ಹಾವೇರಿ ಜಿಲ್ಲಾ ವಕೀಲರ ಸಂಘದಲ್ಲಿ ತಮ್ಮ ನಿವೃತ್ತಿ ಬೀಳ್ಕೂಡುಗೆ ಸಮಾರಂಭದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಗೌರವ ಸನ್ಮಾನ
ಹಾವೇರಿ 03 :ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ, ಅಲ್ಲದೇ ವಕೀಲರು ತಮ್ಮ ವೃತ್ತಿಯಲ್ಲಿ ಅಧ್ಯಯನ ಶೀಲರಾಗಬೇಕು ಜೊತೆಗೆ ಸಮಯಕ್ಕೆ ಹೆಚ್ಚು ಬೆಲೆ ನೀಡಿ,ವೃತ್ತಿ ಅನುಭವ ಹೆಚ್ಚಿಸಿಕೊಳ್ಳುವಂತಾಗಲಿ ಎಂದು ಹಾವೇರಿ ಜಿಲ್ಲಾ ಪ್ರಧಾನ ವ ಸತ್ರ ನ್ಯಾಯಾಧೀಶರಾದ ಕೆ.ಸಿ.ಸದಾನಂದಸ್ವಾಮಿ ಅವರು ಹೇಳಿದರು.
ನಗರದ ಹಾವೇರಿ ಜಿಲ್ಲಾ ವಕೀಲರ ಸಂಘದಲ್ಲಿ ತಮ್ಮ ನಿವೃತ್ತಿ ಬೀಳ್ಕೂಡುಗೆ ಸಮಾರಂಭದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಿರಂತರವಾಗಿ ಅಧ್ಯಯನಶೀಲತೆಯಿಂದ ಬದಲಾಗುತ್ತಿರುವ ಕಾನೂನುಗಳ ತಿಳುವಳಿಕೆ ಪಡೆದು ಯಶಸ್ವಿಯಾಗಲು ಸಾಧ್ಯ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಸಮಾಜಮುಖಿ ಚಿಂತನಾಶೀಲರಾಗಬೇಕು. ನನಗೆ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ನ್ಯಾಯಾಧೀಶರಿಗೆ, ವಕೀಲರಿಗೆ ಹಾಗೂ ಕಾರ್ಯ ವೃಂದದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಮ್ಮ ಅನುಭವದ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಸ್.ಎಚ್.ಜತ್ತಿ ವಹಿಸಿದ್ದರು.ಅತಿಥಿಗಳಾಗಿ ಗೌರವಾನ್ವಿತ ಜಿಲ್ಲಾ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರುಗಳು ಹಾಜರಿದ್ದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸಿ.ಪಿ. ಜಾವಗಲ್,ಕಾರ್ಯದರ್ಶಿ ಪಿ.ಎಸ್.ಹೆಬ್ಬಾಳ,ಸಹ ಕಾರ್ಯದರ್ಶಿ ಎನ್.ಎಸ್.ಕಾಳೆ,ಸದಸ್ಯರಾದ ಎಂ.ಎಲ್,ಸೊನ್ನದ.ಆರ್.ಎಚ್.ತಂಗೊಂಡರ, ಬಿ.ಎಸ್.ಅಂಬ್ಲೇರ.ಕವಿತಾ ಕಿತ್ತೂರ.ಸಿ.ಎಸ್.ಹಿರೇಮಠ ಸೇರಿದಂತೆ ಸಂಘದ ಎಲ್ಲಾ ವಕೀಲರು,ಕಾರ್ಯವೃಂದದವರು ಪಾಲ್ಗೊಂಡಿದ್ದರು.