ಹುಬ್ಬಳ್ಳಿ ಅಂತರ್ಸಂಘ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ಸಂಪನ್ನ

ಹುಬ್ಬಳ್ಳಿ ಅಂತರ್ಸಂಘ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ಸಂಪನ್ನ  Hubli Inter-Association Tennis Ball Cricket Tournament successfully concluded

ಹುಬ್ಬಳ್ಳಿ 06 :  ನಗರದ ನೆಹರು ಮೇಡನ್ನಲ್ಲಿ ಹುಬ್ಬಳ್ಳಿ ಫೋಟೋ ಹಾಗೂ ವೀಡಿಯೋಗ್ರಾಫರ್ ಸಂಘ ಆಶ್ರಯದಲ್ಲಿ ಆಯೋಜಿಸಿದ್ದ ಮೂರನೇ ಆವೃತ್ತಿಯ ಅಂತರ್ಸಂಘ ವಲಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಇಂದು ಮತ್ತು ನಿನ್ನೆ ಎರಡು ದಿನಗಳ ಕಾಲ ಉತ್ಸಾಹಭರಿತವಾಗಿ ನಡೆಯಿತು. ನಗರದ ಫೋಟೋ ಹಾಗೂ ವೀಡಿಯೋಗ್ರಾಫರ್ ಸಮುದಾಯದ ಏಕತೆ, ಕ್ರೀಡಾ ಮನೋಭಾವ ಮತ್ತು ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಸಂಘದ ವಿವಿಧ ತಂಡಗಳು ಭಾಗವಹಿಸಿ ಉತ್ಸಾಹಭರಿತ ಪಂದ್ಯಗಳನ್ನು ಆಡಿದರು.

ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಹುಬ್ಬಳ್ಳಿ ಕ್ಲಿಕರ​‍್ಸ‌ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದು, ಎಮ್‌ಆರ್‌ಸಿ ವಾರಿಯರ​‍್ಸ‌ ತಂಡ ರನ್ನರ್‌-ಅಪ್ ಸ್ಥಾನ ಪಡೆದಿತು. ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಯಿತು. ಮ್ಯಾನ್ ಆಫ್ ದಿ ಸೀರೀಸ್‌: ಹೀರು ಬಸವ ಬೆಸ್ಟ ಬ್ಯಾಟ್ಸಮ್ಯಾನ್‌: ರಿತೇಶ್ ಭೋಜಗಾರ್ ಬೆಸ್ಟ ಬೋಲರ್‌: ಹೀರು ಬಸವ .ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಕಿರಣ್ ಬಾಕಳೆ, “ಈ ಪಂದ್ಯಾವಳಿ ಕೇವಲ ಕ್ರೀಡಾ ಸ್ಪರ್ಧೆಯಷ್ಟೇ ಅಲ್ಲ, ಫೋಟೋ ಹಾಗೂ ವೀಡಿಯೋಗ್ರಾಫರ್ ಸಮುದಾಯದ ಏಕತೆ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುವ ವೇದಿಕೆಯಾಗಿದೆ.

ಎಲ್ಲರೂ ತಾರತಮ್ಯವಿಲ್ಲದೆ ಒಂದೇ ಕುಟುಂಬದ ಸದಸ್ಯರಂತೆ ಆಟವಾಡಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ರಮೇಶ್ ಮಾದಪ್ಪನವರ ಭಾಗವಹಿಸಿದ್ದರು. ಜೊತೆಗೆ ಎಸ್‌ಆರ್‌ಎಂ ಶಾಮಿಯಾನ, ಸ್ಟುಡಿಯೋ 2000, ಜೈನ್ ಕಂಪ್ಯೂಟರ್, ರಾಜಧಾನಿ ಎಲೆಕ್ಟ್ರಿಕಲ್ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ದಿನೇಶ್ ದಾಬಡೆ, ಮಾಜಿ  ರವೀಂದ್ರ ಕಾಟಿಗರ್ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಅನೇಕ ಛಾಯಾಗ್ರಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪಂದ್ಯಾವಳಿ ಆಯೋಜನೆಯಲ್ಲಿ ಎಚ್ಪಿವಿಎ ಕ್ರಿಕೆಟ್ ಕಮಿಟಿ ಸದಸ್ಯರಾದ ಪವನ್ ಕಠಾರೆ, ಕಿಶನ್ ಶಾಲಗಾರ್, ವಿಜಯ್ ಪೂಜಾರಿ, ಕೃಷ್ಣ ಪೂಜಾರಿ, ರವಿ ಪಟ್ಟಣ, ರೋಷನ್ ಅಥಣಿ, ರವಿ ಕಂಡಿ, ಅಮೃತ ಅರಸಿದ್ಧ, ಕಿರಣ್ ಮೆಹರವಾಡೆ, ರಿತೇಶ್ ಭೋಜಗಾರ್, ವಿಶಾಲ್ ಪೂಜಾರಿ, ಗಣೇಶ್ ಜಿತೂರಿ, ಸಚಿನ್ ಪವಾರ್, ನಾರಾಯಣ ಜಡಿ, ಶ್ರೀನಿವಾಸ್ ಕಾಟಿಗರ್ ಹಾಗೂ ರಾಜನ್ ಮಿಚೆಲ್ ಪ್ರಮುಖ ಪಾತ್ರ ವಹಿಸಿದರು. ಪಂದ್ಯಾವಳಿ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲ ಸದಸ್ಯರು, ಆಟಗಾರರು ಹಾಗೂ ಸಹಯೋಗಿಗಳಿಗೆ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.