನನ್ನಲ್ಲಿಲ್ಲಾ ಅಂತಹ ಅಹಂಕಾರದಿಂದ ಮಾತನಾಡುತ್ತಿಲ್ಲಾ ಎಂದ ಸಚಿವರು ಕೇರಳದ ರಾಜಕೀಯ ಪ್ರಜಾಪ್ರಭುತ್ವದ ವ್ಯವಸ್ಥೆ ಯಾವ ರೀತಿಯಾಗಿ ಪ್ರಾಮಾಣಿಕವಾಗಿ ನಡೆದಿದೆ ಎಂಬುದರ ಕುರಿತು ವಿವರಿಸಿದ ಅವರು ಅಲ್ಲಿಯ ಜನರು ಮತದಾರರು ರಾಜಕಾರಣಿಗಳಿಗೆ ಏಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದ್ದಾರೆಂದರು. ಜ್ಯಾತ್ಯಾತೀತ ನಿಲುವು ಮೇಲೆ ನಾವು ಕೆಲಸ ಮಾಡುತ್ತಾ ಸಾಗುತ್ತೇವೆ ನನಗೆ ಸಚಿವ ಸ್ಥಾನ ನೀಡಿ ಖಾತೆ ನೀಡಲಾಗಿದೆ ಅದು ಮಾತಾಪಿತರ ತಮ್ಮಲ್ಲರ ಆಶಿವರ್ಾದದ ಫಲವೇ ಕಾರಣವಾಗಿದೆ ಎಂದು ಭಾಷಣದುದ್ದಕ್ಕೂ ಹಜರತ್ ಲಾಡ್ಲೇಮಶಾಕ ಅವರ ದಗರ್ಾದಲ್ಲಿ ನಡೆಯುತ್ತಿರುವ ಜಾತ್ರೋತ್ಸವ ಕುರಿತು ಹರ್ಷವ್ಯಕ್ತಪಡಿಸಿದರು. 

ಅಧ್ಯಕ್ಷತೆ ವಹಿಸಿದ ಜೆಡಿಎಸ್ ಧುರಿಣ ಸೋಮನಗೌಡ(ಅಪ್ಪು) ಮನಗೂಳಿ ಮಾತನಾಡಿ ಮೂಕ ಇದ್ದವರನ್ನು ಮಾತನಾಡುವ ಧರ್ಮ ಮೂಕೀಹಾಳ ಗ್ರಾಮದ ದಗರ್ಾದಲ್ಲಿ ಕಂಡುಬರುತ್ತಲಿದೆ ಇಂದಿನ ಈ ಮಹತ್ವದ ಕಾರ್ಯಕ್ರಮವನ್ನು ನೋಡಿದಾಗ ಹಿಂದೂ-ಮುಸ್ಲಿಂ ಬಾಂದವರು ಒಂದಾಗಿ ಏಕತೆಯಿಂದ ಸಾಗುವದರೊಂದಿಗೆ ಈ ಜಾತ್ರೋತ್ಸವದಲ್ಲಿ ಕೋಮು ಸೌಹಾರ್ದತೆ ಮೂಡಿಸುವ ಕಾರ್ಯ ಇಲ್ಲಿ ನಡೆಯುತ್ತಾ ಸಾಗಿದೆ ಎಂಬುದು ಕಾಣುತ್ತಲಿದೆ ಎಂದರು. 

