ಭರವಸೆ ಮನುಷ್ಯನನ್ನು ಬೆಳೆಸಿ ಬದುಕಿಸುತ್ತದೆ : ರಂಭಾಪುರಿ ಜಗದ್ಗುರುಗಳು

Hope makes a man grow and survive : Rambhapuri Jagadgurus

ಭರವಸೆ ಮನುಷ್ಯನನ್ನು ಬೆಳೆಸಿ ಬದುಕಿಸುತ್ತದೆ : ರಂಭಾಪುರಿ ಜಗದ್ಗುರುಗಳು 

ರಾಣೇಬೆನ್ನೂರು 01: ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಭರವಸೆ ಮನುಷ್ಯನನ್ನು ಬೆಳೆಸಿ ಬದುಕಿಸುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಶನಿವಾರ ರಾತ್ರಿ ನಗರ ಹೊರ ವಲಯದ  ಹಿರೇಮಠದಲ್ಲಿ ಜರುಗಿದ ಮನುಕುಲ ಸದ್ಭಾವನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಸುಂದರವಾಗಿ ಅಲಂಕಾರ ಮಾಡಿದ ಸುಳ್ಳಿಗಿಂತ ಹರಿದ ಬಟ್ಟೆಯ ಸತ್ಯವೇ ಹೆಚ್ಚು ಶಕ್ತಿಶಾಲಿ. ಕೈಗೆತ್ತಿಕೊಂಡ ಕೆಲಸವನ್ನು ಪೂರ್ಣ ಮನಸ್ಸಿನಿಂದ ನೆರವೇರಿಸುವುದು ಬಹಳಷ್ಟು ಮುಖ್ಯ.  

ಬದುಕೆಂಬುದು ಕಷ್ಟ ಸುಖ ನೋವು ನಲಿವುಗಳ ಸಮ್ಮಿಶ್ರಣ. ನಮ್ಮ ಜೀವನದ ದೋಣಿಗೆ ನಾವೇ ನಾಯಕರು. ಮನುಷ್ಯ ಬದುಕಿರುವಾಗಲೇ ಸಾಯುವ ಹಾಗೆ ಮಾಡುವ ಎರಡು ಬಲವಾದ ಕಾರಣಗಳಿವೆ. ಒಂದು ಅವಮಾನವಾದರೆ ಇನ್ನೊಂದು ಅನುಮಾನ. ಸಂಪತ್ತು ಹೆಚ್ಚಿದಂತೆ ಸೌಜನ್ಯ ಗುಣ ಬೆಳೆಯಬೇಕು. ಸಜ್ಜನ ಸತ್ಪುರುಷರ ಸಂಗದಿಂದ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ನಿಷ್ಠ್ಲ್ಲ್ಖ್ಘ್ತಿಷ್ಪ ಬೋಧ ಮಾಡುವಾಗ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಎಂದರು ಹಿರೇಮಠದ ಶಿವಯೋಗಿ ಶಿವಾಚಾರ್ಯರು ಶನಿ ಕ್ಷೇತ್ರದಲ್ಲಿ ಭಕ್ತರ ಕಲ್ಯಾಣಕ್ಕಾಗಿ ಸದ್ಬಾವನಾ ಧರ್ಮ ಸಮಾರಂಭ ಸಂಯೋಜಿಸಿ ಮಾರ್ಗದರ್ಶನ ಸಂಸ್ಕಾರ ನೀಡುತ್ತಿರುವುದು ಜಗದ್ಗುರುಗಳಿಗೆ  ಸಂತೋಷ ತಂದಿದೆ ಎಂದು ತಮ್ಮ ಹರ್ಷ ವ್ಯಕ್ತ ಪಡಿಸಿ, ರೇಶ್ಮೆ ಮಡಿ, ಫಲ ಪುಷ್ಪವಿತ್ತು ಶುಭ ಹಾರೈಸಿದರು.ಸಮಾರಂಭ ಉದ್ಘಾಟಿಸಿದ ಬೆಳಗಾವಿ ಸಂಸದ,ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್‌ಅವರು, ಇಂದಿನ ವಿಜ್ಞಾನ ತಂತ್ರಜ್ಞಾನ ಪ್ರಪಂಚದಲ್ಲಿ ಮನುಷ್ಯ ಶಾಂತಿ ನೆಮ್ಮದಿಯಿಂದ ಬದುಕುವುದು ಕಷ್ಟವಾಗುತ್ತಿದೆ. 

 ಜನರು ಹಣದ ಬೆನ್ನು ಹತ್ತಿ ಸಂಸ್ಕೃತಿ ಮರೆಯುತ್ತಿದ್ದಾರೆ. ಆದರ್ಶಗಳನ್ನು ಮರೆತರೆ ಬದುಕಿಗೆ ಭವಿಷ್ಯವಿಲ್ಲ. ಇಂಥ ಸಮಾರಂಭಗಳು ಜನ ಸಮುದಾಯದಲ್ಲಿ ಶಾಂತಿ ಸಂತೃಪ್ತಿ ನೆಮ್ಮದಿ ಉಂಟು ಮಾಡುತ್ತವೆ ಎಂದರು.ಮನುಕುಲ ಸದ್ಭಾವನಾ ರಾಷ್ಟಿಯ ಪ್ರಶಸ್ತಿ 2023ಕ್ಕೆ ದಾವಣಗೆರೆ ಉದ್ಯಮಿ ಪಿ. ಶಿವಕುಮಾರ ಹಾಗೂ 2024ನೇ ಸಾಲಿನ ಪ್ರಶಸ್ತಿಗೆ ಪಾತ್ರರಾದ ಖ್ಯಾತ ಚಲನಚಿತ್ರ ನಟ ದೊಡ್ಡಣ್ಣನವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಹಿರೇಮಠದ ಶಿವಯೋಗಿ ಶಿವಾಚಾರ್ಯರು ಮಾತನಾಡಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಬೆಳೆಸುವುದೇ ನಮ್ಮ ಗುರಿಯಾಗಿದೆ. ಶಾಂತಿ ನೆಮ್ಮದಿ ಕಳೆದುಕೊಂಡ ಬದುಕಿನಲ್ಲಿ ನೆಮ್ಮದಿ ಬಂಧುಗಳ ಸಹಕಾರದಿಂದ ಬಹಳ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆದುಕೊಂಡು ಬಂದಿದೆ ಎಂದರು.  ಹಲವಾರು ಮಠಾಧೀಶರಿಗೆ ಮತ್ತು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಸಮಾರಂಭದ ನಂತರ ಶನೇಶ್ವರ ಹಿರೇಮಠದಿಂದ ಕಾರ್ತೀಕ ದೀಪೋತ್ಸವ ಸಂಭ್ರಮ ದಿಂದ  ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ದೀಪವನ್ನು ಪ್ರಜ್ವಲನಗೊಳಿಸಿದರು