ಸಿರುಗುಪ್ಪ 27: ಜನಸಾಮಾನ್ಯರ ಮೂಲಭೂತ ಹಕ್ಕು ಮತ್ತು ಕರ್ತವ್ಯ ಭಾರತ ದೇಶದ ಸಂವಿಧಾನದಲ್ಲಿ ಅಳವಡಿಸಿದೆ.ಸಂವಿಧಾನದ ಆಶಯದಂತೆ ನಾವೆಲ್ಲ ನಡೆದುಕೊಂಡರೆ ದೇಶದಲ್ಲಿ ಸಮಾಜ ನಿಮರ್ಾಣ ಸುಲಭ,ಕಾರಣ ನಾವು ಸಂವಿಧಾನವನ್ನು ಗೌರವಿಸೋಣ ಎಂದು ಜಮೀನ್ದಾರ್ ಸಮುದಾಯದ ಹಿತ ಚಿಂತಕರು ಬಳ್ಳಾರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷರಾದ ಸೈಯದ್ ಮೊಹಿಯುದ್ದೀನ್ ಖಾದ್ರಿ ಸಾಹೇಬ್ ಅವರು ಅಭಿಪ್ರಾಯಪಟ್ಟರು.
ನವೆಂಬರ್ 26ಸೋಮವಾರ ಇಬ್ರಾಹಿಂ ಮಂಜಿನಲ್ಲಿಸಂವಿಧಾನ ದಿನ"ಅಂಗವಾಗಿ ಅವರು ಮಾತನಾಡಿ ಭಾರತದ ಸಂವಿಧಾನವನ್ನು ಬದಲಾವಣೆ ಮಾಡಲು ಕುತಂತ್ರ ನಡೆಸುವವರ ವಿರುದ್ಧ ಪ್ರತಿಯೊಬ್ಬ ನಾಗರಿಕರು ಹೋರಾಡಬೇಕು ಏಕೆಂದರೆ ಸ್ವಾತಂತ್ರ್ಯ,ನ್ಯಾಯ,ಸಮಾನತೆ,ಹಾಗೂ ಭಾತೃತ್ವ ಭಾವಗಳ ತಳಹದಿ ಸಮಾನ ಅವಕಾಶ ಕಲ್ಪಿಸುವ ಇದರಲ್ಲಿ ಅಳವಡಿಸಿದೆ ಎಂದರು. ಭಾರತ ಸರಕಾರ ಕ್ಷೇತ್ರ ಪ್ರಚಾರ ನಿದರ್ೆಶನಾಲಯ ಪ್ರಸಾರ ಸಚಿವಾಲಯದ ಜನಾಭಿಪ್ರಾಯ ಮುಖಂಡರಾದ ಎ ಅಬ್ದುಲ್ ನಬಿ ಅವರು ಮಾತನಾಡಿ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸಮಾನ ಜೀವನದ ಅವಕಾಶ ಸಿಗಬೇಕು.ಇದರ ಸಂಪೂರ್ಣ ಅನುಷ್ಠಾನದಿಂದ ಸಮಾಜ ನಿಮರ್ಾಣ ಸಾಧ್ಯ ಎಲ್ಲರೂ ಅಭಿವೃದ್ಧಿ ಪಥದತ್ತ ಸಾಗಬೇಕು ಭಾರತೀಯರಾದ ನಾವು ನಮ್ಮ ಸಂಸ್ಕೃತಿ ಪರಂಪರೆ ಏಕತೆ ಹಾಗೂ ವೈವಿಧ್ಯತೆಗಳ ಆಚರಣೆಗಳನ್ನು ನಿರ್ಭತಿಯಿಂದ ಮುನ್ನಡೆಸುತ್ತಿದ್ದೆವೆ ಎಂದರು.ಸಮಾಜಿಕ ಕಾರ್ಯಕರ್ತರು ಎ.ಮೊಹಮ್ಮದ್ ಇಬ್ರಾಹಿಮ್,ಎ.ಮೊಹಮ್ಮದ್ ರಫಿ, ಎ.ಮೊಹಮ್ಮದ್ ನೌಷಾದ್ ಅಲಿ,ಮತ್ತಿತರರು ಇದ್ದರು.