ಅತಿಥಿ ಹಿಟ್ನಳ್ಳಿಯ ಕೃಷಿ ವೀವಿಯ ಕೃಷಿ ವಿಸ್ತರಣಾಧಿಕಾರಿ ಆರ್.ಬಿ.ಬೆಳ್ಳಿ ಮಾತನಾಡಿ ದೇಶ ಕಾಯುವ ರಕ್ಷಕ, ಅನ್ನ ನೀಡುವ ಅನ್ನದಾತ ರೈತ, ಜಾನಪದ ಸಾಹಿತ್ಯ ಕೃಷಿ ಎಂಬವುಗಳಿಗೆ ಅತೀವ ಸಂಬಂದವಿದೆ ರೈತ ಬಿತ್ತುವಾಗ ತೂರುವಾಗ ಅದರಂತೆ ಮಹಿಳೆ ಬೀಸುವ ಹಾಡನ್ನೂ ಸಹ ಜಾನಪದ ಹಾಡನ್ನು ಹಾಡುತ್ತಾ ತಮ್ಮ ಶ್ರಮವನ್ನು ಹಿಂದಕ್ಕೆ ಕೆಡುವ ಕಾರ್ಯ ಈ ಹಿಂದೆ ಮಾಡುತ್ತಾ ಸಾಗಿಬಂದಿದ್ದರೆಂದು ಜಾನಪದಗಳ ಕುರಿತು ವಿವರಿಸಿದರು ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಕನ್ನಡ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿದರು.

ಸಾನಿದ್ಯವಹಿಸಿದ ಇಟಗಿ ಭೂಕೈಲಾಸ ಮೇಲ ಗದ್ದುಗೆಗೆಯ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತವೀರ ಶಿವಾಚಾರ್ಯರು ಆಶಿರ್ವಚನ ವಿತ್ತರು. ವೇದಿಕೆಯ ಮೇಲೆ ತಾಪಂ ಸದಸ್ಯ ಗೌಡಪ್ಪಗೌಡ ಮುದ್ದೇಬಿಹಾಳ, ಡಾ.ಸಂದೀಪ ಪಾಟೀಲ, ಡಾ.ಮಾರುತಿ ಕೋಳಿ, ಡಾ.ವಿಜಯಕುಮಾರ ಭಾವಿ, ಡಾ.ಮಂಜುನಾಥ, ಡಾ.ಆರ್.ಎಂ.ಕೋಳ್ಯಾಳ, ಡಾ.ಈರಘಂಟೆಪ್ಪ ತಳ್ಳೊಳ್ಳಿ, ಜೆಡಿಎಸ್ ತಾಲೂಕಾ ಅಧ್ಯಕ್ಷ ಈರಸಂಗಪ್ಪಗೌಡ ಪಾಟೀಲ, ಗೈಬೂಸಾ ಮಕಾಂದಾರ, ಜಾತ್ರಾ ಕಮಿಟಿ ಅಧ್ಯಕ್ಷ ಕೆ.ಎಚ್.ಪಾಟೀಲ, ಎಚ್.ಎಸ್.ಪಾಟೀಲ, ಸಿದ್ದನಗೌಡ ಪಾಟೀಲ, ಡಿ.ಸಿ.ಬಾಬು, ಫವನ ನಾಯಕ, ಬಿ.ಎನ್.ಹಿಪ್ಪರಗಿ, ಜಿ.ಎಸ್.ಕಶೆಟ್ಟಿ, ಜಯಣ್ಣ ಸೊಂಡೂರ, ಮಲ್ಲಣ್ಣ ಹಿರೇಮಠ, ಭಜರಂಗ ಅಗರವಾಲಾ, ನ್ಯಾಯವಾದಿ ಸತ್ಯನಾರಾಯಣ, ಇಮಾಮ ಉದ್ದೀನ, ಸ್ವಾತಂತ್ರ್ಯಯೋದ ಬಿ.ಎಚ್.ಮಾಗಿ, ಮಹ್ಮದಲಿ ಜಮಾದಾರ, ಬಾಬು ಗುಡ್ನಾಳ, ಬಿ.ಎಸ್.ಇಸಾಂಪೂರ, ಗ್ರಾಂಪಂ ಅದ್ಯಕ್ಷ ಮಹ್ಮದಪಟೇಲ ಬಿರಾದಾರ, ರಜಾಕ ಕೂಚಬಾಳ, ಬಾಬು ಮೋಕಾಶಿ ಮೊದಲಾದವರು ಉಪಸ್ಥಿತರಿದ್ದರು. ಆರ್.ಎಚ್.ವಾಲಿಕಾರ ನಿರೂಪಿಸಿದರು. ವಿಶ್ವನಾಥ ಗಣಾಚಾರಿ ವಂದಿಸಿದರು.